ಎಸಿಬಿ ಅಧಿಕಾರಿಗಳು (ACB Raid) ದಾಳಿ ನಡೆಸಿದಾಗ ಕೃಷಿ ಇಲಾಖೆ (Agriculture Officer) ಅಧಿಕಾರಿ ಮನೆಯಲ್ಲಿ ಚಿನ್ನದ ಖಜಾನೆಯೇ ಸಿಕ್ಕಿದೆ. ಶಿವಮೊಗ್ಗದ (Shivamogga) ರುದ್ರೇಶಪ್ಪ ಮನೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳು ಸಿಕ್ಕಿವೆ.
ಬೆಂಗಳೂರು (ನ. 24): ಎಸಿಬಿ ಅಧಿಕಾರಿಗಳು ದಾಳಿ (ACB Raid) ನಡೆಸಿದಾಗ ಕೃಷಿ ಇಲಾಖೆ ಅಧಿಕಾರಿ ಮನೆಯಲ್ಲಿ ಚಿನ್ನದ ಖಜಾನೆಯೇ ಸಿಕ್ಕಿದೆ.
ಶಿವಮೊಗ್ಗದ ರುದ್ರೇಶಪ್ಪ ಮನೆಯಲ್ಲಿ ಚಿನ್ನ, ವಜ್ರ, ಪ್ಲಾಟಿನಂ ಆಭರಣಗಳು ಸಿಕ್ಕಿವೆ. 53 ಚಿನ್ನದ ಬಿಸ್ಕತ್, 25 ಚಿನ್ನದ ಸರ, 4 ಮಾಂಗಲ್ಯ ಸರ, 1 ಕಾಸಿನ ಸರ, 9 ಜೊತೆ ಓಲೆಗಳು, 14 ಚಿನ್ನದ ನಾಣ್ಯಗಳು, 26 ಉಂಗುರಗಳು, ಸೇರಿ 3.5 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಇಷ್ಟೇ ಅಲ್ಲ 15 ಲಕ್ಷ ರೂ ಮೌಲ್ಯದ ನಗದು ಪತ್ತೆಯಾಗಿದೆ.