* ಸಿದ್ದರಾಮಯ್ಯ ವಿರುದ್ಧ ಮಾತನಾಡಿದ ಕಾಂಗ್ರೆಸ್ ನಾಯಕ
* ಮುಂದಿನ ಸಾರಿ ಇಲ್ಲಿ ಸ್ಪರ್ಧೆ ಮಾಡಲೇಬೇಡಿ
* ಬಾದಾಮಿ ಹುಲಿಯಂತಿದ್ದ ನನ್ನನ್ನು ಇಲಿ ಮಾಡಲಾಗಿದೆ
* ಬಿಬಿ ಚಿಮ್ಮನಕಟ್ಟಿ ಮಾತಿನಿಂದ ಸಿದ್ದರಾಮಯ್ಯಗೆ ಮುಜುಗರ
ಬೆಂಗಳೂರು, ಬಾಗಲಕೋಟೆ (ಡಿ.08)): ವಿಪಕ್ಷ ನಾಯಕ ಸಿದ್ದರಾಮಯ್ಯಗಾಗಿ (Siddaramaiah) ಬಾದಾಮಿ ಕ್ಷೇತ್ರವನ್ನು ತ್ಯಾಗ ಮಾಡಿದ್ದ ಬಿಬಿ ಚಿಮ್ಮನಕಟ್ಟಿ (BB Chimmanakatti)ಈಗ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಅಂದು ಕ್ಷೇತ್ರ ತ್ಯಾಗ ಮಾಡಿದ್ದೆ ಆದರೆ ಈ ಬಾರಿ ಅಲ್ಲಿಗೆ ಬರಬೇಡಿ ಎಂದು ಸಿದ್ದರಾಮಯ್ಯ ಮುಂದೆಯೇ ಅಸಮಾಧಾನ ಹೊರ ಹಾಕಿದ್ದಾರೆ.
ಬಾದಾಮಿ (Bagalkot) ಹುಲಿಯಂತೆ ಇದ್ದ ನನ್ನನ್ನು ಈಗ ಮೂಲೆಗುಂಪು ಮಾಡಲಾಗಿದೆ. ವಿಧಾನ ಪರಿಷತ್ ನಲ್ಲಿ ((MLC Election)ಸ್ಥಾನ ಕಲ್ಪಿಸಿಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಬಿಬಿ ಚಿಮ್ಮನಕಟ್ಟಿ ಹೇಳಿದ್ದು ಈಗ ಕಾಂಗ್ರೆಸ್ ನಲ್ಲಿಯೇ ನಾಯಕತ್ವದ ಪ್ರಶ್ನೆ ಎದ್ದಿದೆ.
ಪರಿಷತ್ ಕದನ; ಕುಮಾರಸ್ವಾಮಿ ತೀರ್ಮಾನಕ್ಕೆ ಬಿಎಸ್ ವೈ ಮೆಚ್ಚುಗೆ
ಚಿಮ್ಮನಕಟ್ಟಿ ಹೇಳಿದ್ದೇನು? ನನ್ನನ್ನು ಪರಿಷತ್ ಸದಸ್ಯರಾಗಿ ಮಾಡುವುದಾಗಿ ಹೇಳಿದ್ದರು. ಆದರೆ ಪರಿಷತ್ ಸದಸ್ಯರನ್ನಾಗಿ ಮಾಡಿದರಾ? ಈ ಬಗ್ಗೆ ಎಷ್ಟು ನೋವು ಅನುಭವಿಸಿದ್ದೇನೆ ಎಂದು ನನಗೆ ಗೊತ್ತು. ನಾನು ಐದಾರು ಸಲ ಶಾಸಕ ಆಗಿದ್ದೆ. ಮಂತ್ರಿ ಆಗಿದ್ದೆ. ನನ್ನ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಬಂದು ನಿಂತ್ರು. ಈಗ ಅವರು ತಮ್ಮೂರು ಇರುವ ವರುಣಾ ಕ್ಷೇತ್ರದಲ್ಲಿ ನಿಲ್ಲಲಿ ಎಂದು ಚಿಮ್ಮನಕಟ್ಟಿ ಹೇಳಿದ್ದಾರೆ.