ರಮ್ಯಾ ಜೊತೆ ಜ್ಯುವೆಲರಿ ಶಾಪ್‌ಗೆ ಹೋದ ವಿನಯ್: ಡೇಟಿಂಗ್​ ಗಾಸಿಪ್‌ಗೆ ಉತ್ತರ ಕೊಟ್ಟ ಜೋಡಿ!

ರಮ್ಯಾ ಜೊತೆ ಜ್ಯುವೆಲರಿ ಶಾಪ್‌ಗೆ ಹೋದ ವಿನಯ್: ಡೇಟಿಂಗ್​ ಗಾಸಿಪ್‌ಗೆ ಉತ್ತರ ಕೊಟ್ಟ ಜೋಡಿ!

Published : Sep 26, 2025, 05:36 PM IST

ಇತ್ತೀಚೆಗೆ ರಮ್ಯಾ ಅಂಡ್ ವಿನಯ್ ರಾಜ್​ ಕುಮಾರ್ ಬಗ್ಗೆ ಹಬ್ಬಿರೋ ರೂಮರ್ಸ್​ ನಿಮ್ಮ ಕಿವಿಗೂ ಬಿದ್ದಿರಬಹುದು. ರಮ್ಯಾ-ವಿನಯ್ ಜೊತೆ ಜೊತೆಗೆ ಸುತ್ತಾಡೋದನ್ನ ನೋಡಿ ಇವರೇನಾದ್ರೂ ಡೇಟಿಂಗ್ ಮಾಡ್ತಾ ಇದ್ದಾರಾ ಅನ್ನೋ ಡೌಟ್ ಫ್ಯಾನ್ಸ್​ನ ಕಾಡತೊಡಗಿತ್ತು.

ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ, ದೊಡ್ಮನೆ ಹುಡ್ಗ ವಿನಯ್ ಜೊತೆ ಜೊತೆಯಾಗಿ ಓಡಾಡೋದನ್ನ ನೋಡಿ, ಇವರೇನಾದ್ರೂ ಡೇಟಿಂಗ್ ಮಾಡ್ತಿದ್ದಾರಾ ಅಂತ ಅನೇಕರು ಪ್ರಶ್ನೆ ಮಾಡಿದ್ರು. ಆ ಪ್ರಶ್ನೆಗೀಗ ಒಂದು ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ ರಮ್ಯಾ ಅಂಡ್ ವಿನಯ್. ಯೆಸ್ ಇತ್ತೀಚೆಗೆ ರಮ್ಯಾ ಅಂಡ್ ವಿನಯ್ ರಾಜ್​ ಕುಮಾರ್ ಬಗ್ಗೆ ಹಬ್ಬಿರೋ ರೂಮರ್ಸ್​ ನಿಮ್ಮ ಕಿವಿಗೂ ಬಿದ್ದಿರಬಹುದು. ರಮ್ಯಾ-ವಿನಯ್ ಜೊತೆ ಜೊತೆಗೆ ಸುತ್ತಾಡೋದನ್ನ ನೋಡಿ ಇವರೇನಾದ್ರೂ ಡೇಟಿಂಗ್ ಮಾಡ್ತಾ ಇದ್ದಾರಾ ಅನ್ನೋ ಡೌಟ್ ಫ್ಯಾನ್ಸ್​ನ ಕಾಡತೊಡಗಿತ್ತು. ಇದಕ್ಕೆ ಕ್ಲಾರಿಟಿ ಕೊಟ್ಟಿದ್ದ ರಮ್ಯಾ, ವಿನಯ್ ನನಗೆ ತಮ್ಮ ಇದ್ದಂತೆ ಅಂದಿದ್ರು.

