ಮಧ್ಯಪ್ರದೇಶ ಬಿಜೆಪಿಯಲ್ಲಿ ಭಿನ್ನಮತ: ಸರ್ಕಾರದ ವಿರುದ್ಧವೇ ಸಿಡಿದೆದ್ದ ಉಮಾ ಭಾರತಿ

Sep 5, 2023, 11:12 AM IST

ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಹೈಕಮಾಂಡ್‌ಗೆ ತಲೆನೋವು ಶುರುವಾಗಿದೆ. ಬಿಜೆಪಿ(BJP) ನಾಯಕರ ವಿರುದ್ಧವೇ ಉಮಾಭಾರತಿ(Uma Bharti) ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ಯಾತ್ರೆಗೆ ಆಹ್ವಾನಿಸದ್ದಕ್ಕೆ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ ಗರಂ ಆಗಿದ್ದಾರೆ. ಉಮಾಭಾರತಿ ಮಾತಿನಿಂದ ಮಧ್ಯಪ್ರದೇಶ(Madyapradesh) ಬಿಜೆಪಿಯಲ್ಲಿ ಸದ್ಯಕ್ಕೆ ಬಿರುಗಾಳಿ ಎದ್ದಂತೆ ಆಗಿದೆ. ಜನಾಶೀರ್ವಾದ ಯಾತ್ರೆಗೆ(Janashirwad yatra) ಭಾನುವಾರ ಚಾಲನೆ ಕೊಟ್ಟಿರುವ ಜೆ.ಪಿ. ನಡ್ಡಾ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಚಿತ್ರಕೂಟದಲ್ಲಿ ಯಾತ್ರೆಗೆ ಚಾಲನೆ ನೀಡಿದರು. 210 ವಿಧಾನಸಭಾ ಕ್ಷೇತ್ರಗಳಲ್ಲಿ ಜನಾಶೀರ್ವಾದ ಯಾತ್ರೆ ಸಾಗಲಿದೆ. ಜನಾಶೀರ್ವಾದ ಯಾತ್ರೆಗೆ ಆಹ್ವಾನವಿಲ್ಲ ಎನ್ನುವುದೇ ಅಸಮಾಧಾನಕ್ಕೆ ಕಾರಣವಾಗಿದೆ. ಯಾತ್ರೆಗೆ ಹೋದರೆ ಮುಜುಗರವಾಗುತ್ತೆ ಅನ್ನೊ ಕಾರಣಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಎಲ್ಲರ ದೃಷ್ಟಿ ನನ್ನ ಮೇಲಿರುತ್ತೆ ಎಂಬ ಅಳುಕು ಬಿಜೆಪಿ ನಾಯಕರಿಗೆ ಇದೆ ಎಂದ ಉಮಾಭಾರತಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  'ಸಮುದ್ರಂ' ಚಿತ್ರತಂಡದಲ್ಲಿ ಭಿನ್ನಮತ: ಠಾಣೆ ಮೆಟ್ಟಿಲೇರಿದ ನಿರ್ಮಾಪಕಿ, ಕ್ಯಾಮರಾಮೆನ್‌ ಕಿತ್ತಾಟ