Tumakuru Bus Accident: ಬಸ್ ದುರಂತ ನಡೆದ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ: ಶ್ರೀರಾಮುಲು

Mar 19, 2022, 5:58 PM IST

ತುಮಕೂರು (ಮಾ. 19): ಪಾವಗಢ ಬಸ್ ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಅತೀ ವೇಗದ ಚಾಲನೆ, ಓವರ್‌ಲೋಡ್ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. 

Tumakuru Bus Accident:ಬಸ್ ದುರಂತದಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ

ಖಾಸಗಿ ಬಸ್‌ಗಳ ಪರ್ಮಿಟ್ ರದ್ದು ಮಾಡಲಾಗುತ್ತದೆ. ಈ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಖಾಸಗಿ ಬಸ್‌ಗಳ ಅಂಧಾದರ್ಬಾರ್‌ಗೆ ಬ್ರೇಕ್ ಹಾಕುತ್ತೇವೆ. ಬಸ್ ದುರಂತದ ಬಗ್ಗೆ ತನಿಖೆಗೆ ಸೂಚಿಸಿದ್ದೇವೆ. ವರದಿ ಬರಬೇಕಿದೆ' ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.