ACB Raids: ಕರ್ನಾಟಕದ 78 ಕಡೆ ಎಸಿಬಿ ದಾಳಿ: ರಾಶಿ ರಾಶಿ ಹಣ, ಚಿನ್ನ ಪತ್ತೆ..!

Mar 16, 2022, 11:37 AM IST

ಬೆಂಗಳೂರು(ಮಾ.16): ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್‌ ಕೊಟ್ಟಿದೆ. ರಾಜ್ಯದ 78 ಕಡೆ ಇಂದು(ಬುಧವಾರ) ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನ ಮೂವರು ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಶಾಕ್‌ ಕೊಟ್ಟಿದ್ದಾರೆ.  ಮೂವರು ಅಧಿಕಾರಿಗಳ ಮನೆ ಕಚೇರಿ ಸೇರಿ ನಾಲ್ಕು ಕಡೆ ಎಸಿಬಿ ದಾಳಿ ನಡೆಸಿದೆ. ದಾಳಿ ವೇಳೆ ರಾಶಿ ರಾಶಿ ಹಣ, ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಬರೋಬ್ಬರಿ 100 ಅಧಿಕಾರಿಗಳು ಹಾಗೂ 300 ಸಿಬ್ಬಂದಿಯಿಂದ ರೇಡ್‌ ಮಾಡಲಾಗಿದೆ. ಅಕ್ರಮ ಸಂಪತ್ತಿನ ಬಗ್ಗೆ ಎಸಿಬಿ ಅಧಿಕಾರಿಗಳು ಜನ್ಮ ಜಾಲಾಡುತ್ತಿದ್ದಾರೆ. ದಾಳಿ ವೇಳೆ ಸಿಕ್ಕ ಹಣ, ಚಿನ್ನ, ಬೆಳ್ಳಿ ಬಗ್ಗೆ ಎಲ್ಲ ದಾಖಲೆಗಳನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. 

The Kashmir Files: ನೋಡದವರು ದೇಶ ವಿರೋಧಿಗಳು: ರೇಣುಕಾಚಾರ್ಯ