ವಾಲ್ಮೀಕಿ ಜನಾಂಗದ ಮೀಸಲಾತಿ ಹೋರಾಟಕ್ಕೆ ಸುದೀಪ್ ಬೆಂಬಲ

Apr 27, 2022, 8:14 PM IST

ಬೆಂಗಳೂರು (ಏ.27): ವಾಲ್ಮೀಕಿ ಸಮುದಾಯಕ್ಕೆ (Valmiki Community) ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಗೆ ನಟ ಕಿಚ್ಚ ಸುದೀಪ್ (Kiccha Sudeep) ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದು, ಮೀಸಲಾಗಿ ಪ್ರಮಾಣ ಹೆಚ್ಚಿಸಲು ತಾವೂ ಕೈಜೋಡಿಸಿರುವುದಾಗಿ ಹೇಳಿದ್ದಾರೆ.

ವಾಲ್ಮೀಕಿ ಶ್ರೀಗಳು (Valmiki Sri) ಮಾಡುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಮೀಸಲಾತಿ (Reservation Fight) ಹೋರಾಟದಲ್ಲಿ ನಾನು ನೇರವಾಗಿ ಭಾಗವಹಿಸಬೇಕಿಲ್ಲ. ಪ್ರಸನ್ನಾನಂದಪುರಿ ಸ್ವಾಮೀಜಿ ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಎಲ್ಲಿಂದ ಬೆಂಬಲ ನೀಡಬೇಕೋ ಅಲ್ಲಿಂದ ನಾನು ಬೆಂಬಲ ನೀಡುತ್ತಿರುತ್ತೇನೆ ಎಂದು ಹೇಳಿದ್ದಾರೆ.

'ನನ್ನ ಮೂರ್ತಿ ಮಾಡುವುದು ಗೊತ್ತಿದ್ದರೆ ಬೇಡ ಅಂತಿದ್ದೆ':ರಾಯಚೂರಿನಲ್ಲಿ ಕಿಚ್ಚ ಸುದೀಪ್

ರಾಯಚೂರಿನಲ್ಲಿ ನಡೆದ ಬಹಿರಂಗ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಬೆಂಬಲ ಯಾವಾಗಲೂ ಇರುತ್ತದೆ. ಹಾಗೇನಾದರೂ ಸ್ವಾಮಿಗಳು ನಾನು ಸಂಪರ್ಕದಲ್ಲಿ ಇಲ್ಲ, ನಾನು ಬೆಂಬಲ ನೀಡುತ್ತಿಲ್ಲ ಎಂದಾದಲ್ಲಿ ಮಾತ್ರವೇ ಮಾತನಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ.