ಬಜೆಟ್ ಮಂಡನೆ ವೇಳೆ ಸದನದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಸುಮಾರು 15 ನಿಮಿಷ ಕುಳಿತಿರುವ ಆಘಾತಕಾರಿ ಘಟನೆ ನಡೆದಿದೆ.
ಬೆಂಗಳೂರು: ಬಜೆಟ್ ಮಂಡನೆ ವೇಳೆ ಸದನದಲ್ಲಿ ಭದ್ರತಾ ಲೋಪ ಉಂಟಾಗಿದೆ. ಶಾಸಕ(MLA) ಅಂತ ಹೇಳಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಹಾಜರಾಗಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಅವರು ಸದನದಲ್ಲಿ(Session) ಕುಳಿತಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ(Karemma) ಆಸನದಲ್ಲಿ ಅಪರಿಚಿತ ವ್ಯಕ್ತಿ ಕುಳಿತಿದ್ದರು. ಈ ಬಗ್ಗೆ ಸ್ಪೀಕರ್‌ಗೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು(Sharanagowda kandakuru) ದೂರು ಕೊಟ್ಟಿದ್ದಾರೆ. ಬಳಿಕ ವಿಧಾನಸಭಾ ಕಾರ್ಯದರ್ಶಿ ಮಾರ್ಷಲ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇವರು ಚಿತ್ರದುರ್ಗದಲ್ಲಿ ವಕೀಲರಾಗಿ(Lawyer) ಕಾರ್ಯನಿರ್ವಹಿಸುತ್ತಿದ್ದರು. ಶಾಸಕ ಶರಣಗೌಡ ಕೇಳಿದಾಗ ಮೊಳಕಾಲ್ಮೂರು ಶಾಸಕ ಎಂದು ಹೇಳಿಕೊಂಡಿದ್ದಾರೆ. ಸದ್ಯ ಇವರ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ದಶಪಥ ಹೆದ್ದಾರಿಯಲ್ಲಿ ಸಂಚರಿಸುವವರು ಗಮನವಿಟ್ಟು ಕೇಳಿ: ಟೋಲ್ ಅಷ್ಟೇ ಅಲ್ಲ, ಅತಿ ವೇಗಕ್ಕೂ ದಂಡ..!