ಕಿಚ್ಚನ ದನಿಯಲ್ಲಿ ‘ನೀ ನನ್ನ ಜೀವ ಗೆಳೆಯ ಕಣೋ’: ‘ಫ್ರೆಂಡ್​ಶಿಪ್​’ ಆಂಥಮ್ ಹಾಡಿದ ಸುದೀಪ್

ಕಿಚ್ಚನ ದನಿಯಲ್ಲಿ ‘ನೀ ನನ್ನ ಜೀವ ಗೆಳೆಯ ಕಣೋ’: ‘ಫ್ರೆಂಡ್​ಶಿಪ್​’ ಆಂಥಮ್ ಹಾಡಿದ ಸುದೀಪ್

Published : Jul 30, 2025, 04:21 PM ISTUpdated : Jul 30, 2025, 04:28 PM IST

ಫ್ಲರ್ಟ್ ಸಿನಿಮಾದಲ್ಲಿ ಕಿಚ್ಚ ಹಾಡಿರೋ ಆ ಹಾಡನ್ನ ಫ್ರೆಂಡ್ ಶಿಪ್ ಆಂಥಮ್ ಅಂದ್ರೂ ತಪ್ಪಾಗಲ್ಲ. ಕಿಚ್ಚ ಸುದೀಪ್ ನಟ, ನಿರ್ಮಾಪಕ, ನಿರ್ದೇಶಕ ಅಷ್ಟೇ ಅಲ್ಲ ಒಳ್ಳೆ ಗಾಯಕ ಕೂಡ ಹೌದು.

ಕಿಚ್ಚ ಸುದೀಪ್ ಫ್ರೆಂಡ್​ಶಿಪ್ ಗೋಸ್ಕರ ಏನ್ ಮಾಡೋದಕ್ಕೂ ರೆಡಿ. ಸದ್ಯ ಫ್ರೆಂಡ್​ಶಿಪ್ ಗೋಸ್ಕರನೇ ಸುದೀಪ್ ಒಂದು ಫ್ರೆಂಡ್ ಶಿಪ್ ಸಾಂಗ್ ಹಾಡಿದ್ದಾರೆ. ಫ್ಲರ್ಟ್ ಸಿನಿಮಾದಲ್ಲಿ ಕಿಚ್ಚ ಹಾಡಿರೋ ಆ ಹಾಡನ್ನ ಫ್ರೆಂಡ್ ಶಿಪ್ ಆಂಥಮ್ ಅಂದ್ರೂ ತಪ್ಪಾಗಲ್ಲ. ಕಿಚ್ಚ ಸುದೀಪ್ ನಟ, ನಿರ್ಮಾಪಕ, ನಿರ್ದೇಶಕ ಅಷ್ಟೇ ಅಲ್ಲ ಒಳ್ಳೆ ಗಾಯಕ ಕೂಡ ಹೌದು ಅನ್ನೋದು ನಿಮಗೆ ಗೊತ್ತೇ ಇದೆ. ಹಲವು ಸೊಗಸಾದ ಹಾಡುಗಳು ಸುದೀಪ್ ದನಿಯಲ್ಲಿ ಮೂಡಿಬಂದಿವೆ. ಫ್ಲರ್ಟ್ ಅನ್ನೋ ಸಿನಿಮಾಗಾಗಿ ಸುದೀಪ್ ಒಂದು ಸ್ಪೆಷಲ್​ ಸಾಂಗ್​​ ಹಾಡಿದ್ದಾರೆ. ‘ನೀ ನನ್ನ ಜೀವ ಗೆಳೆಯ ಕಣೋ’ ಅನ್ನೋ ಲಿರಿಕ್ಸ್ ಇರುವ ಈ ಹಾಡು ಸ್ನೇಹಿತರ ಪಾಲಿಗೆ ಆಂಥಮ್ ಆದ್ರೂ ಅಚ್ಚರಿ ಇಲ್ಲ.

ಅಂದಹಾಗೆ ಈ ಹಾಡನ್ನ ಕಿಚ್ಚ ಹಾಡಿರೋದು ಕೂಡ ಫ್ರೆಂಡ್ ಶಿಪ್​ಗಾಗಿಯೇ. ಹೌದು ಫ್ಲರ್ಟ್ ಸಿನಿಮಾ ಚಂದನ್ ಕುಮಾರ್ ನಟನೆ ಜೊತೆಗೆ ಮೊದಲ ನಿರ್ದೇಶನ ಮಾಡ್ತಾ ಇರೋ ಸಿನಿಮಾ. ಚಂದನ್ ಬಿಗ್ ಬಾಸ್ ಸೀಸನ್-3ನಲ್ಲಿ ರನ್ನರ್ ಅಪ್ ಆಗಿದ್ರು. ಬಿಗ್ ಬಾಸ್​ ಸ್ಪರ್ಧಿಗಳ ಅನೇಕ ಸಾಹಸಗಳಿಗೆ ಕಿಚ್ಚ ಸಾಥ್ ಕೊಟ್ಟಿದ್ದಾರೆ. ಸದ್ಯ ನಿರ್ದೇಶಕನಾಗ್ತಾ ಇರೋ ಚಂದುಗೂ ಈ ಹಾಡು ಹಾಡುವ ಮೂಲಕ ಸಪೋರ್ಟ್ ಮಾಡಿದ್ದಾರೆ. ನಕುಲ್ ಅಭಯಂಕರ್ ಈ ಹಾಡಿಗೆ ಮ್ಯೂಸಿಕ್ ಮಾಡಿದ್ದಾರೆ. ‘ಫ್ಲರ್ಟ್’  ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಚಂದನ್ ಜೊತೆಗೆ ಗಿರಿ ಗೆಳೆಯನಾಗಿ ನಟನೆ ಮಾಡಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more