'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?

'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?

Published : Dec 03, 2025, 12:03 PM IST

ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಆಗಲಿಕ್ಕೆ ಇನ್ನೂ ಜಸ್ಟ್ 9 ದಿನ ಬಾಕಿ ಇವೆ. ರಿಲೀಸ್ ಗೂ ಮುನ್ನ ಡೆವಿಲ್ ಟ್ರೈಲರ್ ರಿಲೀಸ್ ಆಗಲಿದ್ದು, ಅದನ್ನ ಖುದ್ದು ದರ್ಶನ್ ವಾಯ್ಸ್ ನಲ್ಲಿ ಅನೌನ್ಸ್ ಮಾಡಲಾಗಿದೆ. ‘ನಾನ್ ಬರ್ತಿದ್ದೀನಿ ಚಿನ್ನಾ' ಅಂತ ದರ್ಶನ್ ಹೇಳಿರೋದು ಹೊಸ ಅರ್ಥ ಕೊಡ್ತಾ ಇದೆ.’

ದರ್ಶನ್ ನಟನೆಯ ದಿ ಡೆವಿಲ್ ಮೂವಿ ರಿಲೀಸ್ ಆಗಲಿಕ್ಕೆ ಇನ್ನೂ ಜಸ್ಟ್ 9 ದಿನ ಬಾಕಿ ಇವೆ. ರಿಲೀಸ್ ಗೂ ಮುನ್ನ ಡೆವಿಲ್  ಟ್ರೈಲರ್ ರಿಲೀಸ್ ಆಗಲಿದ್ದು, ಅದನ್ನ ಖುದ್ದು ದರ್ಶನ್ ವಾಯ್ಸ್ ನಲ್ಲಿ ಅನೌನ್ಸ್ ಮಾಡಲಾಗಿದೆ. ನಾನ್ ಬರ್ತಿದ್ದೀನಿ ಚಿನ್ನಾ ಅಂತ ದರ್ಶನ್ ಹೇಳಿರೋದು ಹೊಸ ಅರ್ಥ ಕೊಡ್ತಾ ಇದೆ.

‘ನಾನ್ ಬರ್ತಿದ್ದೀನಿ ಚಿನ್ನಾ..’ ದಾಸನ ಸಂದೇಶ
ಯೆಸ್ ದರ್ಶನ್ ಕಡೆಯಿಂದ ಫ್ಯಾನ್ಸ್​​ಗೆ ಒಂದು ಸಂದೇಶ ಬಂದಿದೆ. ಅದನ್ನ ಕೇಳಿ ಫ್ಯಾನ್ಸ್ ಕುಣಿದಾಡೋದೊಂದೇ ಬಾಕಿ. ಅಂಥಾ ಖುಷ್ ಖಬರ್ ದಾಸ ಕೊಟ್ಟಾಗಿದೆ. 'ನಾನ್ ಬರ್ತಿದ್ದೀನಿ ಚಿನ್ನಾ' ಅಂತ ದರ್ಶನ್ ವಾಯ್ಸ್ ಕೇಳಿ ಫ್ಯಾನ್ಸ್​ಗೆ ನಿಜಕ್ಕೂ ಸಂತಸವಾಗಿದೆ.

‘ದಿ ಡೆವಿಲ್’ ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್
ಹೌದು ದರ್ಶನ್ ಬರ್ತಾ ಇರೋದು, ಜೈಲಿನಿಂದ ಹೊರಗಲ್ಲ. ಬದಲಾಗಿ ಬಿಗ್ ಸ್ಕ್ರೀನ್ ಮೇಲೆ. ದರ್ಶನ್ ಕಂಬಿ ಹಿಂದೆ ಇದ್ದರೇನಂತೆ ಬಿಗ್​ಸ್ಕ್ರೀನ್ ಮೇಲೆ ಕಲಾವಿದನಾಗಿ ರಂಜಿಸೋದಕ್ಕೆ ಬರ್ತಾ ಇದ್ದಾರೆ. ದಿ ಡೆವಿಲ್ ಮೂವಿ ಡಿಸೆಂಬರ್ 11ಕ್ಕೆ ತೆರೆಗೆ ಬರ್ತಾ ಇದೆ. ಅದಕ್ಕೂ ಮುನ್ನ ಡಿಸೆಂಬರ್ 5ರಂದು ದಿ ಡೆವಿಲ್ ಟ್ರೈಲರ್ ಬರಲಿದೆ. ಅದನ್ನ ಖುದ್ದು ದಾಸನ ವಾಯ್ಸ್​​ ನಲ್ಲಿ ಅನೌನ್ಸ್ ಮಾಡಲಾಗಿದೆ.

