ಚಂದ್ರನ ಅಂಗಳದಲ್ಲಿ ಆಟವಾಡಲು ವಿಕ್ರಮ ಸಿದ್ಧ: ಭಾರತ ಸಾಧಿಸಿದ್ದು ಹೇಗೆ ಯಾರೂ ಮಾಡದ ದಾಖಲೆ ?

ಚಂದ್ರನ ಅಂಗಳದಲ್ಲಿ ಆಟವಾಡಲು ವಿಕ್ರಮ ಸಿದ್ಧ: ಭಾರತ ಸಾಧಿಸಿದ್ದು ಹೇಗೆ ಯಾರೂ ಮಾಡದ ದಾಖಲೆ ?

Published : Aug 23, 2023, 03:20 PM IST

ಮನುಕುಲದಲ್ಲಿ ದಾಖಲೆ ಬರೆದಿತ್ತು ಅದೊಂದು ಕ್ಷಣ!
ಅಮೆರಿಕಾದ ಸಾಹಸಕ್ಕೆ ಬೆರಗುಗೊಂಡಿತ್ತು ಜಗತ್ತು!
ಚಂದ್ರನ ಅಂಗಳದಲ್ಲಿ ಆಟವಾಡಲು ಸಿದ್ಧ ವಿಕ್ರಮ!

ಚಂದ್ರನ ಮೇಲೆ 50 ವರ್ಷಗಳ ಹಿಂದೆ ನಾಸಾ ಸಾಹಸ ನಡೆಸಿತ್ತು ಅಂತ ಅಮೆರಿಕಾ ಹೇಳುತ್ತೆ. ಆದ್ರೆ ಅದು ಸಾಹಸವೇ ಅಲ್ಲ, ಮನುಕುಲಕ್ಕೆ ಅಮೆರಿಕಾ(America) ಮಾಡಿದ ಮಹಾಮೋಸ ಅಂತ ಹೇಳೋರಾ ಸಂಖ್ಯೆ ಹೆಚ್ಚಾಗಿದೆ. ಈ ಬಗ್ಗೆ ಅನುಮಾನ ಹುಟ್ಟಿಸಿದ ಹತ್ತಾರು ಪ್ರಶ್ನೆಗಳಿಗೆ ಇವತ್ತಿನ ತನಕ ಉತ್ತರ ಕೊಡೋ ಕೆಲಸಾನಾ ಅಮೆರಿಕಾನೂ ಮಾಡಿಲ್ಲ, ನಾಸಾ ಅಂತು ಮಾಡೇ ಇಲ್ಲ. ಅದೇನೆ ಇರಲಿ ಇದೀಗ ನಮ್ಮ ಹಾರ್ಟ್ ಬೀಟ್ ನಮಗೇ ಕೇಳಿಸೋ ಕ್ಷಣದಲ್ಲಿ ನಾವಿದ್ದೀವಿ. 2019ರ ಸೆಪ್ಟೆಂಬರ್ 6ರಂದು ಉಂಟಾಗಿದ್ದ ಆ ಆಘಾತ, ಆ ಸೋಲಿನ ನೋವು, ಆ ಹತಾಶೆಯ ನೆನಪು  ಈಗಲೂ ಹಸನಾಗೇ ಇದೆ. ಆದ್ರೆ ಆ ಆಘಾತಕ್ಕೆ, ನೋವಿಗೆ, ಹತಾಶೆಗೆ ಶಾಶ್ವತ ಪರಿಹಾರ ಅಂದ್ರೆ, ಅದು ಚಂದ್ರಯಾನ 3 ಅನ್ನೋ ದಿವ್ಯೌಷಧಿ. ಚಂದ್ರಮಂಡಲದಲ್ಲಿ ಭಾರತದಿಂದ(India) ಒಂದು ಚಮತ್ಕಾರ ಆಗಿ ಬಿಡ್ಲಿ ಅಂತ,  ಪ್ರಾರ್ಥನೆ ಮಾಡದ ಭಾರತಿಯರಿಲ್ಲ.  ನಮ್ಮ ಶ್ರಮ, ನಮ್ಮ ಕಷ್ಟ ಸಾರ್ಥಕವಾಗ್ಲಿ.. ನಮ್ಮ ಕಷ್ಟಕ್ಕೆ ಫಲ ಸಿಗ್ಲಿ ಅಂತ ಕೇವಲ  ವಿಜ್ಞಾನಿಗಳು ಮಾತ್ರವೇ ಆಸೆ ಪಡ್ತಾ ಇಲ್ಲ.. ನಮ್ಮ ವಿಜ್ಞಾನಿಗಳ ಕನಸು ಈಡೇರ್ಲಿ ಅಂತ, ಜನಸಾಮಾನ್ಯರೂ ಸಹ ದೇವರ ಮೊರೆ ಹೋಗ್ತಾ ಇದಾರೆ. ಇದೇ ಬುಧವಾರ ಅಂದ್ರೆ ಆಗಸ್ಟ್ 23ನೇ ತಾರೀಖು, ಚಂದ್ರನ(Moon) ಮೇಲೆ ಭಾರತ ಹೊಸ ಇತಿಹಾಸ ನಿರ್ಮಿಸಲಿದೆ.. ಪ್ರಗ್ಯಾನ್ ರೋವರ್ ಅನ್ನು ಹೊತ್ತ ವಿಕ್ರಮ್ ಲ್ಯಾಂಡರ್(Vikram lander), ದಕ್ಷಿಣ ಧ್ರುವದ ಮೇಲೆ ಸೂರ್ಯನ ಕಿರಣಗಳು ಸ್ಪಷ್ಟವಾಗಿ ಬೀಳ್ತಿದ್ದ ಹಾಗೇ, ಸಂಜೆ 6ಗಂಟೆ 4 ನಿಮಿಷದ ವೇಳೆಗೆ, ಯಾವುದೇ ಅಡೆತಡೆ ಇಲ್ಲದೆ ನಿಧಾನವಾಗಿ ಇಳಿಯೋ ಮೂಲಕ ಇತಿಹಾಸ ನಿರ್ಮಿಸೋ ಭರವಸೆ ಮೂಡಿಸಿದೆ.

