ಡೆಡ್‌ಬಾಡಿ ಸುಡ್ತಾ ಇದ್ರು ಅಲ್ಲೇ ರೊಮ್ಯಾಂಟಿಕ್ ದೃಶ್ಯ ಮಾಡಬೇಕಿತ್ತು; ಝೈದ್ ಖಾನ್

Sep 27, 2022, 5:20 PM IST

ಸ್ಯಾಂಡಲ್ ವುಡ್‌ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಬನಾರಸ್ ಸಿನಿಮಾ ಕೂಡ ಒಂದು. ಝೈದ್ ಖಾನ್ ನಟನೆಯ ಬನಾರಸ್ ಸಿನಿಮಾ ಈಗಾಗಲೇ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಇತ್ತೀಚಿಗಷ್ಟೆ ಬನಾಸರ್ ತಂಡ ಟ್ರೈಲರ್ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಮಾಧ್ಯಮದ ಪ್ರಶ್ನೆಗಳಿಗೆ ಉತ್ತರ ನೀಡಿದ ಸಿನಿಮತಂಡ ಅನೇಕ  ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬನಾರಸ್‌ನಲ್ಲಿ ಚಿತ್ರೀಕರಣ ಮಾಡಿದ ಅನುಭವವನ್ನು ಝೈದ್ ಖಾನ್ ಬಿಚ್ಚಿಟಟಿದ್ದಾರೆ. ಸಾಕಷ್ಟು ಹೆಣಗಳನ್ನುಸುಡಲಾಗುತ್ತಿತ್ತು. ಅದರ ಮುಂದೆಯೇ ರೊಮ್ಯಾಂಟಿಕ್ ದೃಶ್ಯ ಚಿತ್ರೀಕರಣ ಮಾಡಬೇಕಿತ್ತು. ಎಂಥ ಪರಿಸ್ಥಿತಿ ಇತ್ತು ಎಂದು ಯೋಚಿಸಿ ಎಂದು ಶೂಟಿಂಗ್ ಅನುಭವ ಬಿಚ್ಚಿಟ್ಟರು.