ಜ್ಯೂನಿಯರ್ ಮೊನಾಲಿಸಾ ಹಿಂದೆ ಬಿದ್ದ ಶೆಟ್ರು: 'ಹರಿಕಥೆ ಅಲ್ಲ ಗಿರಿಕಥೆ' ಲವ್ ಸಾಂಗ್ ರಿಲೀಸ್!

ಜ್ಯೂನಿಯರ್ ಮೊನಾಲಿಸಾ ಹಿಂದೆ ಬಿದ್ದ ಶೆಟ್ರು: 'ಹರಿಕಥೆ ಅಲ್ಲ ಗಿರಿಕಥೆ' ಲವ್ ಸಾಂಗ್ ರಿಲೀಸ್!

Published : May 21, 2022, 09:01 PM IST

ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಡೈರೆಕ್ಟರ್ ಕಮ್ ಆ್ಯಕ್ಟರ್ ರಿಷಭ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಸ್ಟೋರಿಯನ್ನ ಬೆಳ್ಳಿತೆರೆ ಮೇಲೆ ಕಟ್ಟಿಕೊಡೋ ಶೆಟ್ರು ಈ ಭಾರಿ ಹರಿಕತೆ ಅಲ್ಲ ಗಿರಿಕಥೆ ಅಂತ ಮತ್ತೊಂದು ಇಂಟ್ರೆಸ್ಟಿಂಗ್ ಕಥೆಯನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದಾರೆ. 

ಸ್ಯಾಂಡಲ್‌ವುಡ್‌ನ ಟ್ಯಾಲೆಂಟೆಡ್ ಡೈರೆಕ್ಟರ್ ಕಮ್ ಆ್ಯಕ್ಟರ್ ರಿಷಭ್ ಶೆಟ್ಟಿ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ವಿಭಿನ್ನ ಸ್ಟೋರಿಯನ್ನ ಬೆಳ್ಳಿತೆರೆ ಮೇಲೆ ಕಟ್ಟಿಕೊಡೋ ಶೆಟ್ರು ಈ ಭಾರಿ ಹರಿಕತೆ ಅಲ್ಲ ಗಿರಿಕಥೆ ಅಂತ ಮತ್ತೊಂದು ಇಂಟ್ರೆಸ್ಟಿಂಗ್ ಕಥೆಯನ್ನ ನಿಮ್ಮ ಮುಂದೆ ತೆರೆದಿಡುತ್ತಿದ್ದಾರೆ. ಇದೀಗ ಈ ಸಿನಿಮಾದ ಲವ್ ಸಾಂಗ್ ರಿಲೀಸ್ ಆಗಿದ್ದು. ಹರಿಕಥೆ ಅಲ್ಲ ಗಿರಿಕಥೆಯ ಮೋನಾಲೀಸ ಹಿಂದೆ ಬಿದ್ದು ಪ್ರೇಮಗೀತೆ ಹಾಡಿದ್ದಾರೆ ರಿಷಬ್ ಶೆಟ್ಟಿ. ಒಂದರ ಹಿಂದೆ ಒಂದರಂತೆ ತಮ್ಮ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುತ್ತಿರೋ ರಿಷಬ್ ಶೆಟ್ಟಿ ಈ ಭಾರಿ ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್‌ಗಳ ಸ್ಟೋರಿ ಹೇಳುತ್ತಿದ್ದಾರೆ. 

ರಿಷಬ್ ಶೆಟ್ಟಿ ಸಿನಿಮಾದಲ್ಲಿ ಸ್ಟಾರ್ ಆಗೋಕು ಮೊದ್ಲು ನಿರ್ದೇಶಕ ಯೋಗರಾಜ್ ಭಟ್ರ ಡೈರೆಕ್ಷನ್ ಟೀಂನಲ್ಲಿ ಕೆಲಸ ಮಾಡೋಕೆ ಚಾನ್ಸ್ ಕೇಳಿದ್ರು. ಆದ್ರೆ ಇಂದು ರಿಷಬ್ ಶೆಟ್ಟಿಯ ಸಿನಿಮಾದ ಹಾಡನ್ನ ಯೋಗರಾಜ್ ಭಟ್ರು ಬಿಡುಗಡೆ ಮಾಡಿ ವಿಶ್ ಮಾಡಿದ್ದಾರೆ. ಹರಿಕಥೆ ಅಲ್ಲ ಗಿರಿಕತೆ ಸಿನಿಮಾದ ಸ್ಟೋರಿ ಲೈನ್ ಇಂಟ್ರೆಸ್ಟಿಂಗ್ ಆಗಿದೆ. ಚಿತ್ರರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್‌ಗಳ ಸ್ಥಿತಿ, ಒಬ್ಬ ನಿರ್ದೇಶಕ ಅಸಿಸ್ಟೆಂಟ್ ನಿರ್ದೇಶಕನನ್ನ ಹೇಗೆ ನಡೆಸಿಕೊಳ್ತಾರೆ? ಅವರ ಸಂಬಳ ಎಷ್ಟಿರುತ್ತೆ? ಹೀಗೆ ಸಹಾಯಕ ನಿರ್ದೇಶಕರ ಹಲವು ಇಂಟ್ರೆಸ್ಟಿಂಗ್ ಕಥೆಯ ಜೊತೆ ಲವ್ ಸ್ಟೋರಿ ಕೂಡ ಸಿನಿಮಾದಲ್ಲಿಟ್ಟಿದ್ದಾರೆ ರಿಷಬ್ ಶೆಟ್ಟಿ. 

Harikathe Alla Girikathe: ಅಸಿಸ್ಟೆಂಟ್ ಡೈರಕ್ಟರ್ ಬೇಕಾಗಿದ್ದಾರೆ ಅಂತ ರಿಷಬ್ ಹೇಳಿದ್ಯಾಕೆ?

ಹರಿಕತೆ ಅಲ್ಲ ಗಿರಿಕತೆ ಸಿನಿಮಾದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ತಪಸ್ವಿನಿ ಅಭಿನಿಯಿಸಿದ್ದಾರೆ. ಸಂದೇಶ್ ನಾಗರಾಜ್ ಬ್ಯಾನರ್ನಡಿ ನಿರ್ಮಾಣ ಆಗಿರೋ ಚಿತ್ರಕ್ಕೆ ಕರಣ್ ಅನಂತ್ ಮತ್ತು ಅನಿರುದ್ಧ ಇಬ್ಬರು ನಿರ್ದೇಶನ ಮಾಡಿದ್ದಾರೆ. ಇದು ಪಕ್ಕಾ ಕಾಮಿಡಿ ಓರಿಯೆಂಟೆಡ್ ಚಿತ್ರವಾಗಿದ್ದು, ಅಜನಿಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಆದ್ರೆ ಜೂ. ಮೊನಾಲಿಸಾ ಹಾಡಿಗೆ ಮಾತ್ರ ವಾಸುಕಿ ವೈಭವ್ ಸಂಗೀತ ನೀಡಿದ್ದು, ಕಂಠದಾನವನ್ನೂ ಮಾಡಿದ್ದಾರೆ. ವಿಶೇಷ ಅಂದ್ರೆ ನಿರ್ದೇಶಕ ಯೋಗರಾಜ್ ಭಟ್ರು ಕೂಡ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರ ಜೂನ್‌ 23ಕ್ಕೆ ತೆರೆ ಮೇಲೆ ಬರುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more