Oct 27, 2024, 11:30 AM IST
ಹಾವೇರಿ(ಅ.27): ಆ ಮೂರು ಕ್ಷೇತ್ರಗಳಲ್ಲಿ ಉಪಸಂಗ್ರಾಮದ ರಣಘೋಷ ಮೊಳಗಿದೆ. ಆದ್ರೆ, ಇಡೀ ರಾಜ್ಯವೇ ಆ ಕ್ಷೇತ್ರಗಳ ಫಲಿತಾಂಶ ಏನಾಗಲಿದೆ ಅಂತ ಕಾಯ್ತಾ ಇದೆ. ಈ ಕಾಯುವಿಕೆಗೆ ದೊಡ್ಡದೊಂದು ಕಾರಣವೂ ಇದೆ. ಅದರ ಕತೆ ಹೇಳೋದ್ರ ಜೊತೆಗೆ, ಮಹತ್ತರ ರಣಭೂಮಿಯಾಗಿ ಕಾಣಿಸ್ತಾ ಇರೋ, ಶಿಗ್ಗಾಂವಿ ಬಗ್ಗೆ ನಿಮಗೆ ಇಂಚಿಂಚು ಮಾಹಿತಿ ಕೊಡ್ತೀವಿ. ಇತಿಹಾಸದ ಪುಟಗಳಲ್ಲಿ ಕಣ್ಣಾಡಿಸಿದರೆ ಕಾಣೋ ರಹಸ್ಯವನ್ನ ತೆರೆದಿಡ್ತೀವಿ. ಇದು ಇವತ್ತಿನ ಸುವರ್ಣ ಸ್ಪೆಷಲ್, ಕುರುಕ್ಷೇತ್ರ ಶಿಗ್ಗಾಂವಿ.
ಅಷ್ಟಕ್ಕೂ ಶಿಗ್ಗಾಂವಿಯಲ್ಲಿ ಆ ಚುನಾವಣೆ ಸೃಷ್ಟಿಸಿದ ಇತಿಹಾಸವೇನು? ಅಲ್ಲಿ ಬೊಮ್ಮಾಯಿಯವರ ಭರ್ಜರಿ ಗೆಲುವು, ಯಾವುದರ ಸುಳಿವು ಕೊಟ್ಟಿತ್ತು.? ಅದೇ ಗೆಲುವು, ಬಸವರಾಜ ಬೊಮ್ಮಾಯಿ ಅವರ ಪುತ್ರನ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ?.
ಮತ್ತೆ ಪಕ್ಷಾಂತರ ಯೋಗೇಶ್ವರ್ ಮತ್ತೊಂದು ಆಟ; 5ನೇ ಚುನಾವಣೆ, 4ನೇ ಚಿಹ್ನೆಯಿಂದ ಸೈನಿಕನ ಸ್ಪರ್ಧೆ!
ಶಿಗ್ಗಾಂವಿ ಕ್ಷೇತ್ರದಲ್ಲಿ ಸುಲಭ ಗೆಲುವು ದಾಖಲಿಸೋದಕ್ಕೆ ಬಿಜೆಪಿ ಸಿದ್ಧವಾಗಿದೆ. ಆದ್ರೆ ಅಲ್ಲಿನ ರಾಜಕೀಯ ವಾತಾವರಣ, ಬಿಜೆಪಿಗೆ ಪೂರಕವಾಗಿದೆ ಅನ್ನೋ ಮಾತು ಸ್ಥಾಪನೆಯಾಗಿದ್ದು ಹೇಗೆ? ಯಾಕೆ? ಈ ಪ್ರಶ್ನೆಗೆ ಉತ್ತರ ಗೊತ್ತಾಗ್ಬೇಕು ಅಂದ್ರೆ, ಕಳೆದ ಸಲ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶವನ್ನ, ಅನಲೈಸ್ ಮಾಡ್ಬೇಕು. ಈ ಅಗ್ನಿಪರೀಕ್ಷೆಯ ಅಸಲಿ ಕತೆ ಇಷ್ಟಕ್ಕೇ ಮುಗಿಯೋದಿಲ್ಲ. ಕಾಂಗ್ರೆಸ್ಗೆ ಕಂಟಕಮಯವಾಗಿ ಕಾಣ್ತಾ ಇರೋ, ರಹಸ್ಯದ ಬಗ್ಗೆನೂ ಹೇಳ್ತೀವಿ.
ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ನಿರ್ಮಿಸಿರೋ ಬಿಜೆಪಿ ಭದ್ರಕೋಟೆ, ಈ ಚುನಾವಣೆ ನಂತರವೂ ಉಳಿಯುತ್ತಾ ಅನ್ನೋದು ಕೆಲವರ ಅನುಮಾನ. ಅದಕ್ಕೆ ಉತ್ತರ ಸಿಗ್ಬೇಕು ಅಂದ್ರೆ, ಸದ್ಯಕ್ಕೆ ಆ ಕೋಟೆ ಕೆಡವೋ ಸೇನೆ ಕಟ್ಟಬೇಕಿದ್ದ ಕಾಂಗ್ರೆಸ್ ಕತೆ ಏನಾಗಿದೆ ಅಂತ ನೋಡ್ಬೇಕು.