ಹಾಸನ ಶಾಸಕ ಪ್ರೀತಂ ಗೌಡ ಹೊಸ ಬಾಂಬ್, ವಿಡಿಯೋ ಕ್ಲಿಪ್ ವೈರಲ್, ರಾಜಕೀಯ ವಲಯವೇ ಶಾಕ್!

ಹಾಸನ ಶಾಸಕ ಪ್ರೀತಂ ಗೌಡ ಹೊಸ ಬಾಂಬ್, ವಿಡಿಯೋ ಕ್ಲಿಪ್ ವೈರಲ್, ರಾಜಕೀಯ ವಲಯವೇ ಶಾಕ್!

Published : Apr 28, 2023, 08:11 PM IST

ಜೆಡಿಎಸ್ ಗೆ ಮತ ಹಾಕಿದ್ರೆ ನಮಗೆ ಮತ ಹಾಕಿದಂತೆ ಎಂದು ಹಾಸನ ನಗರದಲ್ಲಿ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಹೇಳಿಕೆ ನೀಡಿದ್ದು, ಈ  ಹೊಸ ಬಾಂಬ್ ರಾಜಕೀಯ ವಲಯದಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಒಪ್ಪಂದವಾಗಿದೆ ಎಂಬ ಚರ್ಚೆಗೆ ನಾಂದಿ ಹಾಡಿದೆ.

ಹಾಸನ: ಜೆಡಿಎಸ್ ಗೆ ಮತ ಹಾಕಿದ್ರೆ ನಮಗೆ ಮತ ಹಾಕಿದಂತೆ ಎಂದು ಹಾಸನ ನಗರದಲ್ಲಿ ಪ್ರಚಾರದ ವೇಳೆ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಹೇಳಿಕೆ ನೀಡಿದ್ದಾರೆ. ನಿಮಗೆ ಅರ್ಥ ಆಗಲಿ ಅಂತ ಬಿಡಿಸಿ ಬಿಡಿಸಿ ಹೇಳ್ತಿದ್ದೇನೆ. ಜನತಾದಳಕ್ಕೆ ಓಟು ಹಾಕಿದ್ರೆ ಬಿಜೆಪಿಗೆ ಓಟು ಹಾಕಿದ ಲೆಕ್ಕ. ದೇವೇಗೌಡರು ಮೋದಿ ಸಾಹೆಬ್ರು ಮಾತನಾಡಿಕೊಂಡಿದ್ದಾರೆ. ಏಕೆಂದರೆ ಅವರು ಬರೋದು ಇಪ್ಪತ್ತು, ಇಪ್ಪತ್ತೈದು ಸೀಟು. ಬೆಂಗಳೂರಿಗೆ ಹೋಗಬೇಕೆಂದರೆ ಮೈಸೂರಿಗೆ ಹೋಗಿ ಹೋಗಬೇಡಿ. ಹಾಸನದಿಂದ ಬೆಳ್ಳೂರು ಕ್ರಾಸ್ ಮೇಲೆ ಹೋಗಿ ಅಂತ ಮಾತ್ರ ಹೇಳ್ತಿನಿ. ಅದರ ಮೇಲೆ ನಿಮ್ಮ ಇಷ್ಟ. ಮೈಸೂರಿಗೆ ಹೋಗಿ ಹೋಗ್ತಿವಿ ನಮಗೆ ಖುಷಿ ಇದೆ ಅಂತ ಹೇಳಿದ್ರೆ, ಸುತ್ತಿ ಬಳಸಿ ನನ್ ಹತ್ರಾ ಬರೋದು ಬೇಡ, ನೇರಾ ನನ್ನ ಹತ್ತಿರ ಬನ್ನಿ ಎಂದ ಶಾಸಕ ಪ್ರೀತಂಗೌಡ. 

ಮತ್ತೆ ಎಲ್ಲಾ ನದಿ ನೀರು ಹರಿಯೋದು ಸಮುದ್ರಕ್ಕೆನೆ, ಬರೋದು ನಮ್ಮತ್ರಕ್ಕೆನೆ. ನೀವು ಅವರಿಗೆ ಓಟು ಹಾಕಿದ್ರು ನನ್ನ ಹತ್ರಕ್ಕೆ ಬರಬೇಕು. ಯೋಚನೆ ಮಾಡಿ ಬಿಟ್ಟು ಬನ್ನಿ ಅಂತ ಹೇಳ್ತಿನಿ ಎಂದು ಹೇಳಿದ್ದು, ಇದರ ಬೆನ್ನಲ್ಲೇ  ಬಿಜೆಪಿ ಜೆಡಿಎಸ್ ನಡುವೆ ಒಪ್ಪಂದದ ಪರೋಕ್ಷ ಸುಳಿವು ಕೊಟ್ರಾ ಬಿಜೆಪಿ ಶಾಸಕ ಪ್ರೀತಂಗೌಡ ಎಂಬ ಲೆಕ್ಕಾಚಾರ ಶುರುವಾಗಿದೆ. ಜೆಡಿಎಸ್ ಗೆ ಮತ ಹಾಕಿದ್ರೆ ಬಿಜೆಪಿಗೆ ಮತ ನೀಡಿದಂತೆ ಎನ್ನುವ ಮೂಲಕ ಚುನಾವಣೋತ್ತರ ಮೈತ್ರಿಯ ಸುಳಿವು ಕೊಟ್ರಾ ಪ್ರೀತಂ ಗೌಡ?

23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
Read more