ಇದನ್ನೂ ವೀಕ್ಷಿಸಿ:  Chandrayaan 3: ಸಾಫ್ಟ್‌ ಲ್ಯಾಂಡಿಂಗ್‌ ಎಂದರೇನು? ರೋವರ್ ಕಾರ್ಯ ಹೇಗಿರಲಿದೆ, ಇಲ್ಲಿದೆ ಮಾಹಿತಿ

23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
04:24ನಾಳೆ ಖಗ್ರಾಸ ರಾಹುಗ್ರಸ್ತ ಚಂದ್ರಗ್ರಹಣ, ಬಾನಂಗಳದಲ್ಲಿ ಕೌತುಕ, ಯಾರಿಗೆಲ್ಲಾ ಅಪಾಯ?
20:18ನಿಜವಾಗಿ ಬಿಡುತ್ತಾ ಸಂಶೋಧನೆ ಹೇಳಿದ ವಿನಾಶ ಭವಿಷ್ಯ: ಕರಗುತ್ತಿದೆ ಹಿಮಾಲಯ.. ಕಾಡುತ್ತಿದೆ ಜೀವ ಭಯ!
19:41Suvarna Focus: ಜಗತ್ತನ್ನೇ ನಿಬ್ಬೆರಗಾಗಿಸಿದ ಅಂತರಿಕ್ಷ ಮಹಾಸಾಹಸ! ಭೂಮಂಡಲದ ಭವಿಷ್ಯ ಬದಲಿಸುತ್ತಾ ಆಕ್ಸಿಯೋಮ್-4?
18:40ಮರಳಿ ಧರಣಿಗೆ ಬಂದ ಸುನೀತಾ ವಿಲಿಯಮ್ಸ್: ಹೇಗೆ ನಡೆದಿತ್ತು ಗೊತ್ತಾ ಊಹಿಸಲಾಗದ ಕಾರ್ಯಾಚರಣೆ?
19:51ಸುನೀತಾ ವಿಲಿಯಮ್ಸ್ ಕಾಪಾಡಲು ಮುಂದಾದ ಎಲನ್ ಮಸ್ಕ್! ಗಗನಯಾತ್ರಿಗಳ ಜೀವ ಉಳಿಸುತ್ತಾ ಮಸ್ಕ್ ಪ್ಲಾನ್?
19:30ಇಸ್ರೋ ವಿಜ್ಞಾನಿಗಳಿಂದ ಅವಿರತ ಶ್ರಮ..! ರೋವರ್ ಜಾಗೃತವಾದರೆ ಮುಂದೇನಾಗುತ್ತೆ ಗೊತ್ತಾ..?
52:41Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ
06:22ಸೂರ್ಯನತ್ತ ಆದಿತ್ಯ L-1 ಉಡಾವಣೆ: ಬೆಂಗಳೂರು ಮೂಲದ IIA ಸಂಸ್ಥೆಯಿಂದ ಪೆಲೋಡ್‌ ತಯಾರಿಕೆ
02:50ಸೂರ್ಯನತ್ತ ‘ಆದಿತ್ಯ ಎಲ್-1’ ಉಡಾವಣೆಗೆ ಕ್ಷಣಗಣನೆ: ಶ್ರೀಹರಿಕೋಟಾದಿಂದ ರಾಕೆಟ್ ಉಡ್ಡಯನ
Read more