Power Lifting Athletics: ಅಂತರಾಷ್ಟ್ರೀಯ ಮಟ್ಟದಲ್ಲಿ 5 ಚಿನ್ನದ ಪದಕಗಳನ್ನು ಗೆದ್ದ ಕಿರಣ

Power Lifting Athletics: ಅಂತರಾಷ್ಟ್ರೀಯ ಮಟ್ಟದಲ್ಲಿ 5 ಚಿನ್ನದ ಪದಕಗಳನ್ನು ಗೆದ್ದ ಕಿರಣ

Suvarna News   | Asianet News
Published : Jan 09, 2022, 04:41 PM ISTUpdated : Jan 09, 2022, 04:58 PM IST

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ (Bagepalli) ಕಿರಣ್ ಕುಮಾರ್ ಬೆಂಗಳೂರಿನ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಈತ ಪವರ್‌ ಲಿಫ್ಟಿಂಗ್‌ ಅಥ್ಲೇಟ್‌ (Power Lifting Athlet) ಈತ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. 
 

ಚಿಕ್ಕಬಳ್ಳಾಪುರ (ಜ. 09):  ಜಿಲ್ಲೆಯ ಬಾಗೇಪಲ್ಲಿಯ (Bagepalli) ಕಿರಣ್ ಕುಮಾರ್ ಬೆಂಗಳೂರಿನ ನ್ಯೂ  ಹಾರಿಜನ್ ಕಾಲೇಜಿನಲ್ಲಿ ಬಿಬಿಎ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಜೊತೆಗೆ ಈತ ಪವರ್‌ ಲಿಫ್ಟಿಂಗ್‌ ಅಥ್ಲೇಟ್‌ (Power Lifting Athlet) ಈತ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಐದು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾನೆ. 

ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯೊಂದರ ಒಂದೇ ಆವೃತ್ತಿಯಲ್ಲಿ ಐದು ಚಿನ್ನದ ಪದಕಗಳನ್ನು ಗೆಲ್ಲುವುದು ಸುಲಭದ ಮಾತಲ್ಲ .ಅದಕ್ಕೆ ಕಠಿಣ ಪರಿಶ್ರಮ ಹಾಗೂ ಅಚಲ ವಿಶ್ವಾಸ ಅತಗತ್ಯ . ಪವರ್‌ ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಿದ ಐದು ರೌಂಡ್‌ನಲ್ಲೂ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇತ್ತೀಚೆಗೆ ರಷ್ಯಾದಲ್ಲಿ (Russia) ಆಯೋಜಿಸಿದ್ದ ವಿಶ್ವ ಕಪ್‌ನಲ್ಲಿ (World Cup) ಪಾಲ್ಗೊಂಡಿದ್ದ ಅವರು ಒಟ್ಟು 5 ವಿಭಾಗಗಳಲ್ಲಿ ಚಿನ್ನದ 5 ಪದಕಗಳನ್ನು ಬಾಚಿಕೊಂಡಿದ್ದಾರೆ. ಇಷ್ಟೆಲ್ಲಾ ಸಾಧನೆಯನ್ನು ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ, ಸ್ವಂತ ಅವಿರತ ಪ್ರಯತ್ನ, ಅಚಲ ನಂಬಿಕೆಯಿಂದ ಗೆಲುವು ಸಾಧಿಸಿದ್ದಾರೆ.

ಮಧ್ಯಮ ವರ್ಗದ ಕುಟುಂಬದ ಕಿರಣ್ ಕುಮಾರ್‌ ರಷ್ಯಾಗೆ ಸ್ಪರ್ಧೆಗೆ ಹೋಗಲು ಆರ್ಥಿಕ ಸಮಸ್ಯೆಯನ್ನೂ ಎದುರಿಸಿದ್ದರು . ಮನೆಯಲ್ಲಿದ್ದ ತಾಯಿಯ ಮಾಂಗಲ್ಯದ ಸರವನ್ನು ಅಡವಿಟ್ಟು ಪ್ರಯಾಣದ ವೆಚ್ಚವನ್ನು ಭರಿಸಿಕೊಂಡಿದ್ದಾರೆ . ತಾಯಿ ಸರವನ್ನು ಅಡವಿಟ್ಟು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಕಿರಣ್‌. ಕಳೆದ ನವೆಂಬರ್ 12 ರಿಂದ 14 ರವರೆಗೆ ಈ ವಿಶ್ವಕಪ್ ಎಡಬ್ಲ್ಯುಪಿಸಿ ಸ್ಮಾಟ್ ರಾ  ವಿಭಾಗದಲ್ಲಿ (ಅಂದರೆ 612.5 ಕೆ.ಜಿ) ಡಬ್ಲ್ಯುಸಿ ಓಪನ್ ಡೆಡ್‌ಲಿಫ್ಟ್ ರಾ ನಡೆದಿತ್ತು . 46 ಸದಸ್ಯ ರಾಷ್ಟ್ರಗಳ 600 ಕ್ಕೂ ಅಧಿಕ ಸ್ಪರ್ಧಿ ಈ ವಿಶ್ವ ಕಪ್‌ನಲ್ಲಿ ಪಾಲ್ಗೊಂಡಿದ್ದರು . 

