ಟಾಕ್ಸಿಕ್ ವರ್ಲ್ಡ್​ವೈಡ್ ರಿಲೀಸ್ ಮಾಡೋದಕ್ಕೆ ಯಶ್ ಸಜ್ಜು: 20th ಸೆಂಚುರಿ ಸ್ಟುಡಿಯೋ ಜೊತೆ ಕೈ ಜೋಡಿಸಿದ ರಾಕಿ

ಟಾಕ್ಸಿಕ್ ವರ್ಲ್ಡ್​ವೈಡ್ ರಿಲೀಸ್ ಮಾಡೋದಕ್ಕೆ ಯಶ್ ಸಜ್ಜು: 20th ಸೆಂಚುರಿ ಸ್ಟುಡಿಯೋ ಜೊತೆ ಕೈ ಜೋಡಿಸಿದ ರಾಕಿ

Published : Jan 03, 2025, 12:22 PM IST

ಕೆಜಿಎಫ್-2 ನಂತರ ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ತೆಗೆದುಕೊಂಡಿರೋ ರಾಕಿಂಗ್ ಸ್ಟಾರ್, ಇಡೀ ಪ್ರಪಂಚವೇ ತಿರುಗಿ ನೋಡುವಂಥಾ ಸಿನಿಮಾ ಮಾಡೋ ಪಣ ತೊಟ್ಟಿದ್ದಾರೆ. ಯಶ್ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಟಾಕ್ಸಿಕ್ ಈ ವರ್ಷ ಸೆಕೆಂಡ್ ಹಾಫ್​ನಲ್ಲಿ ತೆರೆಗೆ ಬರಲಿದೆ.

ಕೆಜಿಎಫ್-2 ನಂತರ ಭರ್ತಿ ಎರಡೂವರೇ ವರ್ಷಗಳ ಗ್ಯಾಪ್ ತೆಗೆದುಕೊಂಡಿರೋ ರಾಕಿಂಗ್ ಸ್ಟಾರ್, ಇಡೀ ಪ್ರಪಂಚವೇ ತಿರುಗಿ ನೋಡುವಂಥಾ ಸಿನಿಮಾ ಮಾಡೋ ಪಣ ತೊಟ್ಟಿದ್ದಾರೆ. ಯಶ್ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಟಾಕ್ಸಿಕ್ ಈ ವರ್ಷ ಸೆಕೆಂಡ್ ಹಾಫ್​ನಲ್ಲಿ ತೆರೆಗೆ ಬರಲಿದೆ. ಇನ್ನೂ ಈ ಸಿನಿಮಾವನ್ನ ಇಡೀ ವಿಶ್ವಕ್ಕೆ ತಲುಪಿಸೋದಕ್ಕೆ ರಾಕಿ ಒಂದು ಮಾಸ್ಟರ್​ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಯೋಚಿಸೋದೆಲ್ಲಾ ದೊಡ್ಡದಾಗಿ, ಯೋಜಿಸೋದು ಕೂಡ ದೊಡ್ಡದಾಗೇ.. ಸದ್ಯ ಕೆಜಿಎಫ್ ಸೀರೀಸ್ ನಂತರ ಯಶ್ ಇಷ್ಟೊಂದು ಗ್ಯಾಪ್ ತೆಗೆದುಕೊಂಡಿರೋದು ಕೂಡ ಅಂಥದ್ದೊಂದು ದೊಡ್ಡ ಪ್ಲ್ಯಾನ್ ಇಟ್ಟುಕೊಂಡೇ. 

