Aug 8, 2020, 11:55 AM IST
ಬೆಂಗಳೂರು (ಆ. 08): ಮಹಾಮಳೆ, ಪ್ರವಾಹದಿಂದ ಕರ್ನಾಟಕ ನಲುಗಿ ಹೋಗಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಮಳೆರಾಯ ರುದ್ರನರ್ತನ ಮಾಡುತ್ತಿದ್ದಾನೆ. ಎಲ್ಲೆಲ್ಲೂ ಅವಾಂತರಗಳು, ಅವ್ಯವಸ್ಥೆಯೇ ಆಗಿದೆ. ಮಳೆ ಅಬ್ಬರ ತಗ್ಗಿದ್ದರೂ ಪ್ರವಾಹ ಕಡಿಮೆಯಾಗಿಲ್ಲ. ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಬರುತ್ತಿದೆ. ಆಲಮಟ್ಟಿಯಿಂದ 1. ಲಕ್ಷ ಕ್ಯೂ. ನೀರನ್ನು ಹೊರಕ್ಕೆ ಬಿಡಲಾಗಿದೆ. ಕಾಳಿ, ಭದ್ರೆ, ಶರಾವತಿ, ಹೇಮಾವತಿ ನದಿಗಳು ಅಬ್ಬರಿಸುತ್ತಿವೆ. ಬೆಳಗಾವಿ ಜಿಲ್ಲೆ ಒಂದರಲ್ಲೇ 23 ಸೇತುವೆ ಮುಳುಗಡೆಯಾಗಿದೆ. ಹಾಸನ, ಶಿವಮೊಗ್ಗ, ಕೊಡಗಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಮೈದುಂಬಿ ಧುಮ್ಮಿಕ್ಕುತ್ತಿದೆ ಜೋಗ ಜಲಪಾತ: ಕಣ್ಮನ ಸೆಳೆಯುತ್ತಿದೆ ದೃಶ್ಯ