ಪಬ್ಬಲ್ಲಿ ಸತೀಶ್ ಗ್ಯಾಂಗ್ ಪಾರ್ಟಿ ಮಸ್ತಿ!  'ಮ್ಯಾಟ್ನಿ'ಗಾಗಿ ಗೆಳೆಯರ ಭರ್ಜರಿ ಪಾರ್ಟಿ! ರಚಿತಾ-ಸತೀಶ್ ಮಾಡ್ತಾರಾ ಮೋಡಿ?

ಪಬ್ಬಲ್ಲಿ ಸತೀಶ್ ಗ್ಯಾಂಗ್ ಪಾರ್ಟಿ ಮಸ್ತಿ! 'ಮ್ಯಾಟ್ನಿ'ಗಾಗಿ ಗೆಳೆಯರ ಭರ್ಜರಿ ಪಾರ್ಟಿ! ರಚಿತಾ-ಸತೀಶ್ ಮಾಡ್ತಾರಾ ಮೋಡಿ?

Published : Sep 11, 2023, 01:19 PM ISTUpdated : Sep 11, 2023, 01:26 PM IST

ನೀನಾಸಂ ಸತೀಶ್ ನಟನೆಯ ಮ್ಯಾಟ್ನಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪಾರ್ಟಿ ಸಾಂಗ್ ಶೂಟ್ ಆಗಿದೆ. ಹೇಗಿತ್ತು ಸೆಟ್? ಏನು ಹೇಳುತ್ತೆ ಚಿತ್ರ ತಂಡ? 

ಕಲರ್ಫುಲ್ ಲೈಟು, ಮೈಲ್ಡ್ ಕಿಕ್ ಏರಿಸೋ ವೆದರ್, ಅರೆ ಕತ್ತಲೆಯಲ್ಲಿ ಹುಣ್ಣಿಮೆ ಚಂದಿರನಂತೆ ಕಣ್ಣಿಗೆ ಬೀಳೋ ಹಾಟ್ ಹಾಟ್ ಹುಡುಗಿಯರು. ಇವರ ಮಧ್ಯೆ ಕೈಯಲ್ಲಿ ಪೆಗ್ ಹಿಡ್ಕೊಂಡು ಕೂತಲ್ಲೇ ಡಾನ್ಸ್ ಮಾಡ್ತಿರೋ ಅಭಿನಯ ಚತುರ ನೀನಾಸಂ ಸತೀಶ್, ನಾಗಭೂಷಣ್, ಶಿವರಾಜ್ ಕೆಆರ್ ಪೇಟೆ, ಪೂರ್ಣ ಚಂದ್ರ ಮೈಸೂರು. ಇದೆಲ್ಲಾ ಆಗಿದ್ದು ಮ್ಯಾಟ್ನಿ ಸಿನಿಮಾದ ಪಾರ್ಟಿ ಸಾಂಗ್ ಶೂಟಿಂಗ್ ಸೆಟ್‌ನಲ್ಲಿ. ಮ್ಯಾಟ್ನಿ ಫನ್, ಮಜಾ, ಓನ್ಲಿ ಎಂಟರ್ಟೈನ್ಮೆಂಟ್ ಸಿನಮಾ. ಇಲ್ಲಿ ನೀಸಾಸಂ ಸತೀಶ್‌ಗೆ ಡಿಂಪಲ್ ಕ್ವೀನ್ ರಚಿತಾ ರಾಮ್, ಅದಿತಿ ಪ್ರಭುದೇವ ಹೀರೋಯಿನ್ಸ್. ಇದ್ರ ಜತೆ ನಾಗಭೂಷಣ್-ಶಿವರಾಜ್ ಕೆಆರ್ ಪೇಟೆ ಮಸ್ತ್ ಕಾಮಿಡಿ ಕಿಕ್ ಇರಲಿದೆ. ಕೋರ ಮಂಗಲದ ಪಬ್‌ನಲ್ಲಿ ಮ್ಯಾಟ್ನಿಯ ಪಾರ್ಟಿ ಸಾಂಗ್ ಚಿತ್ರೀಕರಣವಾಗಿದೆ. 

ಪಾರ್ವತಿ ಎಸ್ ಗೌಡ ನಿರ್ಮಾಣದ ಈ ಸಿನಿಮಾಗೆ ಮನೋಹರ್ ಕಂಪಲಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಮ್ಯಾಟ್ನಿ ಸಿನಿಮಾದ ಸಂಜೆ ಮೇಲೆ ಸುಮ್ನೆ ಹಂಗೆ ಫೋನು ಮಾಡ್ಲಾ ನಿಂಗೆ ಹಾಡು ಈಗಾಗ್ಲೆ ಹಿಟ್ ಆಗಿದ್ದು, ಅಯೋಗ್ಯ ಸಿನಿಮಾದಲ್ಲಿ ಜೊತೆಯಾಗಿದ್ದ ಸತೀಶ್ ನೀನಾಸಂ ರಚಿತಾರಾಮ್ ಜೋಡಿಯನ್ನು ಮತ್ತೆ ಬಿಗ್ ಸ್ಕ್ರೀನ್ ಮೇಲೆ ನೋಡೋ ಹಾಗೆ ಮಾಡಿದೆ. ಸದ್ಯದಲ್ಲೇ ಮ್ಯಾಟ್ನಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.

06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
04:33Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
04:18ಸ್ಯಾಂಡಲ್​ವುಡ್​ನಲ್ಲಿ ಮತ್ತೆ ನೆಪೋಟಿಸಂ ಕಿಚ್ಚು: ವಿವಾದಕ್ಕೆ ಅಂತ್ಯ ಹಾಡಿದ ಶಿವಣ್ಣ
Read more