ಬೆಂಗಳೂರಿನ ಪ್ರತಿಷ್ಠಿತ ಸೈಂಟ್ ಜೋಸೆಫ್ ಸ್ಕೂಲ್‌ನಲ್ಲಿ 7ನೇ ವಾರ್ಷಿಕ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮದಲ್ಲಿ ಎಲ್.ಕೆ.ಜಿ, ಯು.ಕೆ.ಜಿ ಮಕ್ಕಳ ಡ್ಯಾನ್ಸ್ ಎಲ್ಲರ ಗಮನ ಸೆಳೆಯಿತು.
ಕೊರೋನಾ ನಂತರ ಎರಡು ವರ್ಷದ ಬಳಿಕ ಸೈಂಟ್ ಜೋಸೆಫ್ ಸ್ಕೂಲ್’ನಲ್ಲಿ ಕ್ರೀಡಾಕೂಟ ಜರುಗಿದ್ದು, ವಿವಿಧ ಚಟುವಟಿಕೆಗಳಲ್ಲಿ ಮಕ್ಕಳು ಭಾಗಿಯಾಗಲು ಪೋಷಕರು ಪ್ರೋತ್ಸಾಹಿಸಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ರನ್ನಿಂಗ್ ರೇಸ್ ಸೇರಿದಂತೆ ಹಲವಾರು ಕ್ರಿಡೆಗಳಲ್ಲಿ ಮಕ್ಕಳು ಭಾಗವಹಿಸಿದ್ದರು. ವಿವಿಧ ಬಗೆಯ ಆಟೋಟ ಸ್ಪರ್ಧೆಗಳು ಜರುಗಿದವು. ಆಕರ್ಷಕ ಕವಾಯತು, ಯೋಗ ಭಂಗಿಗಳ ಪ್ರದರ್ಶನ ಗಮನ ಸೆಳೆಯಿತು. ಪಾಲಕರು ಪಥ ಸಂಚಲನ ಮಾಡಿ, ಮಕ್ಕಳನ್ನು ಹುರಿದುಂಬಿಸಿದರು. ಪ್ರಾಂಶುಪಾಲ ರೋಹನ್ ಡಿ. ಅಲ್ಮೀಡಿಯಾ, ಶಿಕ್ಷಕರು ಉಪಸ್ಥಿತಿ ಇದ್ದು, ಮಾಜಿ ಹಾಕಿ ಆಟಗಾರ ಅನಿಲ್ ಅಲೆಕ್ಸಾಂಡರ್ ಹಾಗೂ ಅತಿಥಿಯಾಗಿ ಪದ್ಮಶ್ರೀ ಪುರಸ್ಕೃತ ಶೇಖರ್ ನಾಯ್ಕ ಭಾಗಿಯಾಗಿದ್ದರು.