Aug 24, 2023, 11:27 AM IST
ಚಂದ್ರನ ಅಂಗಳದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ನಮ್ಮ ಇಂಡಿಯಾದ ಅಚ್ಚು ಚಂದ್ರನ ಮೇಲೆ ಮೂಡಬೇಕು ಎಂಬುದು ಇಸ್ರೋ ವಿಜ್ಞಾನಿಗಳ ಕನಸಾಗಿತ್ತು. ರೋವರ್ ಲ್ಯಾಂಡ್ ಮಾಡಿದ ಬಳಿಕ ಅಶೋಕ ಚಕ್ರದ ಮುದ್ರೆಯನ್ನು ಅಲ್ಲಿ ಒತ್ತಲಾಗಿದೆ. ಈ ರೋವರ್‌ನಲ್ಲಿರುವ ಅಶೋಕ ಸ್ತಂಭದ ತ್ರಿಡಿ ಅಚ್ಚನ್ನು ಅಮೇಸ್ ಕಂಪನಿ(Amesh company) ರೆಡಿ ಮಾಡಿದೆ. ಈ ಕಂಪನಿಯ ಬ್ಯುಸಿನೆಸ್ ಹೆಡ್ ಡಾ. ವಿಶ್ವಾಸ್ ಈ ಬಗ್ಗೆ ಮಾತನಾಡಿದ್ದಾರೆ. ಇದು ಸಂಪೂರ್ಣ ಇಸ್ರೋದ ಐಡಿಯಾ ಆಗಿದೆ. ನಾವು ಕೇವಲ ಶೇಪ್‌ನನ್ನು ಮಾತ್ರ ನೀಡಿದ್ದೇವೆ. ಇದನ್ನು ನಾವು ಒಂದೂವರೆ ವರ್ಷದ ಹಿಂದೆ ಮಾಡಿದ್ದೇವೆ. ತ್ರಿಡಿ ಪ್ರಿಟಿಂಗ್ ಮೂಲಕ ಈಗಾಗಲೇ ನಾವು ಹಲವಾರು ಬಾರಿ ಈ ರೀತಿ ಕೆಲಸವನ್ನು ಮಾಡಿಕೊಟ್ಟಿದ್ದೇವೆ. ಚಂದ್ರನ ಮೇಲೆ ಚಕ್ರ ತಿರುಗಿದಾಗ, ಒಂದು ಅಚ್ಚು ಮೂಡಲಿದೆ. ಇದರಲ್ಲಿ ಒಂದರಲ್ಲಿ ಇಸ್ರೋ ಲೋಗೋ ಮತ್ತೊಂದರಲ್ಲಿ ಭಾರತದ ಅಶೋಕ ಸ್ತಂಭ ಇದೆ ಎಂದು ಡಾ. ವಿಶ್ವಾಸ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ನಮ್ಮ ರಾಕೆಟ್‌ಗಳ ಸಾಮರ್ಥ್ಯ ಅರಿತ ಇತರ ರಾಷ್ಟ್ರಗಳು ನಮ್ಮ ಬಳಿ ಬರುತ್ತಿವೆ: ವಿಜ್ಞಾನಿ ಗುರು ಪ್ರಸಾದ್