ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

ಆಸ್ಪತ್ರೆಗೆ ದಾಸ ಶಿಫ್ಟ್‌: ವಿಮ್ಸ್ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್.. ಸದ್ಯದಲ್ಲೇ ದರ್ಶನ್‌ಗೆ ಸರ್ಜರಿ

Published : Oct 24, 2024, 04:13 PM IST

ಹೈಕೋರ್ಟ್​​ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಟ್ರೀಟ್​ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್​​ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ.

ಹೈಕೋರ್ಟ್​​ನಲ್ಲಿ ಬೇಲ್ ಅರ್ಜಿ ಮುಂದೂಡಿಗೆ ಆದ ಬೆನ್ನಲ್ಲೇ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ ಟ್ರೀಟ್​ಮೆಂಟ್ ಶುರುಮಾಡಲಾಗಿದೆ. ಆದ್ರೆ ದರ್ಶನ್​​ನ ಆಸ್ಪತ್ರೆಗೆ ಕರೆತರುವ ಸಮಯದಲ್ಲಿ ದೊಡ್ಡ ಹೈಡ್ರಾಮಾನೇ ನಡೆದಿದೆ. ಫ್ಯಾನ್ಸ್ ಹುಚ್ಚಾಟ, ಎಳೆದಾಟದಿಂದ ದರ್ಶನ್ ನೋವಿನಿಂದ ಕಿರುಚುವ ಪರಿಸ್ಥಿತಿ ಎದುರಾಗಿದೆ. ಬೆನ್ನು ನೋವಿನಿಂದ ಪರದಾಡ್ತಾ ಇರೋ ದರ್ಶನ್​ನ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಚ್ಚು ಅಭಿಮಾನಿಗಳು ಸೇರಿಕೊಳ್ತಾರೆ ಅನ್ನೋ ಕಾರಣಕ್ಕೇನೆ ತಡರಾತ್ರಿ ದರ್ಶನ್​​ನ ಆಸ್ಪತ್ರೆಗೆ ಕರೆತರಲಾಗಿದೆ. ಆದ್ರೂ ಕೂಡ ದಾಸನ ಅಂದಾಭಿಮಾನಿಗಳ ಪಡೆ ಆಸ್ಪತ್ರೆಯೆದರು ಸೇರಿ ಗಲಾಟೆ ಮಾಡಿದೆ. ಆಸ್ಪತ್ರೆ ಎದುರು ಸೇರಿದ ಫ್ಯಾನ್ಸ್​ನ ಕಂಟ್ರೋಲ್ ಮಾಡೋದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. 

ಜೈ ಡಿ ಬಾಸ್..  ಡಿ ಬಾಸ್ ಅಂತ ಕೂಗ್ತಾ ಇದ್ದ ಅಭಿಮಾನಿಗಳು ದರ್ಶನ್​ನ ಮುಟ್ಟೋದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಯುವಕನೊಬ್ಬ ದರ್ಶನ್​ ಕೈಯನ್ನ ಜೋರಾಗಿ ಎಳೆದಿದ್ದು, ಮೊದಲೇ ಬೆನ್ನು ನೋವಿನಿಂದ ಬಳಲ್ತಾ ಇರೋ ದರ್ಶನ್ ನೋವಿನಿಂದ ಕಿರುಚಿಕೊಂಡಿದ್ದಾರೆ. ಹೌದು ಬೆನ್ನು ಹುರಿಯ ನೋವಿನಿಂದ ಬಳಲ್ತಾ ಇರೋ ದರ್ಶನ್​ಗೆ MRI ಸ್ಕ್ಯಾನ್ ಮಾಡಿರೋ ವೈದ್ಯರು , ಸರ್ಜರಿ ಮಾಡಿಸಿಕೊಳ್ಳಬೇಕು ಅಂತ ಸೂಚನೆ ಕೊಟ್ಟಿದ್ದಾರೆ. ವಿಮ್ಸ್ ನ್ಯೂರೋ ಸರ್ಜನ್ ಡಾ.ವಿಶ್ವನಾಥ್ , ದರ್ಶನ್​ ಪರಿಸ್ಥಿತಿಯನ್ನ ನೋಡಿ ಅತಿ ಶಿಘ್ರದಲ್ಲಿ ಸರ್ಜರಿ ಒಳಗಾಗುವಂತೆ ಸೂಚನೆ ಕೊಟ್ಟಿದ್ದಾರೆ. ಹೈಕೋರ್ಟ್ ಕೂಡ ದರ್ಶನ್ ಆರೋಗ್ಯದ ವರದಿ ನೀಡೋದಕ್ಕೆ ಸೂಚನೆ ಕೊಟ್ಟಿದ್ದು 28ನೇ ತಾರೀಖು ಈ ವರದಿ ಹೈಕೋರ್ಟ್​ಗೆ ಸಲ್ಲಿಕೆ ಆಗಲಿದೆ. ದರ್ಶನ್ ಬೆನ್ನು ನೋವಿನ ಕಾರಣಕ್ಕೆ ಶೀಘ್ರ ಬೇಲ್ ನೀಡುವಂತೆ ಈಗಾಗ್ಲೇ ದರ್ಶನ್ ಪರ ವಕೀಲರು ಕೇಳಿಕೊಂಡಿದ್ದಾರೆ.

ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠ, ದರ್ಶನ್ ಆರೋಗ್ಯದ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. 28ನೇ ತಾರೀಖು ಈ ವರದಿ ಹೈಕೋರ್ಟ್​ಗೆ ಸಲ್ಲಿಕೆ ಆಗಲಿದ್ದು, ಇದನ್ನ ಪರಿಗಣಿಸಿ ಹೈಕೊರ್ಟ್​ ಬೇಲ್ ನೀಡಬಹುದು ಅನ್ನೋ ಅಸೆ ದರ್ಶನ್ ಪಾಳೆಯದಲ್ಲಿದೆ. ಆದ್ರೆ ಒಂದು ವೇಳೆ 28ನೇ ತಾರೀಖಿಗೂ ಹೈಕೋರ್ಟ್​ನಲ್ಲಿ ಬೇಲ್ ಸಿಗದೇ ಹೋದ್ರೆ ದರ್ಶನ್​ ಅನಿವಾರ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಿದೆ. ಯಾಕಂದ್ರೆ ಈಗಲೇ ದರ್ಶನ್ ನಡೆದಾಡೋಕೆ ಕಷ್ಟಪಡ್ತಿರುವಂತಿದೆ. ದರ್ಶನ್ ಮುಖದಲ್ಲಿ ನೋವಿನ ಗೆರೆಗಳು ಕಾಣ್ತಾ ಇವೆ. ವೈದ್ಯರ ಸಲಹೆಯಂತೆ ಶೀಘ್ರದಲ್ಲಿ ಶತ್ರಚಿಕಿತ್ಸೆ ಪಡೆಯದೇ ಹೋದ್ರೆ ದರ್ಶನ್ ಸ್ಥಿತಿ ಮತ್ತಷ್ಟು ಬಿಗಡಾಯಿಸೋದು ಫಿಕ್ಸ್ ಎನ್ನಲಾಗ್ತಾ ಇದೆ. ದರ್ಶನ್​​ ಕಣ್ಣು ಮತ್ತೆ ಹೈಕೋರ್ಟ್​ ನತ್ತ ನೆಟ್ಟಿದೆ. 

04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
Read more