ಹೇಗಿರುತ್ತೆ ಡೆವಿಲ್.. ಹಿಂಟ್ ಕೊಡಲಿದೆ ಟ್ರೈಲರ್
ಇದೂವರೆಗೂ ಬಂದಿರೋ ಡೆವಿಲ್ ಮೂವಿಯ ಟೀಸರ್, ಸಾಂಗ್ ಗಳ ಮೂಲಕ ಸಿನಿಮಾ ಹೇಗಿರಬಹುದು ಅನ್ನೋ ಸೂಚನೆ ಸಿಕ್ಕಿದೆ. ಇದೊಂದು ಪಕ್ಕಾ ಮಾಸ್ ಮಸಾಲ ಸಿನಿಮಾ ಅಂದಿದ್ದಾರೆ ನಿರ್ದೇಶಕ ಪ್ರಕಾಶ್.

ಆದ್ರೆ ಟೀಸರ್, ಸಾಂಗ್​ನಲ್ಲಿ ಕಥೆಯ ಗುಟ್ಟು ಮಾತ್ರ ಬಯಲಾಗಿಲ್ಲ. ಇದೀಗ ಟ್ರೈಲರ್ ಮೂಲಕ ಆ ಗುಟ್ಟು ರಟ್ಟಾಗ್ತಾ ಇದೆ. ದಾಸನ ಡೆವಿಲ್ ಅವತಾರ ಹೇಗಿರುತ್ತೆ ಅನ್ನೋದರ ಸೂಚನೆ ಸಿಗಲಿದೆ.

ದಿ ಡೆವಿಲ್​ಗೆ ಸುಧಾಕರ್ ಸಿನಿಮಾಟೋಗ್ರಫಿ, ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಈ ಹಿಂದೆ ದರ್ಶನ್ ಜೊತೆಗೆ ತಾರಕ್ ಚಿತ್ರವನ್ನ ಮಾಡಿದ್ದ ಪ್ರಕಾಶ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ರಚನಾ ರೈ ದರ್ಶನ್ ಜೊತೆ ನಾಯಕಿಯಾಗಿ ಮಿಂಚಿದ್ದಾರೆ. ಮಹೇಶ್ ಮಾಂಜ್ರೆಕರ್, ಅಚ್ಯುತ್ ಕುಮಾರ್, ಗಿಲ್ಲಿ ನಟ, ಶೋಭರಾಜ್  ಡೆವಿಲ್ ತಾರಾಗಣದಲ್ಲಿದ್ದಾರೆ. ಡೆವಿಲ್ ಇನ್ನೂ ಏನೇನಿದೆ ಗಮ್ಮತ್ತು ಅನ್ನೋದು 5ನೇ ತಾರೀಖು ಟ್ರೈಲರ್ ಮೂಲಕ ರಿವೀಲ್ ಆಗಲಿದೆ.
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
22:40ಗೆಳತಿ ಮನೆಯಲ್ಲಿ Vaishak​​ ನೇಣಿಗೆ ಶರಣಾಗಿದ್ದೇಕೆ ? ದುರಂತದ ಆ ರಾತ್ರಿ ಕೃಷಿ ತಾಪಂಡ ಮನೆಯಲ್ಲಿ ನಡೆದಿದ್ದೇನು?
Read more