ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ಶಾಕ್ ಕೊಟ್ಟಿದೆ ಎಸಿಬಿ. ಕರ್ನಾಟಕದ 60 ಕಡೆಗಳಲ್ಲಿ ಎಸಿಬಿ ದಾಳಿ ನಡೆದಿದೆ. 100 ಅಧಿಕಾರಿಗಳು, 300 ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಂಗಳೂರು (ನ. 24): ಇಂದು ಬೆಳ್ಳಂಬೆಳಿಗ್ಗೆ ಭ್ರಷ್ಟರಿಗೆ ಶಾಕ್ ಕೊಟ್ಟಿದೆ ಎಸಿಬಿ. (ACB Raid) ಕರ್ನಾಟಕದ 60 ಕಡೆಗಳಲ್ಲಿ ಎಸಿಬಿ ದಾಳಿ ನಡೆದಿದೆ. 100 ಅಧಿಕಾರಿಗಳು, 300 ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ. ಮಂಗಳೂರು ಸ್ಮಾರ್ಟ್ ಸಿಟಿ ಇಇ ಕೆ. ಎಸ್ ಲಿಂಗೇಗೌಡ, ಮಂಡ್ಯ ಇಇ ಶ್ರೀನಿವಾಸ್ ಕೆ, ಸಕಾಲ ಎಒ ನಾಗರಾಜ್ ಮನೆ ಮೇಲೆ ದಾಳಿ ನಡೆದಿದೆ.