ಟಾಕ್ಸಿಕ್ ಅನ್ನೋ ಬಿಗ್ ಬಜೆಟ್ , ಮೆಗಾಪ್ರಾಜೆಕ್ಟ್ ರೆಡಿ ಮಾಡ್ತಿರೋ ಯಶ್, ಇದರ ಮೇಕಿಂಗ್ ಬಗ್ಗೆ ಎಷ್ಟು ತಲೆಕೆಡಿಸಿಕೊಂಡಿದ್ದಾರೆ ಅನ್ನೋದು ಗೊತ್ತೇ ಇದೆ. ಕೋಟಿ ಕೋಟಿ ವೆಚ್ಚದ ಸೆಟ್​​ಗಳನ್ನ ನಿರ್ಮಿಸಿ ಹಾಲಿವುಡ್, ಬಾಲಿವುಡ್ ತಂತ್ರಜ್ಞರನ್ನ ಸೇರಿಸಿ ಶೂಟಿಂಗ್ ಮಾಡ್ತಾ ಇದ್ದಾರೆ. ಎಲ್ಲಾ ಅಂದುಕೊಂಡಂತೇ ಆಗಿದ್ರೆ 2025ರ ಏಪ್ರಿಲ್​ನಲ್ಲಿ ಟಾಕ್ಸಿಕ್ ರಿಲೀಸ್ ಆಗಬೇಕಿತ್ತು. ಆದ್ರೆ ಸದ್ಯದ ಅಪ್ಡೇಟ್​ ಪ್ರಕಾರ ಸಿನಿಮಾ 2025ರ ಸೆಕೆಂಡ್ ಹಾಫ್​ನಲ್ಲಿ ರಿಲೀಸ್ ಆಗಲಿದೆ. ಈಗಾಗ್ಲೇ ಯಶ್ ಸಿನಿಮಾದ ಗ್ಲೋಬಲ್ ರಿಲೀಸ್​ಗೂ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಹಾಲಿವುಡ್​ನ 20th ಸೆಂಚ್ಯರಿ  ಫಾಕ್ಸ್ ಸಂಸ್ಥೆ ಜೊತೆಗೆ ಮಾತುಕತೆ ನಡೀತಾ ಇದ್ದು ಟಾಕ್ಸಿಕ್ ಇಂಗ್ಲೀಶ್ ವರ್ಷನ್​ನ ವರ್ಲ್ಡ್ ವೈಡ್ ರಿಲೀಸ್ ಮಾಡಲಿಕ್ಕೆ ಪ್ಲ್ಯಾನ್ ಮಾಡ್ತಾ ಇದ್ದಾರೆ. 

ಅಸಲಿಗೆ ಟಾಕ್ಸಿಕ್ ಸಿನಿಮಾ ಭಾರತೀಯ ಭಾಷೆಗಳ ಜೊತೆಗೆ ಇಂಗ್ಲೀಶ್​ನಲ್ಲೂ ರೆಡಿಯಾಗ್ತಾ ಇದೆ. ಇಂಡಿಯನ್ ಲಾಂಗ್ವೇಜ್​ಗಳ ಒಂದು ವರ್ಷನ್​ ಜೊತೆಗೆ ಇಂಗ್ಲೀಶ್ ವರ್ಷನ್ ಪ್ರತ್ಯೇಕವಾಗಿ ಚಿತ್ರೀಕರಣ ಆಗ್ತಾ ಇದೆ. ಕೆಜಿಎಫ್​ನಿಂದ ಸಿಕ್ಕಿರೋ ಗ್ಲೋಬಲ್ ಮನ್ನಣೆಯನ್ನ ಬಳಸಿಕೊಂಡು ಇಡೀ ವಿಶ್ವಕ್ಕೆ ಟಾಕ್ಸಿಕ್ ತಲುಪಿಸಬೇಕು ಅನ್ನೋದು ಯಶ್ ಮಾಸ್ಟರ್ ಪ್ಲ್ಯಾನ್. ಯಶ್​ರ ಈ ಐಡಿಯಾಗೆ ಹಾಲಿವುಡ್ ಸ್ಟುಡಿಯೋ ಕೂಡ ಪಾಸಿಟಿವ್ ಆಗಿ ಸ್ಪಂದಿಸಿದ್ದು, ಒಂದು ದೊಡ್ಡ ಪ್ಲ್ಯಾನ್ ವರ್ಕೌಟ್ ಮಾಡಲಾಗ್ತಾ ಇದೆ. ಒಟ್ಟಾರೆ ಕೆಜಿಎಫ್ ಬಂದಾಗ ಹೇಗೆ ವಿಶ್ವವೇ ಸ್ಯಾಂಡಲ್​ವುಡ್​ ಕಡೆಗೆ ತಿರುಗಿ ನೋಡಿತ್ತೋ ಅದೇ ರೀತಿ ಟಾಕ್ಸಿಕ್ ವಿಶ್ವವನ್ನೇ ಗೆಲ್ಲೋ ಗುರಿ ಇಟ್ಟುಕೊಂಡಿದೆ. ರಾಕಿಯ ಈ ಮಹಾಸಾಹಸದತ್ತ ಎಲ್ಲರ ಕಣ್ಣು ನೆಟ್ಟಿದೆ.

04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
Read more