ಈಗಾಗಲೇ ಕೊಲಂಬೋಗೆ ಹೋಗಿದ್ದಾಗೆ ಜಮೀರ್ ಹಾಗೂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಕ್ಯಾಸಿನೋಗೆ ಹೋದ ತಕ್ಷಣ ಅಪರಾಧವಲ್ಲ, ಡ್ರಗ್ಸ್ ಜಾಲದಲ್ಲಿ ಇದ್ದಾರಾ ಅನ್ನೋದು ಮುಖ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, (ಸೆ.13) : ಈಗಾಗಲೇ ಕೊಲಂಬೋಗೆ ಹೋಗಿದ್ದಾಗೆ ಜಮೀರ್ ಹಾಗೂ ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಕ್ಯಾಸಿನೋಗೆ ಹೋದ ತಕ್ಷಣ ಅಪರಾಧವಲ್ಲ, ಡ್ರಗ್ಸ್ ಜಾಲದಲ್ಲಿ ಇದ್ದಾರಾ ಅನ್ನೋದು ಮುಖ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡ್ರಗ್ಸ್ ದಂಧೆ ತನಿಖೆ ಬಗ್ಗೆ ಗೃಹ ಸಚಿವರ ಅಚ್ಚರಿ ಹೇಳಿಕೆ: ಹಾಗೆ ಹೇಳಲು ಇವೆ 4 ಪ್ರಮುಖ ಕಾರಣಗಳು
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ಸರ್ಕಾರದ ವೈಫಲ್ಯಗಳನ್ನು ಮುಚ್ಚಲು ಡ್ರಗ್ಸ್ ಕೇಸ್ ಬಗ್ಗೆ ಚರ್ಚೆ ನಡೆಸುತ್ತಿದೆ. ಡ್ರಗ್ಸ್ ಇಡೀ ಸಮಾಜಕ್ಕೆ ಕಂಟಕವಾಗಿದೆ. ಇಂತಹ ಕೇಸ್ ಸಂಬಂಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲಿ ಎಂದರು..