ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!

ಇಲ್ಲಿದೆ ನೋಡಿ 'ಡೆವಿಲ್' ಸಿನಿಮಾದ ಸ್ಟೋರಿ ಸೀಕ್ರೆಟ್.. ದರ್ಶನ್ ಚಿತ್ರದಲ್ಲಿನ ಕಥೆ ಬಟಾಬಯಲು!

Published : Nov 14, 2025, 11:48 AM IST

ಡೆವಿಲ್ ಸಿನಿಮಾದ ಫಸ್ಟ್​ ಗ್ಲಿಮ್ಸ್​ ಬಂದಾಗ ಅಬ್ಬ ದರ್ಶನ್ ಈ ಭಾರಿ ಏನನ್ನೋ ಮಾಡಿದ್ದಾರೆ. ಡೆವಿಲ್ ಅವತಾರ ಭರ್ಜರಿ ಆಗಿದೆ ಅಂತ ಫ್ಯಾನ್ಸ್​​ ದಿಲ್ ಖುಷ್ ಆಗಿದ್ರು. ಆ ನಂತ್ರ ಬಂದ ಟೀಸರ್​ ಡೆವಿಲ್​​ನ ಮತ್ತೊಂದು ವರ್ಷನ್​​ ತೆರೆದಿಟ್ಟಿತ್ತು. ಇದೀಗ ಸ್ಟೋರಿ ಲೈನ್ ಸೀಕ್ರೆಟ್ ಬಯಲಾಗಿದ್ಯಾ?

ಕನ್ನಡದ ಸ್ಟಾರ್ ದರ್ಶನ್ ತೂಗದೀಪ (Darshan Thoogudeepa) 'ದಿ ಡೆವಿಲ್' ಸೌಂಡು ಶುರುವಾಗಿದೆ. ದಾಸನಿಲ್ಲದೇ ಡೆವಿಲ್​​ನ ಫ್ಯಾನ್ಸ್ ಮಡಿಲಿಗೆ ಹಾಕೋ ಸ್ಥಿತಿ ಡೆವಿಲ್​ ತಂಡಕ್ಕಿದೆ. ಅದಕ್ಕೆ ದಚ್ಚು ಪತ್ನಿ ವಿಜಯಲಕ್ಷ್ಮಿ ಈ ಸಿನಿಮಾ ಪ್ರೇಕ್ಷಕರಿಗೆ ತಲುಪಿಸೋ ಕೆಲಸ ನನ್ನದೆಂದಿದ್ದಾರೆ. ಆದ್ರೆ ಈಗಿರೋ ಮ್ಯಾಟರ್ ಅದಲ್ಲ. ಡೆವಿಲ್​ನ ಅಸಲಿ ಕಥೆಯೇ ಬೇರೆ. ಆ ರಿಯಲ್ ಸ್ಟೋರಿ ಏಷ್ಯಾನೆಟ್ ಸುವರ್ಣ ನ್ಯೂಸ್​​ಗೆ ಎಕ್ಸ್​ಕ್ಲ್ಯೂಸೀವ್ ಆಗಿ ಸಿಕ್ಕಿದೆ. ಏನದು ಎಕ್ಸ್​ಕ್ಲ್ಯೂಸೀವ್​..? ಹ್ಯಾವ ಲುಕ್...

ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ 'ಡೆವಿಲ್' ಅಸಲಿ ಕತೆ..!
ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲು ನರಕ ತೋರಿಸುತ್ತಿದೆ. ಆದ್ರೆ ಫ್ಯಾನ್ಸ್​​ಗೆ ಸ್ವರ್ಗ ತೋರಿಸಬೇಕು ಅಂತ ದಚ್ಚು ಡೆವಿಲ್​ ಸಿನಿಮಾವನ್ನ ಡಿಸೆಂಬರ್​​ 12ಕ್ಕೆ ತೆರೆ ಮೇಲೆ ತರುತ್ತಿದ್ದಾರೆ. ಒಂದು ಕಡೆ ಜೈಲಲ್ಲಿ ದರ್ಶನ್​ ವ್ಯಥೆ ಆದ್ರೆ, ಏಷ್ಯಾನೆಟ್ ಸುವರ್ಣ ನ್ಯೂಸ್​​ನಲ್ಲಿ ದಾಸನ ಡೆವಿಲ್​​ನ ಅಸಲಿ ಕಥೆ ಏಕ್ಸ್​ಕ್ಲ್ಯೂಸೀವ್ ಆಗಿ ರಿವಿಲ್ ಆಗ್ತಾ ಇದೆ.

ಡೆವಿಲ್ ಸಿನಿಮಾದ ಫಸ್ಟ್​ ಗ್ಲಿಮ್ಸ್​ ಬಂದಾಗ ಅಬ್ಬ ದರ್ಶನ್ ಈ ಭಾರಿ ಏನನ್ನೋ ಮಾಡಿದ್ದಾರೆ. ಡೆವಿಲ್ ಅವತಾರ ಭರ್ಜರಿ ಆಗಿದೆ ಅಂತ ಫ್ಯಾನ್ಸ್​​ ದಿಲ್ ಖುಷ್ ಆಗಿದ್ರು. ಆ ನಂತ್ರ ಬಂದ ಟೀಸರ್​ ಡೆವಿಲ್​​ನ ಮತ್ತೊಂದು ವರ್ಷನ್​​ ತೆರೆದಿಟ್ಟಿತ್ತು.

ಅಷ್ಟೆ ಅಲ್ಲ ಇದ್ರೆ ನಿಮ್ಮದಿಯಾಗ್ ಇರಬೇಕು ಹಾಡು ಬಂದಾಗ ಇದ್ದ ಬದ್ದವರೆಲ್ಲಾ ಟ್ರೋಲ್ ಮಾಡಿ ಹಾಡಿನ ಹೀಟ್ ಹೆಚ್ಚಿಸಿದ್ರು. ಈ ಕಿಕ್​​ಗೆ ಲವ್ ಟಾನಿಕ್​ ತರ ಬಂದ ಸಾಂಗ್ ಡೆವಿಲ್​​​ಗ ಪ್ರೇಮ ಲೋಕಕ್ಕೆ ಕರೆದುಕೊಂಡು ಹೋಗಿತ್ತು..

ಹೌದು, ಡಿವಿಲ್ ಸಿನಿಮಾ ಟೈಟಲ್​ ಗ್ಲಿಮ್ಸ್​ ನೋಡಿ ದರ್ಶನ್ ಈ ಸಿನಿಮಾದಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ. ದಾಸ ನಿಜಕ್ಕೂ ಡೆವಿಲ್, ದೊಡ್ಡ ಡಾನ್​​ ಅಂತೆಲ್ಲಾ ಟಾಕ್​ ಎದ್ದಿದ್ದು ಸುಳ್ಳಲ್ಲ. ಆದ್ರೆ ಡೆವಿಲ್​​ನ ರಿಯಲ್ ಸ್ಟೋರಿ ಏನ್​ ಗೊತ್ತಾ..? ದರ್ಶನ್​​ ಕ್ಯಾರೆಕ್ಟರ್ ಹೇಗಿರುತ್ತೆ ಗೊತ್ತಾ.?  ಅದಕ್ಕೆ ಉತ್ತರ ಇಲ್ಲಿದೆ ನೋಡಿ.. ದರ್ಶನ್​ ಡೆವಿಲ್​ ಸಿನಿಮಾದಲ್ಲಿ ಡಬಲ್ ರೋಲ್ ಮಾಡುತ್ತಿದ್ದಾರೆ. ಅದರಲ್ಲೊಂದು ರಾಜಕಾರಣಿ...

ದಚ್ಚು 'ಡೆವಿಲ್​'ನಲ್ಲಿ ರಾಜಕಾರಣಿ..!

