Jun 11, 2020, 11:19 AM IST
ಬೆಂಗಳೂರು(ಜೂ.11): ಮಹಾಮಾರಿ ಕೊರೋನಾ ಅಟ್ಟಹಾಸಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ನಲುಗಿ ಹೋಗಿದೆ. ಡೆಡ್ಲಿ ವೈರಸ್‌ಗೆ ನಗರದಲ್ಲಿಂದು ನಾಲ್ವರು ಕೊನೆಯುಸಿರೆಳೆದು ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ನಾಲ್ವರು ರೋಗಿಗಳು ಗುರುವಾರ ಕೊನೆಯುಸಿರೆಳೆದಿದ್ದಾರೆ. ಬೌರಿಂಗ್ ಆಸ್ಪತ್ರೆಯಿಂದ ಶಿಫ್ಟ್ ಆಗಿದ್ದ ಇಬ್ಬರು ಹಾಗೂ ಬೇರೆ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಆಗಿದ್ದ ಇಬ್ಬರು ಇಂದು ಸಾವನಪ್ಪಿದ್ದಾರೆ.
BBMP 95 ವಾರ್ಡ್‌ಗಳಿಗೆ ಹರಡಿದ ಕೊರೋನಾ ಸೋಂಕು..!
ಈಗಾಗಲೇ ಬೆಂಗಳೂರಿನ 95 ವಾರ್ಡ್‌ಗಳಿಗೆ ಕೊರೋನಾ ಸೋಂಕು ಹಬ್ಬಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕೊರೋನಾದಿಂದಾಗಿ ಕೊನೆಯುಸಿರೆಳೆದವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.