‘ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡಿಯಲ್ಲ; ನಾನ್ ಬರ್ತಿದ್ದೀನಿ..’ ಈ ಡೈಲಾಗ್ ದರ್ಶನ್ ಪ್ರಸ್ತುತ ಸ್ಥಿತಿ ಕುರಿತಂತೆ ಬರೆದಂತಿವೆ. ನಾನು ಬಂದೇ ಬರ್ತೀನಿ ಅನ್ನೋದು ಬೇರೆಯದ್ದೇ ಸಂದೇಶ ಕೊಡ್ತಾ ಇವೆ. ಈ ಸ್ಟೋರಿ ನೋಡಿ..

ದರ್ಶನ್ ತೂಗುದೀಪ (Darshan Thoogudeepa) ನಟನೆಯ 'ದಿ ಡೆವಿಲ್' ಮೂವಿ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಇನ್ನೇನು ಸಿನಿಮಾ ತೆರೆಗೆ ಬರುವ ಮುನ್ನ ಚಿತ್ರದ ಹೈವೋಲ್ಟೇಜ್ ಟ್ರೈಲರ್ ರಿಲೀಸ್ ಆಗಿದೆ.  ದರ್ಶನ್ ಹಿಂದೆಂದೂ ಕಾಣಿಸಿದಂತಾ ಲುಕ್, ಗೆಟಪ್ಸ್ ಡೆವಿಲ್​ನಲ್ಲಿವೆ.  ದಿ ಡೆವಿಲ್ ಟ್ರೈಲರ್ನಲ್ಲಿ ದಾಸನ ದಶಾವತಾರವೇ ಇದೆ.

‘ದಿ ಡೆವಿಲ್’ ಟ್ರೈಲರ್​ನಲ್ಲಿ ದರ್ಶನ್ ದಶಾವತಾರ: ಮಾಸ್ ಲುಕ್, ಡಿಫ್ರೆಂಟ್ ಗೆಟಪ್​
ಯೆಸ್ ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಇನ್ನು ಜಸ್ಟ್ 5 ದಿನ ಬಾಕಿ ಇವೆ. ಭರ್ತಿ ಎರಡು ವರ್ಷಗಳ ಬಳಿಕ ಬಿಗ್​ಸ್ಕ್ರೀನ್ ಮೇಲೆ ಕಾಣಿಸಿಕೊಳ್ತಾ ಇರೋ ದರ್ಶನ್​ನ ನೋಡೋದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನೂ ರಿಲೀಸ್ ಹೊಸ್ತಿಲಲ್ಲಿ ‘ದಿ ಡೆವಿಲ್’  ಮೂವಿಯ ಟ್ರೈಲರ್ ರಿಲೀಸ್ ಆಗಿದ್ದು, ಫ್ಯಾನ್ಸ್ ಗೆ ಸಿನಿಮಾ ಹೇಗಿರುತ್ತೆ ಅನ್ನೋದರ ಸೂಚನೆ ಕೊಟ್ಟಿದೆ. ಸಖತ್ ರಗಡ್, ಮಾಸ್ ಎಲೆಮೆಂಟ್ಸ್ ತುಂಬಿರೋ ಟ್ರೈಲರ್​ನಲ್ಲಿ ದಾಸನ ದಶಾವತಾರ ಎದ್ದು ಕಾಣ್ತಾ ಇದೆ.

ದರ್ಶನ್ ಹಿಂದೆಂದೂ ಕಾಣಿಸಿಕೊಳ್ಳದಷ್ಟು ಡಿಫ್ರೆಂಟ್​​ ಗೆಟಪ್​ನಲ್ಲಿ, ಸೈಲಿಶ್  ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಲರ್​ಫುಲ್ ಕಾಸ್ಟೂಮ್ಸ್​ನಲ್ಲಿ ದರ್ಶನ್ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣ್ತಾ ಇದ್ದಾರೆ.

ಗುಡ್-ಬ್ಯಾಡ್-ಇವಿಲ್.. ಡಿಫ್ರೆಂಟ್ ಡೆವಿಲ್..!
ಟ್ರೈಲರ್ ನೋಡಿದವರಿಗೆ ದರ್ಶನ್ ಪಾತ್ರ ಹೇಗಿರುತ್ತೆ ಅನ್ನೋ ಸೂಚನೆ ಸಿಕ್ಕಿದೆ. ಒಂದೊಮ್ಮೆ ವಿಲನ್ ಶೇಡ್​​ನಲ್ಲಿ, ಮತ್ತೊಮ್ಮೆ  ಪ್ಲೇ ಬಾಯ್ ಆಗಿ, ಜೊತೆಗೆ ರೊಮ್ಯಾಂಟಿಕ್ ಆಗಿ ಡಿಫ್ರೆಂಟ್ ಅವತಾರಗಳಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.

