ಕೋಟ್ಯಂತರ ಸಿನಿ ಪ್ರೇಕ್ಷಕರ ಹೃದಯ ಸಿಂಹಾಸನದಲ್ಲಿ ಜಾಗ ಪಡೆದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ ಕಾಂತಾರ, ಇದೀಗ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೂ ಎಂಟ್ರಿ ಕೊಟ್ಟಿದೆ.
ಕಾಂತಾರ ಸಿನಿಮಾಗೆ ಸಿಕ್ಕ ಸಕ್ಸಸ್ ನೋಡಿ ನಿರ್ಮಾಪಕ ವಿಜಯ್ ಕಿರಗಂದೂರು, ಇದೀಗ ಕಾಂತಾರ ಸಿನಿಮಾವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ 2023ರ ಆಸ್ಕರ್ ಪ್ರಶಸ್ತಿಯ ರೇಸ್'ನಲ್ಲಿ ಕಾಂತಾರ ಸೇರಿಕೊಂಡಿದೆ. ಕಾಂತಾರ ದೊಡ್ಡ ಗೆಲುವು ಕಾಂತಾರ-2 ಸಿನಿಮಾಗೆ ಏಣಿ ಹಾಕಿದೆ. ಆದ್ರೆ ಈ ಸಿನಿಮಾ ಬರೋ ಬಗ್ಗೆ ರಿಷಬ್ ಶೆಟ್ಟಿ ಎಲ್ಲಿಯೂ ಕನ್ಫರ್ಮ್ ಮಾಡಿಲ್ಲ. ಬಟ್ ಈಗ ನಿರ್ಮಾಪಕ ವಿಜಯ್ ಕಿರಗಂದೂರು ಕಾಂತಾರ-2 ಸಿನಿಮಾ ಬರೋ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರೋ ವಿಜಯ್ ಕಿರಗಂದೂರು, ಕಾಂತಾರ-2 ಸಿನಿಮಾದ ಪ್ರೇಕ್ವೆಲ್ ಮಾಡಬೇಕೋ ಅಥವಾ ಸೀಕ್ವೆಲ್ ಮಾಡಬೇಕೋ ಅಂತ ರಿಷಬ್ ಶೆಟ್ಟಿ ಜೊತೆ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.