ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್

ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್

Published : Nov 25, 2025, 05:09 PM IST

ದರ್ಶನ್ ಪುತ್ರ ವಿನೀಶ್ ಇತ್ತೀಚಿಗೆ ತಾನು ಓದುತ್ತಿರೋ ಶಾಲೆಯ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಇದನ್ನ ಶೇರ್ ಮಾಡ್ತಾ ಇರೋ ದರ್ಶನ್ ಫ್ಯಾನ್ಸ್, ಇವನು ಅಪ್ಪನಿಗೆ ತಕ್ಕ ಮಗ, ಜೂನಿಯರ್ ದಾಸ ಅಂತಿದ್ದಾರೆ. 

ದರ್ಶನ್ (Darshan Thoogudeepa) ಪುತ್ರ ವಿನೀಶ್, ತನ್ನ ಸ್ಕೂಲ್ ನಲ್ಲಿ ಅಪ್ಪನ ಹಾಡಿಗೆ ಡ್ಯಾನ್ಸ್ ಮಾಡಿದ್ದಾನೆ. ವಿನೀಶ್ ದರ್ಶನ್ (Vineesh Darshan) ವಿಡಿಯೋ ಶೇರ್ ಮಾಡ್ತಿರೋ ದರ್ಶನ್ ಫ್ಯಾನ್ಸ್ ಜ್ಯೂನಿಯರ್ ದಾಸ ಅಂತ ಬಿರುದು ಕೊಡ್ತಾ ಇದ್ದಾರೆ. ಅಸಲಿಗೆ ಈಗಾಗ್ಲೇ ಎರಡು ಚಿತ್ರಗಳಲ್ಲಿ ನಟಿಸಿರೋ ವಿನೀಶ್ ದರ್ಶನ್ ಬಣ್ಣದ ದುನಿಯಾಗೆ ಬರೋದಕ್ಕೆ ಸಜ್ಜಾಗ್ತಾ ಇದ್ದಾನೆ.

ಜೂನಿಯರ್ ದಾಸನ ಡ್ಯಾನ್ಸ್ ಧಮಾಕಾ
ದರ್ಶನ್ ಪುತ್ರ ವಿನೀಶ್ ಇತ್ತೀಚಿಗೆ ತಾನು ಓದುತ್ತಿರೋ ಶಾಲೆಯ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಅಪ್ಪನ ಹಾಡಿಗೆ ಹೆಜ್ಜೆ ಹಾಕಿದ್ದಾನೆ. ಇದನ್ನ ಶೇರ್ ಮಾಡ್ತಾ ಇರೋ ದರ್ಶನ್ ಫ್ಯಾನ್ಸ್, ಇವನು ಅಪ್ಪನಿಗೆ ತಕ್ಕ ಮಗ, ಜೂನಿಯರ್ ದಾಸ ಅಂತಿದ್ದಾರೆ. ಮಗನ ಪರ್ಫಾರ್ಮೆನ್ಸ್​ನ ತಾಯಿ ವಿಜಯಲಕ್ಷ್ಮೀ ಕೂಡ ಕಣ್ತುಂಬಿಕೊಂಡಿದ್ದಾರೆ.

ತೂಗುದೀಪ ಕುಟುಂಬದ 3ನೇ ತಲೆಮಾರು..!

ವಿನೀಶ್​ಗೇನೂ ಬಣ್ಣದ ನಂಟು ಹೊಸತಲ್ಲ. ತಾತ ತೂಗುದೀಪ ಶ್ರೀನಿವಾಸ್ ಕನ್ನಡ ಚಿತ್ರರಂಗದ ಹೆಸರಾಂತ ಖಳನಟ. ಅಪ್ಪ ಕನ್ನಡ ಚಿತ್ರರಂಗದ ಸ್ಟಾರ್ ನಟ, ಚಿಕ್ಕಪ್ಪ ದಿನಕರ್ ಹೆಸರಾಂತ ನಿರ್ದೇಶಕ. ಇಂಥಾ ಫ್ಯಾಮಿಲಿಯ ವಿನೀಶ್​ಗೆ ಬಣ್ಣದ ಕಡೆಗೆ ಆಕರ್ಷಣೆ ಬಂದ್ರೆ ಅಚ್ಚರಿಯೇನಿಲ್ಲ.

2 ಚಿತ್ರಗಳಲ್ಲಿ ನಟಿಸಿರೋ ವಿನೀಶ್ ದರ್ಶನ್..!
ಹೌದು ವಿನೀಶ್ ದರ್ಶನ್ ಈಗಾಗ್ಲೇ ಎರಡು ಸಿನಿಮಾಗಳಲ್ಲಿ ನಟನೆ ಮಾಡಿದ್ದಾನೆ. ದರ್ಶನ್ ನಟನೆಯ ಐರಾವತ ಚಿತ್ರದ ಕೊನೆಯಲ್ಲಿ ಖಾಕಿ ತೊಟ್ಟು ಛೋಟಾ ಪೊಲೀಸ್ ಆಗಿ ಅಪ್ಪನ ಜೊತೆಗೆ ಪೋಸ್ ಕೊಟ್ಟಿದ್ದ.

ಇನ್ನೂ ಯಜಮಾನ ಚಿತ್ರದ ಹಾಡಿನಲ್ಲಿ ಅಪ್ಪನ ಜೊತೆಗೆ ಹೆಜ್ಜೆ ಹಾಕಿದ್ದ. ಆಗಲೇ ದರ್ಶನ್ ಫ್ಯಾನ್ಸ್ ದಾಸನ ಜೊತೆಗೆ ಈ ಜ್ಯೂನಿಯರ್ ದಾಸನ ಕಟೌಟ್ಸ್ ನಿಲ್ಲಿಸಿದ್ರು. ಅಪ್ಪನಂತೆಯೇ ಆಜಾನುಬಾಹು ಆಗಿರೋ ವಿನೀಶ್, ಮುಂದೆ ಸಿನಿರಂಗಕ್ಕೆ ಬಂದ್ರು ಅಚ್ಚರಿಯೇನಿಲ್ಲ. ದಾಸನ ಫ್ಯಾನ್ಸ್ ಅಂತೂ ಈತನನ್ನ ಜೂನಿಯರ್ ದಾಸ ಅಂತ ಮೆರೆಸೋದಕ್ಕೆ ಸಜ್ಜಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ನೋಡಿ..

02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
03:23ಟಾಕಿಂಗ್ ಸ್ಟಾರ್ ಸೃಜನ್​ ಲೋಕೇಶ್ ಸಿನಿಮಾದ ಸ್ಪೆಷಲ್ ಸಾಂಗ್ ಬಿಡುಗಡೆ
Read more