ಕಿಚ್ಚನ ಫೋಟೋಗೆ ರಮ್ಯಾ ಫಿದಾ: ಒಟ್ಟಿಗೆ ನಟಿಸಿ ಎಂದ ಫ್ಯಾನ್ಸ್

Sep 15, 2021, 3:27 PM IST

ಕಿಚ್ಚ ಸುದೀಪ್ ಅವರು ಇತ್ತೀಚೆಗಷ್ಟೇ ಒಳ್ಳೆಯ ಫೋಟೋ ಒಂದನ್ನು ಶೇರ್ ಮಾಡಿದ್ದರು. ಇದನ್ನು ನೋಡಿದ ನಟಿ ರಮ್ಯಾ ಏನು ಹೇಳಿದ್ರು ಗೊತ್ತಾ ? ಕಿಚ್ಚನ ಲುಕ್‌ಗೆ ಮೋಹಕ ತಾರೆ ರಮ್ಯಾ ಫಿದಾ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ  ಕನ್ನಡ ಸಿನಿ ಪ್ರಿಯರ ಹಾಟ್ ಜೋಡಿಯಾದ ಕಿಚ್ಚ ಹಾಗೂ ರಮ್ಯಾರನ್ನು ನೋಡಲು ಜನ ಕಾಯುತ್ತಿದ್ದರು.

ರೇವತಿ ಸೀಮಂತದಲ್ಲಿ ತಾರೆಗಳ ದಂಡು: ಇಲ್ನೋಡಿ ವಿಡಿಯೋ

ಇದೀಗ ಈ ಜೋಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಕಿಚ್ಚ ಫೋಟೋಗೆ ರಮ್ಯಾ ಮಾಡಿರೋ ಕಮೆಂಟ್. ನಟಿ ರಮ್ಯಾ ಸ್ಟಾರ್‌ಗಳ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಟ್ವೀಟ್ ಮಾಡುತ್ತಾರೆ. ಕಿಚ್ಚನ ವರ್ಕೌಟ್‌ಗೆ ಆಲ್‌ ದ ಬೆಸ್ಟ್ ಹೇಳಿದ್ದಾರೆ ರಮ್ಯಾ. ರಮ್ಯಾ ಕಮೆಂಟ್ ಮಾಡಿದ ಕೂಡಾಲೇ ಅಭಿಮಾನಿಗಳು ಇಬ್ಬರೂ ಒಟ್ಟಿಗೆ ನಟಿಸಬೇಕು ಎಂದು ಒತ್ತಾಯಿಸಿದ್ದಾರೆ.