ಸಾಲು ಸಾಲು ರಜೆ ಥಿಯೇಟರ್ ಹೌಸ್‌ಫುಲ್: ರಿಷಬ್ 'ಕಾಂತಾರ'ಗೆ ಹೊಡಿತು ಜಾಕ್‌ಪಾಟ್!

ಸಾಲು ಸಾಲು ರಜೆ ಥಿಯೇಟರ್ ಹೌಸ್‌ಫುಲ್: ರಿಷಬ್ 'ಕಾಂತಾರ'ಗೆ ಹೊಡಿತು ಜಾಕ್‌ಪಾಟ್!

Published : Oct 05, 2022, 12:43 PM IST

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ದೈವವೊಂದು ಆರ್ಭಟಿಸುತ್ತಾ ಕುಣಿಯುತ್ತಿದೆ. ಈ ದೈವದ ಶಕ್ತಿ ಯಾವ ಮಟ್ಟಕ್ಕಿದೆ ಅಂದ್ರೆ 1150 ಕೋಟಿ ಗಳಿದ್ದ ಕೆಜಿಎಫ್ ಸಿನಿಮಾವನ್ನೇ ಮರೆಸುವಂತೆ ಮೆರೆದಾಡುತ್ತಿದೆ ಆ ದೈವ. ಅದುವೇ ಕಾಂತಾರ. ಒಂದ್ ಕಡೆ ದಸರಾ ಸಂಭ್ರಮ.

ಸ್ಯಾಂಡಲ್‌ವುಡ್ ಬೆಳ್ಳಿತೆರೆ ಮೇಲೆ ದೈವವೊಂದು ಆರ್ಭಟಿಸುತ್ತಾ ಕುಣಿಯುತ್ತಿದೆ. ಈ ದೈವದ ಶಕ್ತಿ ಯಾವ ಮಟ್ಟಕ್ಕಿದೆ ಅಂದ್ರೆ 1150 ಕೋಟಿ ಗಳಿದ್ದ ಕೆಜಿಎಫ್ ಸಿನಿಮಾವನ್ನೇ ಮರೆಸುವಂತೆ ಮೆರೆದಾಡುತ್ತಿದೆ ಆ ದೈವ. ಅದುವೇ ಕಾಂತಾರ. ಒಂದ್ ಕಡೆ ದಸರಾ ಸಂಭ್ರಮ. ಚಾಮುಂಡೇಶ್ವರಿ ಹಬ್ಬದಲ್ಲಿ ಇಡೀ ನಾಡಿದೆ. ಆದ್ರೆ ಥಿಯೇಟರ್ ಎದುರು ಹೋದ್ರೆ ಜನವೋ ಜನ. ಯಾಕಂದ್ರೆ ದಸರಾ ಹಬ್ಬದ ಸಾಲು ಸಾಲು ರಜೆಯನ್ನ ಕಾಂತಾರದ ಡಿವೈನ್ ಲೋಕಕ್ಕೆ ಹೋಗಿ ಪ್ರೇಕ್ಷಕರು ಮಜಾ ಮಾಡುತ್ತಿದ್ದಾರೆ. ಹೀಗಾಗೆ ವೇರಿ ಟ್ಯಾಲೆಂಡೆಡ್ ಡೈರೆಕ್ಟರ್ ಕಮ್ ಆ್ಯಕ್ಟರ್ ರಿಷಬ್ ಶೆಟ್ಟಿಯ ಕಾಂತಾರ ಸಿನಿಮಾಗೆ ಬಾಕ್ಸಾಫೀಸ್‌ನಲ್ಲಿ ಜಾಕ್ಪಾಟ್ ಹೊಡೆದಿದೆ. ಕಾಂತಾರ ಸಿನಿಮಾ ರಿಲೀಸ್ ಆಗಿದ್ದು ಕಳೆದ ವಾರ ಸೆಪ್ಟೆಂಬರ್ 30ರಂದು ವರ್ಲ್ಡ್ ವೈಡ್ ಕನ್ನಡದಲ್ಲೇ ಬಂದಿತ್ತು. 

ಈ ಸಿನಿಮಾ ಸಿನಿ ರಸಿಕ ಬಣವನ್ನ ಮಂತ್ರಮುಗ್ಧಗೊಳಿಸಿದೆ. ನಮ್ಮ ನೆಲದ ಒಂದು ಸಂಸ್ಕತಿಯ ಅದ್ಭುತ ಕಥೆಯ ಈ ಡಿವೈನ್ ಸ್ಟೋರಿ ಬ್ಲ್ಯಾಕ್ ಬಾಸ್ಟರ್ ಹಿಟ್ ಆಗಿದೆ. ಯಾವ್ ಮಟ್ಟಕ್ಕೆ ಅಂದ್ರೆ ಸಿನಿಮಾ ರಿಲೀಸ್ ಆಗಿ ಐದೇ ದಿನದಲ್ಲಿ 50 ಕೋಟಿ ಕ್ಲಬ್ ಸೇರಿದೆ ಅಂತ ಹೇಳಲಾಗ್ತಿದೆ. ಕೆಜಿಎಫ್ ಸಿನಿಮಾ  ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಕಾಂತಾರ ಸಿನಿಮಾ ಮೂಲಕ ಮತ್ತೆ ತಮ್ಮ ಸಿನಿಮಾ ಸಕ್ಸಸ್ ಯಾತ್ರೆಯನ್ನ ಕಂಟಿನ್ಯೂ ಮಾಡಿದೆ. ಕೆಜಿಎಫ್ ಕನ್ನಡದಲ್ಲಿ ಹೇಗೆ ಕಲೆಕ್ಷನ್ ಮಾಡಿತ್ತೋ ಅದೇ ರೂಟ್‌ನಲ್ಲಿ ಕಾಂತಾರ ಜರ್ನಿ ಆಗುತ್ತಿದೆ. ಕಾಂತಾರವನ್ನ ಜನ ಮುಗಿ ಬಿದ್ದು ನೋಡುತ್ತಿರೋದನ್ನ ನೋಡಿದ್ರೆ ಈ ಸಿನಿಮಾ 10 ದಿನದಲ್ಲಿ 100 ಕೋಟಿ ಕ್ಲಬ್ ಸೇರೋ ಚಾನ್ಸ್ ಹೆಚ್ಚಿದೆ. ಈ ಮೂಲಕ ಕರ್ನಾಟಕದ ಮಾಸ್ಟರ್ ಪೀಸ್ ಸಿನಿಮಾ ಅಂತ ಕರೆಸಿಕೊಳ್ತಿರೋ ಕಾಂತಾರ ರಿಷಬ್ ಶೆಟ್ಟಿ ಸಿನಿ ಖರಿಯರ್ನಲ್ಲೇ ಒಂದು ಮೈಲುಗಲ್ಲಾಗಲಿದೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more