ವಿಷ್ಣು ಅವಹೇಳನ ಮಾಡಿದ ತೆಲುಗು ನಟನಿಗೆ ಹುಚ್ಚ ವೆಂಕಟ್ ಖಡಕ್ ವಾರ್ನಿಂಗ್

Dec 13, 2020, 3:12 PM IST

ಹಿರಿಯ ನಟ ವಿಷ್ಣುವರ್ಧನ್ ಬಗ್ಗೆ ಟಾಲಿವುಡ್ ನಟ ವಿಜಯ್ ರಂಗರಾಜು ಅವಹೇಳನಾಕರಿಯಾಗಿ ಮಾತನಾಡಿರುವುದಕ್ಕೆ ನಟ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನನ್ ಮಗಂದ್' ಎಂದು ಎಂದಿನಂತೆ ಮಾತು ಆರಂಭಿಸಿದ ನಟ  ತೆಲುಗು ನಟನಿಗೆ ವಾರ್ನ್ ಮಾಡಿದ್ದಾರೆ.

ವಿಷ್ಣುವರ್ಧನ್ ಬಗ್ಗೆ ಅವಹೇಳನ ಮಾತು: ತೆಲುಗು ನಟನಿಗೆ ಪವರ್ ಸ್ಟಾರ್ ಖಡಕ್ ಎಚ್ಚರಿಕೆ!

ಇದು ರಂಗರಾಜು ಅವರಿಗೆ ಹೇಳುತ್ತಿರುವುದು. ಏನಂತ ಮಾತನಾಡಿದ್ದೀರಿ ವಿಷ್ಣುವರ್ಧನ್ ಬಗ್ಗೆ..? ಅವರ ಬಗ್ಗೆ ನಿಮಗೇನು ಗೊತ್ತು..? ಅವರು ಸಿನಿಮಾದಿಂದ ಮಾತ್ರ ಫೇಮಸ್ ಆಗಿದ್ದಲ್ಲ, ಅವರ ವ್ಯಕ್ತಿತ್ವದಿಂದಾನೂ ಫೇಮಸ್ ಆಗಿದ್ದಾರೆ ಎಂದಿದ್ದಾರೆ. ಹುಚ್ಚ ವೆಂಕಟ್ ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