script type="application/ld+json"> { "@context": "https://schema.org", "@type": "WebSite", "name": "Asianet Suvarna News", "url": "https://kannada.asianetnews.com", "potentialAction": { "@type": "SearchAction", "target": "https://kannada.asianetnews.com/search?topic={search_term_string}", "query-input": "required name=search_term_string" } }

ಅಪ್ಪು ಇಷ್ಟೊಂದು ಅಭಿಮಾನಿಗಳನ್ನು ಗಳಿಸಿದ್ದ ಅಂತ ನಮಗೇ ಗೊತ್ತಿರಲಿಲ್ಲ: ಶಿವಣ್ಣ

Nov 9, 2021, 2:30 PM IST

ರಾಜ್ ಕುಟುಂಬದಿಂದ ಅಭಿಮಾನಿಗಳಿಗೆ ಅನ್ನದಾನ ಕಾರ್ಯಕ್ರಮ ನಡೆದಿದೆ. ಈ ಸಂದರ್ಭ ಪುನೀತ್ ರಾಜ್‌ ಕುಮಾರ್ ಅವರ ಪತ್ನಿ ಅಶ್ವಿನಿ ಹಾಗೂ ಶಿವಣ್ಣ ಅಭಿಮಾನಿಗಳಿಗೆ ಕೈಯಾರೆ ಊಟ ಉಣಬಡಿಸಿದ್ದಾರೆ. ದೇವಸ್ಥಾನಕ್ಕೆ ಬಂದಂತೆ ಜನ ಆಗಮಿಸುತ್ತಿದ್ದು, ಇದು ಅಭಿಮಾನಿಗಳ ಪ್ರೀತಿ ಎಂದಿದ್ದಾರೆ ಶಿವರಾಜ್‌ಕುಮಾರ್. ಎಷ್ಟು ಜನರಿಗೆ ಆಗುತ್ತದೋ ಅಷ್ಟು ಜನಕ್ಕೆ ನೀಡುತ್ತೇವೆ ಎಂದಿದ್ದಾರೆ.

ಎಲ್ಲರೂ ಸಮಾಧಾನದಿಂದ ಬಂದು, ಆತಂಕ ಮಾಡದೆ ಗಲಾಟೆ ಮಾಡದೆ ನಿಧಾನವಾಗಿ ಬಂದು ಊಟ ಮಾಡಿಕೊಂಡು ಹೋಗಿ ಎಂದಿದ್ದಾರೆ ನಟ. ಈ ಸಂದರ್ಭ ಶಿವರಾಜ್ ಕುಮಾರ್ ಅವರು ಸರ್ಕಾರದಿಂದ ಸಿಕ್ಕಿದ ನೆರವಿಗೂ ಧನ್ಯವಾದ ಹೇಳಿದ್ದಾರೆ. ಸಹೋದರನ ಕುರಿತು, ಅಭಿಮಾನಿಗಳ ಕುರಿತು ಶಿವಣ್ಣ ಮಾತನಾಡಿದ್ದಾರೆ.