ಕಿರಣ್ ಕುಮಾರ್ ತಾವು ಸ್ಪರ್ಧಿಸಿದ ಐದು ವಿಭಾಗಗಳಲ್ಲೂ ಬಂಗಾರದ ಪದಕ ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ . ತಂದೆಯನ್ನು ಕಳೆದುಕೊಂಡ ಕಿರಣ್‌ಗೆ ಏನನ್ನಾದ್ರೂ ಸಾಧಿಸಬೇಕೆಂಬ ಛಲವಿತ್ತು. ಏತನ್ಮಧ್ಯೆ ಮನೆಯಲ್ಲಿ ಬಡತನದ ಕಾರಣ ಈತನ ವಿದ್ಯಾಭ್ಯಾಸ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಡಬೇಕಾಗಿತ್ತು. ಮಠದಲ್ಲೇ ಓದಿಕೊಂಡು ಕಿರಣ್‌ ಅಮೋಘ ಸಾಧನೆ ಮಾಡಿದ್ದಾರೆ. 

06:06ಕಬ್ಬಡಿ ಟೀಮ್‌ನಲ್ಲಿ ಕೋಚ್‌ ಆಗಿ ಸೋನಿಯಾ ಮನ್ನಾ ಎದುರಿಸಿದ ಸವಾಲುಗಳೇನು
05:28IPL 2025: ಕೋಲ್ಕತಾದಲ್ಲೇ ಕೆಕೆಆರ್‌ಗೆ ಸೋಲುಣಿಸುತ್ತಾ ಆರ್‌ಸಿಬಿ?
18:46‘ಲೆಕ್ಕ’ ತಪ್ಪಿದ್ದೆಲ್ಲಿ ಭಾರತದ ಹೆಣ್ಣು ಹುಲಿ? ವಿನೇಶ್ ವಿರುದ್ಧ ನಡೆಯಿತಾ ಸಂಚು? ಏನದು ತೆರೆಯ ಹಿಂದಿನ ಸತ್ಯ?
11:33ಮುವಾಯ್ ಥಾಯ್​ ಫೈಟ್‌ನಲ್ಲಿ ಅರುಣ್ ಸಾಗರ್ ಪುತ್ರನ ಅಸಾಮಾನ್ಯ ಸಾಧನೆ..! ಥಾಯ್ಲೆಂಡ್‌ನಲ್ಲಿ ಧೂಳೆಬ್ಬಿಸ್ತಿರೋ ಭಾರತದ ಯಂಗ್​ ಫೈಟರ್​
19:35ನಿಜವಾಯ್ತು ‘ಅರ್ಚಕ’ವಾಣಿ, ಒಲಿದಳು ಮಾರಿಯಮ್ಮ ದೇವಿ! ಕರ್ನಾಟಕದ ಅಳಿಯ ಈಗ ಭಾರತ ಟಿ20 ತಂಡದ ನಾಯಕ!
44:42ವಾಣಿಜ್ಯನಗರಿಯಲ್ಲಿ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮ: ಮುಂಬೈ ಬೀದಿಗಳಲ್ಲಿ ಅಭಿಮಾನಿಗಳ ಹರ್ಷೋದ್ಘಾರ
49:08ಮುಂಬೈನಲ್ಲಿ 'ವಿಶ್ವ' ವಿಜೇತರಿಗೆ ಅದ್ಧೂರಿ ಸನ್ಮಾನ: ವಿಶ್ವಕಪ್‌ ವೀರರ 2.8 ಕಿ.ಮೀ ರೋಡ್‌ ಶೋ
20:04ಎರಡು ಅಚ್ಚರಿಯ ವಿದಾಯ..ಕಾದಿದ್ಯಾ ಮತ್ತೊಂದು ಸರ್‌ಪ್ರೈಜ್? ಸೋಲಿನೊಂದಿಗೆ ಅಂತ್ಯವಾಯ್ತಾ ಮಹೇಂದ್ರನ ಕ್ರಿಕೆಟ್ ಬದುಕು?
05:46 Druva Sarja: ಜಿಂಗಲ ಜಿಂಗಲ ಜಿಂಗಲ ಜೈ RCB ಎಂದ ಧ್ರುವ..! ಯೋಗರಾಜ್ ಭಟ್ ಬರೆದ ಹಾಡಿಗೆ ಆ್ಯಕ್ಷನ್‌ ಪ್ರಿನ್ಸ್‌ ವಾಯ್ಸ್..!
18:45Sania Mirza: ಟೆನ್ನಿಸ್ ತಾರೆಯ ಬದುಕಿನಲ್ಲಿ ಆಗಿರೋದೇನು..? ಸಾನಿಯಾ ಮಿರ್ಜಾ ಜೀವನದ ರಹಸ್ಯವೇನು..?
Read more