ಡೆವಿಲ್​ ಟೀಸರ್​​ನಲ್ಲಿ ದರ್ಶನ್​ರ ಮಾಸ್​ ಡೈಲಾಗ್ ಸ್ಟೈಲೀಶ್ ಲುಕ್​​ಅನ್ನ ಮಾತ್ರ ನೋಡಿದ್ದೀರಾ. ಇದನ್ನ ನೋಡಿ ದಾಸ ಈ ಸಿನಿಮಾದಲ್ಲಿ ಡಾನ್ ಇರಬೇಕು ಅನ್ನೋ ಊಹೆ ನಿಮ್ಮದಿರಬಹುದು. ಆದ್ರೆ ದಾಸ ಮಾಡಿರೋ ರೋಲ್ ರಾಜಕಾರಣಿಯಂತೆ. ಜೈಲಿಗೆ ಸೇರಿದ ಮೇಲೆ 2029ರಲ್ಲಿ ದರ್ಶನ್ ಬಹಿರಂಗವಾಗಿ ರಾಜಕಾರಣಕ್ಕೆ ಬರುತ್ತಾರೆ ಅಂತ ಶಾಸ್ತ್ರಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆದ್ರೆ ದಾಸ ಡೆವಿಲ್​ ಸಿನಿಮಾದಲ್ಲೇ ರಾಜಕಾರಣಿಗಳ ಅವತಾರ ಎತ್ತಿದ್ದಾರೆ ಅನ್ನೋ ಸುಗ್ಗಿ ಸಮಾಚಾರ ಸಿಕ್ಕಿದೆ.

ದಾಸ ಇಲ್ಲಿ ಡಬಲ್ ರೋಲ್​​ನಲ್ಲಿ ಮಿಂಚ್ತಾರೆ. ಒಂದು ರಾಜಕಾರಣಿ ಆದ್ರೆ ಮತ್ತೊಂದು ರೋಲ್​ಅನ್ನ ನೀವು ಸಿನಿಮಾದಲ್ಲೇ ನೋಡಬೇಕು. ಯಾಕಂದ್ರೆ ಅದನ್ನ ಇಲ್ಲಿ ಹೇಳ್ಬಿಟ್ರೆ ಸಿನಿಮಾ ಮಜಾ ಹೋಗಬಹುದುಯ. ಬಟ್ ಆ ಕ್ಯಾರೆಕ್ಟರ್ ಒಗ್ಗೆ ಒಂದು ಲಿಂಕ್ ಕೊಡೋದಾದ್ರೆ, ರೆಬೆಲ್ ಸ್ಟಾರ್ ಅಂಬರೀಶ್​ ಹಾಗು ಮಾಲಾಶ್ರೀ ನಟಿಸಿರೋ ರಾಣಿ ಮಹಾರಾಣಿ ಸಿನಿಮಾ ನೆನಪಿಸಿಕೊಳ್ಳಬಹುದು..

ಡೆವಿಲ್ ಸಿನಿಮಾದ ಸಧ್ಯ ಕನ್ನಡ ಸಿನಿ ಪ್ರೇಕ್ಷಕರಲ್ಲಿ ನಿರೀಕ್ಷೆ ಮೂಡಿಸಿದೆ. ಸಿನಿಮಾದ ಮೇಕಿಂಗ್​​ಗಳು ಒಂದೊಂದಾಗೆ ಹೊರ ಬರುತ್ತಿದ್ದು, ದರ್ಶನ್ ಇಲ್ಲದೇ ಪ್ರಚಾರ ಮಾಡಬೇಕಿದೆ. ಇದಕ್ಕಾಗಿ ನಿರ್ದೇಶಕ ನಿರ್ಮಾಪಕ ಮಿಲನಾ ಪ್ರಕಾಶ್​ ತಯಾರಿ ಕೂಡ ಮಾಡಿದ್ದಾರೆ.

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more