ರೇವಂತ್‌ ರೆಡ್ಡಿ ತೆಲಂಗಾಣದ ಹೊಸ ಸಿಎಂ, ಡಿ.7ಕ್ಕೆ ಪ್ರಮಾಣವಚನ!

Dec 5, 2023, 8:09 PM IST

ನವದೆಹಲಿ(ಡಿ.5): ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ರೇವಂತ್‌ ರೆಡ್ಡಿ ಅವರನ್ನು ತೆಲಂಗಾಣ ವಿಧಾನಸಭೆಯ ಕಾಂಗ್ರೆಸ್‌ನ ಶಾಸಕಾಂಗ ಸಭೆಯ ನಾಯಕರನ್ನಾಗಿ ಘೋಷಣೆ ಮಾಡಲಾಗಿದೆ. ಡಿಸೆಂಬರ್‌ 7 ರಂದು ರಾಜ್ಯದ 2ನೇ ಮುಖ್ಯಮಂತ್ರಿಯಾಗಿ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್‌ ಇದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.ತೆಲಂಗಾಣ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದ 48 ಗಂಟೆಗಳ ಬಳಿಕ ಎಐಸಿಸಿಯಿಂದ ಈ ನಿರ್ಧಾರ ಬಂದಿದೆ.

ತೆಲಂಗಾಣದಲ್ಲಿ ಸಿಎಂ ರೇಸ್‌ನಲ್ಲಿ ರೇವಂತ್‌ ರೆಡ್ಡಿ V/S ಉತ್ತಮ್‌ ರೆಡ್ಡಿ ? ಯಾರಿಗೆ ಪಟ್ಟ ?

ಈವರೆಗೂ ಅಧಿಕಾರದಲ್ಲಿದ್ದ ಬಿಆರ್‌ಎಸ್‌ ಪಕ್ಷವನ್ನು ಮಣಿಸಿ ಕಾಂಗ್ರೆಸ್‌ ಅಧಿಕಾರಕ್ಕೇರಿದೆ. 2014ರ ಜೂನ್‌ನಲ್ಲಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂದಿತ್ತು. 2014 ಹಾಗೂ 2018ರ ಚುನಾವಣೆಯಲ್ಲಿ ಗೆದ್ದಿದ್ದ ಬಿಆರ್‌ಎಸ್‌ (ಅಂದಿನ ಟಿಆರ್‌ಎಸ್‌) ಅಧಿಕಾರ ಹಿಡಿದಿತ್ತು. ಕೆ. ಚಂದ್ರಶೇಖರ್‌ ರಾವ್‌ ಎರಡೂ ಅವಧಿಯಲ್ಲಿ ರಾಜ್ಯ ಸಿಎಂ ಆಗಿದ್ದರು, ರೇವಂತ್‌ ರೆಡ್ಡಿ ರಾಜ್ಯದ 2ನೇ ಸಿಎಂ ಆಗಲಿದ್ದಾರೆ.