ಶಿವಶಕ್ತಿ ಪಾಯಿಂಟ್ ನಾಮಕರಣಕ್ಕೆ ವಿವಾದವೇಕೆ..? ಮೋದಿ ಮಾತಿನಿಂದ ಶುರುವಾಗಿದ್ದೇಕೆ ಹೊಸ ವರಾತ..!

Aug 29, 2023, 9:33 AM IST

ಭಾರತ ಹಿಂದೂ ಬಹುಸಂಖ್ಯಾತ ದೇಶ. ಭಾರತದಲ್ಲಿ ದೇವಸ್ಥಾನಗಳು, ಶಕ್ತಿ ಪೀಠಗಳು ಅನೇಕ. ಭಾರತದ(India) ಆರ್ಥಿಕತೆಯಲ್ಲಿ ದೇವಸ್ಥಾನಗಳ ಪಾತ್ರ ಬಹು ದೊಡ್ಡದು. ರಾಜ ಮಹಾರಾಜರ ಕಾಲದಲ್ಲಿ ದೇವಸ್ಥಾನಗಳು ಅಂದ್ರೆ ಸಂಪತ್ತು ಇಡೋ ಖಜಾನೆ ಆಗಿತ್ತು. ದೇವರು ದೇವಸ್ಥಾನ ಹಿಂದೂಸ್ಥಾನದ ಆತ್ಮ.
ಆದ್ರೆ ಭಾರತದಲ್ಲಿ ಹಿಂದೂ ದೇವರುಗಳ ವಿಚಾರಕ್ಕೆ ವಿವಾದ ಆಗೋದೇ ಹೆಚ್ಚು, ಚಂದ್ರಯಾನವನ್ನ(Chandrayaan 3) ಶುರು ಮಾಡೋದಕ್ಕೂ ಮೊದಲು ಇಸ್ರೋ ವಿಜ್ಞಾನಿಗಳು  ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದ್ದರು, ದೇವರ ಕೃಪೆ ಬೇಡಿದ್ದರು. ಆದ್ರೆ ಇದು ಅನೇಕ ಬುದ್ದಿಜೀವಿಗಳು, ಪ್ರಗತಿಪರರ ಕೆಂಗಣ್ಣಿಗೆ ಗುರಿಯಾಗಿತ್ತು. ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದು ಮೈಲಿಗಲ್ಲು ನಿರ್ಮಿಸಿದರೂ ವಿವಾದಕ್ಕೇನು ಕಡಿಮೆ ಇಲ್ಲ. ವಿಕ್ರಮ್ ಲ್ಯಾಂಡರ್(Vikram lander) ಇಳಿದ ಜಾಗಕ್ಕೆ ಪ್ರಧಾನಿ ಮೋದಿ ಶಿವಶಕ್ತಿ ಪಾಯಿಂಟ್( Shiva Shakti point) ಎಂದು ನಾಮಕರಣ ಮಾಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಹೆಸರು ಯಾಕೆ ಅನ್ನೋ ಟೀಕೆಗಳು ಕೇಳಿಬರುತ್ತಿದೆ. ಹೊಸ ಹೆಸರನ್ನು ಇಸ್ರೋ ಸ್ವಾಗತಿಸಿದೆ. ಆದರೆ ಕಾಂಗ್ರೆಸ್ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಚಂದ್ರಯಾನ-3 ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಗ್ರೀಸ್ ದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ಮೋದಿ ಇಸ್ರೋಗೆ ಭೇಟಿ ನೀಡಿದ್ದರು. ಈ ವೇಳೆ ಮಹತ್ವದ ಮೂರು ಘೋಷಣೆ ಮಾಡಿದ್ದರು. ಇದರಲ್ಲಿ  ಭಾರತದ ದಕ್ಷಿಣ ಭಾಗದಿಂದ ಪ್ರಯಾಣ ಬೆಳೆಸಿದ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ  ಸಂಜೆ ಚಂದ್ರನ ದಕ್ಷಿಣ ಧ್ರುವವನ್ನು ಮುಟ್ಟಿದೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಯನ್ನು ಭಾರತ ಗಳಿಸಿದೆ. ಈ ವಿಕ್ರಮ… ಲ್ಯಾಂಡರ್ ಇಳಿದ ಚಂದ್ರನ ಸ್ಥಳವನ್ನು ‘ಶಿವ ಶಕ್ತಿ’ ಎಂದು ಘೋಷಿಸಿದ್ದರು. ಇದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇದನ್ನೂ ವೀಕ್ಷಿಸಿ: ಅವಾರ್ಡ್‍ಗಳ ಸರದಾರ ಅಲ್ಲು ಅರ್ಜುನ್: 20 ವರ್ಷದ ಸಿನಿ ಜರ್ನಿ..33 ಅವಾರ್ಡ್ !