May 13, 2023, 1:29 PM IST
ಮೈಸೂರು: ನಮ್ಮ ಪಕ್ಷದ ಅನಿಸಿಕೆ, ಲೆಕ್ಕಾಚಾರದಂತೆ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ನಾವು ಬಿಜೆಪಿಗೆ 60 ರಿಂದ 65 ಬರಬಹುದು ಎಂದು ಲೆಕ್ಕ ಹಾಕಿದ್ದೇವು. ಆ ತರದ ಟ್ರೆಂಡ್ ಈಗ ಇದೆ. ನಾವು 120ಕ್ಕಿಂತ ಹೆಚ್ಚು ಸೀಟ್ ಪಡೆಯುತ್ತೇವೆ ಅಂದುಕೊಂಡಿದ್ದೇವು. ಅದೇ ರೀತಿ ಈಗ ಟ್ರೆಂಡ್ ಇದೆ. ಜೆಡಿಎಸ್‌ಗೆ 25 ರಿಂದ 26 ಬರಬಹುದು ಎಂದು ಊಹಿಸಿದ್ದು, ಹಾಗೆ ಆಗಿದೆ. ಕಾಂಗ್ರೆಸ್ ಪಕ್ಷ 120ಕ್ಕಿಂತ ಹೆಚ್ಚು ಸ್ಥಾನ ಪಡೆದು ಗೆಲ್ಲಲಿದೆ. ಸ್ವಂತ ಶಕ್ತಿಯಿಂದ ನಾವು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರುಣಾದಲ್ಲೂ ಜಾಸ್ತಿ ಲೀಡ್ ಆಗಲಿದೆ. ವಿ. ಸೋಮಣ್ಣ ಎರಡೂ ಕ್ಷೇತ್ರದಲ್ಲೂ ಸೋಲುತ್ತಾರೆ. ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಎಷ್ಟು ಬಾರೀ ಬಂದರೂ ಕರ್ನಾಟಕ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜನ ಬಿಜೆಪಿ ಆಡಳಿತದಿಂದ ಬೇಸತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: Karnataka Election Result 2023 ಗೆಲುವಿನ ಬೆನ್ನಲ್ಲೇ ಡಿಕೆಶಿ ಭಾವುಕ, ಜೈಲು ದಿನ ನೆನೆದು ಕಣ್ಣೀರು!