ಸೂರ್ಯ ಶಿಕಾರಿ.. ಶುಕ್ರನ ಕಡೆ ಸಫಾರಿ.. ಮತ್ತೇನು ಮಾಡಲಿದೆ ಇಸ್ರೋ?

Aug 26, 2023, 2:46 PM IST

ಭಾರತ ಅಂತರಿಕ್ಷ ಯಾನದಲ್ಲಿ ಮಹಾಸಾಧನೆಯೊಂದನ್ನ ಮಾಡಿದೆ. ಹುಟ್ಟಿದ 50 ವರ್ಷಕ್ಕೆ ನಮ್ಮ ಇಸ್ರೋ, ಘಟಾನುಘಟಿ ದೇಶಗಳು ಕನಸು ಕೂಡ ಕಾಣಲು ಸಾಧ್ಯವಾಗದ್ದನ್ನ ಮಾಡಿ ಸಾಧಿಸಿ ತೋರಿಸಿದೆ. ಈಗಾಗ್ಲೇ ಅಮೆರಿಕಾ, ರಷ್ಯಾ ಹಾಗೂ ಚೀನಾ, ಚಂದ್ರನ ಮೇಲೆ ಸೇಫ್ ಲ್ಯಾಂಡ್ ಆಗಿದ್ವು. ಈಗ ಭಾರತ(India) ನಾಲ್ಕನೇ ದೇಶವಾಗಿ ಈ ಸಾಲಿನಲ್ಲಿ ಮಿರಮಿರ ಮಿಂಚ್ತಾ ಇದೆ. ಆದ್ರೆ ಇದು ಮೂರು ಮತ್ತೊಂದು ಸಾಧನೆ ಖಂಡಿತಾ ಅಲ್ಲ. ಹಾಗಾಗಿನೇ ಭೂಮಂಡಲವೇ ಭಾರತಕ್ಕೆ ಜೈಹೋ ಅಂತಿರೋದು. ಅಮೆರಿಕಾ ಚೀನಾ ರಷ್ಯಾಗಳೆಲ್ಲಾ ಚಂದ್ರನ ಉತ್ತರ ಧೃವದಲ್ಲಿ( North Pole) ಲ್ಯಾಂಡ್ ಆಗಿದ್ರೆ, ಭಾರತ ಮಾತ್ರ ಈ ತನಕ ಪ್ರಪಂಚ ಹಿಂದೆಂದೂ ನೋಡದೇ ಇದ್ದ ದಕ್ಷಿಣ ಧೃವದಲ್ಲಿ(South Pole) ಹೆಜ್ಜೆ ಇರಿಸಿತ್ತು. ಇದೇ ಆಗಸ್ಟ್ 23ರಂದು ಭಾರತ  ವಿಕ್ರಮ ಸಾಧನೆಯೊಂದನ್ನ ಮಾಡಿತ್ತು. ಈಗ ಚಂದ್ರನ ಅಂಗಳದಲ್ಲಿ, ರೋವರ್ ಓಡಾಡ್ತಾ ಇದೆ. ಹೆಜ್ಜೆ ಇಟ್ಟ ಕಡೆಯಲ್ಲೆಲ್ಲಾ ಇಸ್ರೋ (ISRO)ಲೋಗೋ ಹಾಗೂ ರಾಷ್ಟ್ರಲಾಂಛನದ ಮುದ್ರೆ ಒತ್ತುತ್ತಿದೆ. ಅಲ್ಲಿಗೆ, ಭಾರತದ ಈ ಮಹಾಸಾಧನೆ, ಆಚಂದ್ರಾರ್ಕವಾದ ಹಾಗೆನೇ ಅಲ್ವಾ. ಮೋದಿ ಅವರ ಈ ಮಾತಲ್ಲಿ, ಭಾರತದ ಮುಂದಿನ ಟಾರ್ಗೆಟ್ ಏನು ಅನ್ನೋದು ಸ್ಪಷ್ಟವಾಗಿ ಗೊತ್ತಾಗ್ತಾ ಇದೆ. 

ಇದನ್ನೂ ವೀಕ್ಷಿಸಿ:  ಮತ್ತೊಂದು ಸಮೀಕ್ಷೆ.. ದೇಶಕ್ಕೆ ಮತ್ತೊಮ್ಮೆ ಮೋದಿಯೇ ಸಾರ್ವಭೌಮ..!