ಇನ್ನೂ ಟ್ರೈಲರ್​ನಲ್ಲಿ ದರ್ಶನ್ ಜೊತೆಗೆ ನಾಯಕಿ ರಚನಾ ರೈ, ವಿಲನ್ ರೋಲ್​ನಲ್ಲಿ ಮಹೇಶ್ ಮಾಂಜ್ರೇಕರ್, ಅಚ್ಯುತ್ ರಾವ್, ವಿನಯ್ ಗೌಡ, ಕಾಮಿಡಿಯನ್ ಆಗಿ ಗಿಲ್ಲಿ ನಟ ಕೂಡ ಹೈಲೈಟ್ ಆಗಿದ್ದಾರೆ.

ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡಿಯಲ್ಲ; ನಾನ್ ಬರ್ತಿದ್ದೀನಿ.. ಫ್ಯಾನ್ಸ್​​ಗೆ ದಾಸನ ಮೆಸೇಜ್
ಯೆಸ್ ಟ್ರೈಲರ್ ನಲ್ಲಿರೋ ಕೆಲ ಡೈಲಾಗ್ಸ್ ದರ್ಶನ್ ಪ್ರಸ್ತುತ ಸ್ಥಿತಿ ಕುರಿತಂತೆ ಬರೆದಂತಿವೆ. ಸದ್ಯ ದರ್ಶನ್ ಜೈಲಿನಲ್ಲಿರೋದು ಗೊತ್ತೇ ಇದೆ. ಸೋ ಸೂರ್ಯಂಗೆ ತುಂಬ ಹೊತ್ತು ಗ್ರಹಣ ಹಿಡಿಯಲ್ಲ .. ನಾನು ಬಂದೇ ಬರ್ತೀನಿ ಅನ್ನೋದು ಬೇರೆಯದ್ದೇ ಸಂದೇಶ ಕೊಡ್ತಾ ಇವೆ.

ಒಟ್ಟಾರೆ ಡೆವಿಲ್ ಟ್ರೈಲರ್ ನೋಡ್ತಾ ಇದ್ರೆ, ಇಂದೊಂದು ಪಕ್ಕಾ ಮಾಸ್ ಮಸಾಲ ಸಿನಿಮಾ ಅನ್ನಿಸುತ್ತೆ. ದರ್ಶನ್ ಫ್ಯಾನ್ಸ್​​ಗಂತಲೇ ನಿರ್ದೇಶಕ ಪ್ರಕಾಶ್ ರೆಡಿಮಾಡಿರೋ ಪ್ಯಾಕೇಜ್ ಮೂವಿ ಅನ್ನೋ ಸೂಚನೆ ಸಿಕ್ತಾ ಇದೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...

05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
03:15ಕಾಂತಾರ ನಂತರ ಮತ್ತೆ ತೆರೆ ಮೇಲೆ ಕೊರಗಜ್ಜನ ಖದರ್: ಬಾಲಿವುಡ್ ನಟನ ದೈವ ಸಿನಿಮಾ ಹೇಗಿರುತ್ತೆ?
04:05ಸ್ಯಾಂಡಲ್‌ವುಡ್‌ನಲ್ಲಿ ಹೊಸ ಬಿರುಗಾಳಿ, ಸಿನಿ ಭಕ್ತ ಗಣದ ಮನ ಗೆದ್ದ ಮಾರುತ, ರಾಧೇಯ!
02:23Devil Movie Release: ದರ್ಶನ್‌ ತೂಗುದೀಪರನ್ನು ಗೆಲ್ಲಿಸಲು ಪಣತೊಟ್ಟ ಅಭಿಮಾನಿಗಳು
05:26ಮರ್ಯಾದೆ ಪ್ರಶ್ನೆ..? ಅಶ್ವಿನಿ ‘ಬಿಗ್’​ಡ್ರಾಮಾ: ಕಣ್ಣೀರಿಟ್ಟು ಮನೆಯಿಂದ ಹೊರಟುನಿಂತ ಅಶ್ವಿನಿ..!
Read more