ಡೋಪಿಂಗ್‌ ಪ್ರಕರಣದಲ್ಲಿ ಹೆಚ್ಚಳ, ಭಾರತ ತಲೆತಗ್ಗಿಸುವ ಸಂಗತಿ: ಅಭಿನವ್‌ ಬಿಂದ್ರಾ

Jul 1, 2022, 4:32 PM IST

ಬೆಂಗಳೂರು (ಜು.1): ಈವರೆಗೂ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ವೈಯಕ್ತಿಕ ಸ್ವರ್ಣ ಪದಕ ಜಯಿಸಿದ ಭಾರತ ಕೇವಲ ಇಬ್ಬರು ಕ್ರೀಡಾತಾರೆಗಳ ಪೈಕಿ ಒಬ್ಬರಾದ ಮಾಜಿ ಶೂಟರ್‌ (Abhinav Bindra) ಈ ಬಾರಿ ಸಂವಾದ್‌ ವಿತ್ ಏಷ್ಯಾನೆಟ್‌ ನ್ಯೂಸ್‌ನಲ್ಲಿ (Samvad With Asianet News) ಭಾಗಿಯಾಗಿದ್ದರು. ಈ ವೇಳೆ ಸಾಕಷ್ಟು ವಿಚಾರಗಳ ಬಗ್ಗೆ ಭಾರತದ ಜನಪ್ರಿಯ ಕ್ರೀಡಾ ತಾರೆ ಮಾತನಾಡಿದರು. 

ಕ್ರೀಡೆಯಲ್ಲಿ (Sports) ಗೆಲ್ಲುವುದೇ ಎನ್ನುವುದು ಯಾವತ್ತೂ ಮುಖ್ಯವಾಗಬಾರದು. ಗೆಲ್ಲಲೇಬೇಕು ಎನ್ನುವ ಏಕಮೇವ ಉದ್ದೇಶದೊಂದಿಗೆ ನಾವು ಕ್ರೀಡೆಯನ್ನು ಆಡಲು ಇಳಿದರೆ, ಬೇರೆ ಏನನ್ನೂ ಕಲಿಯಲು ಸಾಧ್ಯವಾಗೋದಿಲ್ಲ. ಗೆಲುವು ಅನ್ನೋದು ಕ್ರೀಡೆಯಲ್ಲಿ ಇಂಪಾರ್ಟೆಂಟ್‌, ಆದರೆ ಅದೊಂದೇ ಮುಖ್ಯವಲ್ಲ. ಕ್ರೀಡೆಯಿಂದ ಸಮಾಜದಲ್ಲಿ ಆಗುವ ಬದಲಾವಣೆಯನ್ನು ನಾವು ಗಮನಿಸಬೇಕು. ಅದರೊಂದಿಗೆ ದೇಶದ ಕ್ರೀಡಾ ವಲಯದಲ್ಲಿ ಡೋಪಿಂಗ್‌ ಪ್ರಕರಣದಲ್ಲಿ ಆಗುತ್ತಿರುವ ಏರಿಕೆ ತಲೆತಗ್ಗಿಸುವ ಸಂಗತಿ ಎಂದಿದ್ದಾರೆ.

ಇಬ್ಬರು ಚಿನ್ನದ ಹುಡುಗರು... ಚೋಪ್ರಾಗೆ ಅಭಿನವ್ ವಿಶೇಷ ಗಿಫ್ಟ್!

ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಸರಿಸುಮಾರು 10 ಸಾವಿರ ಅಥ್ಲೀಟ್‌ಗಳು ಸ್ಪರ್ಧೆ ಮಾಡ್ತಾರೆ. ಇದರಲ್ಲಿ ಬಹುಶಃ 300 ಮಂದಿ ಮಾತ್ರವೇ ಸ್ವರ್ಣ ಪದಕ ಗೆದ್ದು ಮನೆಗೆ ಹೋಗ್ತಾರೆ. ಹಾಗಂತ ಉಳಿದವರು ಸೋತವರು ಎಂದರ್ಥವಲ್ಲ. ಬರೀ ಗೆಲ್ಲುವುದಕ್ಕಷ್ಟೇ ಕ್ರೀಡೆ ಸೀಮಿತವಾಗಬಾರದು ಅಂಥದ್ದೊಂದು ಕ್ರೀಡಾ ಸಂಸ್ಕೃತಿಯನ್ನು ನಾವು ನಿಜವಾಗಿಯೂ ಬೆಳೆಸಿಕೊಳ್ಳಬೇಕಿದೆ ಎಂದು ಬಿಂದ್ರಾ ಹೇಳಿದ್ದಾರೆ.