Oct 27, 2022, 11:20 AM IST
ಬೆಂಗಳೂರು(ಅ.27): 'ಮಾತಾಡ್ ಮಾತಾಡ್ ಕನ್ನಡ' ಯಶಸ್ಸಿನ ಬಳಿಕ ಮತ್ತೊಂದು ಕಾರ್ಯಕ್ರಮ ಆಯೋಜನೆಯಾಗಿದೆ. ನಾಳೆ(ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಅದ್ಧೂರಿ ಕಾರ್ಯಕ್ರಮ ನಡೆಯಲಿದೆ. 46 ದೇಶಗಳು, 26 ರಾಜ್ಯಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿವೆ. ಆಕಾಶ, ಜಲ, ಭೂಮಿ ಮೂರು ಕಡೆಗಳಲ್ಲೂ ಕಾರ್ಯಕ್ರಮ ನಡೆಯಲಿದೆ. ನಾಳೆಯ ಕೋಟಿ ಕಂಠಗಾಯನ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆರು ಕನ್ನಡದ ಗೀತೆಗಳನ್ನ ಹಾಡುವ ಮೂಲಕ ಕನ್ನಡಮಯ ಮಾಡಲಿದ್ದೇವೆ. ಈಗಾಗಲೇ ಒಂದು ಕೋಟಿ 12 ಲಕ್ಷ ಜನರು ನೋಂದಣಿ ಮಾಡಿದ್ದಾರೆ ಅಂತ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.