ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್‌ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!

ರಿವೀಲ್ ಆಯ್ತು ವಿಜಯ್-ರಶ್ಮಿಕಾ ಪ್ರೇಮ್‌ ಕಹಾನಿ..! ದೇವರಕೊಂಡಗೆ ಖಡಕ್ ವಾರ್ನಿಂಗ್ ಕೊಟ್ಟ ನಟ..!

Published : Nov 22, 2023, 11:57 AM ISTUpdated : Nov 22, 2023, 11:58 AM IST

‘ಗೀತಾ ಗೋವಿಂದ’ ಸಿನಿಮಾದಲ್ಲಿ ವಿಜಯ್ ಹಾಗೂ ರಶ್ಮಿಕಾ ಲಿಪ್ಲಾಕ್ ಸೀನ್, ಅಲ್ಲಿಂದಾನೇ ಶುರುವಾಗಿತ್ತು ನೋಡಿ  ಇವರಿಬ್ಬರ ಪ್ರೇಮ್‌ ಕಹಾನಿ. ಆ ನಂತರ ಇದೇ  ಜೋಡಿ ‘ಡಿಯರ್ ಕಾಮ್ರೆಡ್’ ಸಿನಿಮಾದಲ್ಲಿ ನಟಿಸಿತ್ತು. ಅಲ್ಲೂ ಇವರಿಬ್ಬರ ಕಿಸ್ಸಿಂಗ್ ಸೀನ್ ನೋಡಿ ಅಭಿಮಾನಿಗಳು, ಇಲ್ಲಿ ಸಂಥಿಂಗ್.. ಸಂಥಿಂಗ್ ಇದೆ ಅಂತಾ ಹೇಳಿದ್ರು. ಆದ್ರೂ ಇವರಿಬ್ಬರೂ ಮಾತ್ರ ಎಲ್ಲೆಲ್ಲೂ ಒಪನ್ ಆಗಿ ಒಪ್ಕೊಂಡಿರ್ಲಿಲ್ಲ. ಆದರೆ ಈಗ ಇವರಿಬ್ಬರ ಪ್ರೇಮ್ ಕಹಾನಿ ಗುಟ್ಟು ರಟ್ಟು ಮಾಡಿದ್ದಾರೆ ನಟ ನಂದಮೂರಿ ಬಾಲಕೃಷ್ಣ. 

ನಟ ನಂದಮೂರಿ ಬಾಲಕೃಷ್ಣ, ನಿರೂಪಕರಾಗಿ ತೆಲುಗಿನಲ್ಲಿ ‘ಅನ್‌ಸ್ಟಾಪಬಲ್-2’ ಶೋ(Unstoppable-2 Show) ನಡೆಸಿಕೊಡುತ್ತಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ‘ಅನಿಮಲ್’ ಚಿತ್ರತಂಡ ಭಾಗಿಯಾಗಿತ್ತು. ನಟಿ ರಶ್ಮಿಕಾ ಮಂದಣ್ಣ(Rashmika) ಹಾಗೂ ನಟ ರಣಬೀರ್ ಕಪೂರ್(Ranbir kapoor) ಈ ಕಾರ್ಯಕ್ರಮದ ಸ್ಪೆಷಲ್ ಗೆಸ್ಟ್‌ಗಳಾಗಿದ್ದರು. ನಟ ನಂದಮೂರಿ ಬಾಲಕೃಷ್ಣ ಮಾತನಾಡ್ತಾ, ಗುಲಾಬಿ ಹೂವು ಕೊಟ್ಟು ರಶ್ಮಿಕಾಗೆ ಪ್ರಪೋಸ್ ಮಾಡಿದ್ದಾರೆ. ಅಷ್ಟೆ ಅಲ್ಲ ಆಕೆಯ ಫೋನ್ನಿಂದಾನೇ ವಿಜಯ್ ದೇವರಕೊಂಡಗೆ ಕಾಲ್ ಮಾಡಿಸಿದ್ದಾರೆ. ವಿಜಯ್(Vijay Deverakonda) ರಶ್ಮಿಕಾ ಕಾಲ್ಗೆ ‘ವಾಟ್ಸಪ್ರೇ’ ಎಂದು ಹೇಳುತ್ತಾರೆ. ಆಗ ರಶ್ಮಿಕಾ ಏನ್ ಹೇಳ್ಬೇಕು ಅನ್ನೊದು ಗೊತ್ತಾಗ್ದೆ ಪೇಚಾಡ್ತಿದ್ರು. ಇದೇ ಕಾರ್ಯಕ್ರಮದಲ್ಲಿ, ನಟಿ ರಶ್ಮಿಕಾಗೆ ಅನಿಮಲ್ ಹಾಗೂ ಅರ್ಜುನ್ ರೆಡ್ಡಿ ಚಿತ್ರಗಳ ಪೋಸ್ಟರ್ ತೋರಿಸಿ ಇದರಲ್ಲಿ ಯಾವುದು ಬೆಸ್ಟ್ ಎಂದು ನಂದಮೂರಿ ಬಾಲಕೃಷ್ಣ ಎಂದು ಕೇಳಿದ್ಧಾರೆ. ಹೀಗೆ ಕಾಲೆಳೆಯೋದಕ್ಕೆ ನಟ ರಣಬೀರ್ ಕಪೂರ್ ಕೂಡ ಸಾಥ್ ಕೊಟ್ಟಿದ್ದಾರೆ. ಆ ಒಂದು ಫನ್ನಿ ಮೂಮೆಂಟ್ನ್ನ ಅಲ್ಲಿದ್ದ ವೀಕ್ಷಕರೆಲ್ಲ ಎಂಜಾಯ್ ಮಾಡಿದ್ದಾರೆ. ಕೊನೆಗೆ ಡೈರೆಕ್ಟರ್ ಸಂದೀಪ್  ರೆಡ್ಡಿ ಜೊತೆ ವಿಜಯ್ದೇವರಕೊಂಡ ಮಾತನಾಡ್ತಿರುವಾಗ, ಬಾಲಯ್ಯ ‘ನಿಮ್ಮ ಹಿರೋಗೆ ಹೇಳಪ್ಪ ಐ ಲವ್ ರಶ್ಮಿಕಾ’ ಎಂದು ಹೇಳಿ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ. ಈ ಸಂಭಾಷಣೆ ಈಗ ಮತ್ತೆ ಇವರಿಬ್ಬರ ಪ್ರೇಮ್ಕಹಾನಿಗೆ ಸಾಕ್ಷಿ ಸಿಕ್ಕಂತಾಗಿದೆ. 

ಇದನ್ನೂ ವೀಕ್ಷಿಸಿ:  ತೋಳು ತಟ್ಟಿ ನಾನಾ ನೀನಾ ಎಂದ ತ್ರಿಬಲ್ ಸ್ಟಾರ್ಸ್ ! ಅಭಿಷೇಕ್, ಕೃಷ್ಣ, ರಾಜ್ ಬಿ ಶೆಟ್ಟಿ ಮಧ್ಯೆ ಮೆಗಾ ಫೈಟ್!

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more