ಇಷ್ಟು ಹೇಳಿದ ಮೇಲೂ ಗುಸು ಗುಸು ಮಾತ್ರ ಕಮ್ಮಿ ಆಗಿರಲಿಲ್ಲ. ಸೋ ಈಗ ವಿಡಿಯೋವೊಂದರ ಮೂಲಕ ಫ್ಯಾನ್ಸ್​ಗೆ ಎರಡು ಸಂದೇಶ ಕೊಟ್ಟಿದೆ ಈ ಜೋಡಿ. ಈ ವಿಡಿಯೋದಲ್ಲಿ ‘ರಿಂಗ್ ಕೊಡಿಸ್ತೀನಿ ಬಾ’ ಅಂತ ರಮ್ಯಾಗೆ ಮೆಸೇಜ್ ಮಾಡ್ತಾರೆ  ವಿನಯ್. ಆ ಬಳಿಕ ಇಬ್ಬರೂ ಜ್ಯುವೆಲರಿ ಶಾಪ್​ಗೆ ಹೋಗ್ತಾರೆ.  ರಿಂಗ್ ಹುಡುಕುವಾಗ, ‘ಯಾಕೆ ರಿಂಗ್ ಕೊಡಬೇಕು ಅಂತ ಅನಿಸಿತು’ ಅಂತ ರಮ್ಯಾ ಪ್ರಶ್ನೆ ಮಾಡ್ತಾರೆ. ಅದಕ್ಕೆ ‘ಅವಳನ್ನು ಮೀಟ್ ಮಾಡಿ ಮೂರು ವರ್ಷ ಆಯ್ತು. ಅದಕ್ಕೆ ಏನಾದರೂ ಸ್ಪೆಷಲ್ ಆಗಿ ಗಿಫ್ಟ್ ಕೊಡೋಣ ಅನಿಸಿತು’ ಅಂತಾರೆ ವಿನಯ್. ಕೊನೆಗೂ ಇಬ್ಬರೂ ಸೇರಿ ಒಂದು ರಿಂಗ್ ಫೈನಲ್ ಮಾಡ್ತಾರೆ.

ಆಗ ರಿಂಗ್ ತೋರಿಸುತ್ತಿದ್ದ ವ್ಯಕ್ತಿ, ‘ಕಂಗ್ರಾಜ್ಯುಲೇಷನ್ ಸರ್, ಕಂಗ್ರ್ಯಾಜ್ಯುಲೇಷನ್ ಮ್ಯಾಮ್’ ಅಂತ ಹೇಳ್ತಾರೆ. ಆಗ ರಮ್ಯಾ, ‘ಇವನಿಗೆ ಓಕೆ, ನನಗೆ ಯಾಕೆ’ ಅಂತಾರೆ.. ಅಲ್ಲಿಗೆ ಈ ರಿಂಗ್ ನನಗಲ್ಲ ಅಂತ ಕ್ಲಾರಿಟಿ ಕೊಡೋ ರಮ್ಯಾ, ವಿನಯ್​ ಸದ್ಯದಲ್ಲೇ ಎಂಗೇಜ್ ಆಗ್ತಾರೆ ಅನ್ನೋ ಸಂದೇಶನೂ ಕೊಟ್ಟಿದ್ದಾರೆ. ಇದೊಂದು ಜುವೆಲರಿ ಶಾಪ್ ನ ಜಾಹೀರಾತು ಆಗಿದ್ದು, ಆ ಜಾಹೀರಾತಿನ ಮೂಲಕನೇ ತಮ್ಮ ರಿಲೇಷನ್​ಶಿಪ್ ಕುರಿತ ಗಾಸಿಪ್​ಗಳಿಗೆ ಉತ್ತರ ಕೊಟ್ಟಿದ್ದಾರೆ ರಮ್ಯಾ & ವಿನಯ್. ಇವರ ಕ್ರಿಯೇಟಿವಿಟಿಯನ್ನೇನೋ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಆದ್ರೆ ವಿನಯ್ ರಿಂಗ್ ತೆಗೆದುಕೊಂಡಿದ್ದು ಯಾರಿಗೆ..? ಯಾರವಳು ದೊಡ್ಮನೆ ಸೊಸೆಯಾಗೋ ಹುಡ್ಗಿ ಅಂತ ಹೊಸ ಪ್ರಶ್ನೆ ಕೇಳಲಿಕ್ಕೆ ಶುರುಮಾಡಿದ್ದಾರೆ. 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more