James 2022: ಪುನೀತ್‌ ರಾಜ್‌ಕುಮಾರ್‌ಗಾಗಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್

James 2022: ಪುನೀತ್‌ ರಾಜ್‌ಕುಮಾರ್‌ಗಾಗಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್

Published : Mar 18, 2022, 12:27 PM IST

ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಹಾಗೂ 'ಜೇಮ್ಸ್' ಚಿತ್ರವನ್ನು ಸಂಭ್ರಮಿಸಿದ್ದಾರೆ. ಹಾಗೂ ಪುನೀತ್​ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ರಾಜರ ರಾಜ ಪವರ್ ಸ್ಟಾರ್ ಡಾ. ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿನಯದ ಕೊನೆಯ ಚಿತ್ರ 'ಜೇಮ್ಸ್' (James) ಗುರುವಾರ ವಿಶ್ವಾದ್ಯಂತ ತೆರೆಕಂಡು ಭರ್ಜರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಾತ್ರವಲದೇ ಅಪ್ಪು ಹುಟ್ಟುಹಬ್ಬದ ದಿನವೇ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದ್ದರಿಂದ ಚಿತ್ರವನ್ನು ಅಭಿಮಾನಿಗಳು (Fans) ಹಬ್ಬದ ರೀತಿ ಬರಮಾಡಿಕೊಂಡಿದ್ದರು. ಕರ್ನಾಟಕದಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಹಾಗೂ 'ಜೇಮ್ಸ್' ಚಿತ್ರವನ್ನು ಸಂಭ್ರಮಿಸಿದ್ದಾರೆ. ಹಾಗೂ ಪುನೀತ್​ ಅವರು ಈಗಲೂ ನಮ್ಮ ಜತೆಗೆ ಇದ್ದಾರೆ ಎನ್ನುವ ಭಾವನೆಯನ್ನು ಅಭಿಮಾನಿಗಳು ವ್ಯಕ್ತಪಡಿಸುತ್ತಿದ್ದಾರೆ.

ಡಬ್ಬಿಂಗ್ ಮಾಡುವಾಗ ಅಪ್ಪು ಇಲ್ಲೇ ಇದ್ದಾನೆ ಅನಿಸುತ್ತಿತ್ತು: ಶಿವರಾಜ್‌ಕುಮಾರ್

ಇನ್ನು ಚಿತ್ರಮಂದಿರಗಳ ಮುಂದೆ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪರವಾಗಿ ಘೋಷಣೆಗಳನ್ನು ಕೂಗಿದರು. ಈ ವೇಳೆ ಹಲವು ಅಭಿಮಾನಿಗಳು ಭಾವುಕರಾದರು, ಕಣ್ಣೀರು ಸುರಿಸಿದರು. ಮತ್ತೊಂದೆಡೆ ಚಿತ್ರ ವೀಕ್ಷಿಸಿ ಹೊರ ಬಂದ ಅಭಿಮಾನಿಗಳು, ಪುನೀತ್ ರಾಜಕುಮಾರ್ ಅವರ ಧ್ವನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ದುಃಖ ವ್ಯಕ್ತಪಡಿಸಿದರು. ವಿಶೇಷವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು ಹಲವು ರೀತಿಯಲ್ಲಿ ವ್ಯಕ್ತಪಡಿಸಿದರು. ಪ್ರತಿ ವರ್ಷವು ಇದೆ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸುವುದಾಗಿಯೂ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋವನ್ನು ವೀಕ್ಷಿಸಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more