ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ : ಸುನಿಲ್‌ ಕುಮಾರ್‌ ಆರೋಪ

ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್ : ಸುನಿಲ್‌ ಕುಮಾರ್‌ ಆರೋಪ

Published : May 15, 2023, 03:40 PM IST

ಪ್ರಮೋದ್ ಮುತಾಲಿಕ್‌ ಹಣಕ್ಕಾಗಿ ಉತ್ತರ ಕರ್ನಾಟಕದಲ್ಲಿ ಹಿಂದುಗಳ ಹತ್ಯೆ ಮಾಡಿಸಿದ್ರು. ಟೈಗರ್ ಗ್ಯಾಂಗ್ ಹೆಸರಲ್ಲಿ ಎಷ್ಟು ಹತ್ಯೆ ಮಾಡಿಸಿದ್ರಿ, ಈ ಬಗ್ಗೆ ದಾಖಲೆ ಕೊಡಬೇಕಾ ಎಂದು ಸುನಿಲ್‌ ಕುಮಾರ್‌ ಪ್ರಶ್ನಿಸಿದ್ದಾರೆ.

ಉಡುಪಿ: ಗೆದ್ದ ಖುಷಿಯಲ್ಲಿ ಆಕ್ರೋಶ ಹೊರಹಾಕಿರುವ ಸುನಿಲ್ ಕುಮಾರ್‌, ಪ್ರಮೋದ್ ಮುತಾಲಿಕ್ ವಿರದ್ಧ ನೇರ ಕಾಳಗಕ್ಕಿಳಿದ್ದಾರೆ. ನಿನ್ನೆ ನಡೆದ ಅಭಿನಂದನಾ ಸಭೆಯಲ್ಲಿ ಸುನಿಲ್ ಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ. ಪ್ರತಿಸ್ಪರ್ಧಿಗಳ ವಿರುದ್ದ ನೇರ ಡೀಲ್ ಆರೋಪವನ್ನು ಸುನಿಲ್‌ ಕುಮಾರ್‌ ಮಾಡಿದ್ದಾರೆ. ನೈಜ ಹಿಂದುತ್ವ ಅಂತಾ ಹೇಳಿ ಡೀಲ್ ಮಾಸ್ಟರ್ ಬಂದ್ರು, ಮೊದಲ ಬಾರಿಗೆ ಪ್ರಮೋದ್ ಮುತಾಲಿಕ್ ಹೆಸರು ಬಳಸುತ್ತಿದ್ದೇನೆ. ಅವರು ಯಾಕೆ ಇಲ್ಲಿಗೆ ಬಂದ್ರು?, ಮುಂದಿನ ಲೋಕಸಭೆಗೆ ಎಲ್ಲಿಗೆ ಡೀಲ್ ಮಾಡಲು ಹೊರಟಿದ್ದೀರಿ. ನಾನು ಹತ್ತು ಬಾರಿ ಹೇಳುತ್ತಿದ್ದೇನೆ ಪ್ರಮೋದ್ ಮುತಾಲಿಕ್ ಒಬ್ಬ ಡೀಲ್ ಮಾಸ್ಟರ್. ಹಣ ಸಿಗುತ್ತೆ ಅಂದ್ರೆ ಏನು ಬೇಕಾದರೂ ಮಾಡಬಲ್ಲರು ಎಂದು ಸುನಿಲ್‌ ಕುಮಾರ್‌ ವಾಗ್ದಾಳಿ ನಡೆಸಿದ್ದಾರೆ. ಸುನಿಲ್‌ ಕುಮಾರ್‌ ಆರೋಪಕ್ಕೆ ಪ್ರಮೋದ್‌ ಮುತಾಲಿಕ್‌ ತಿರುಗೇಟು ನೀಡಿದ್ದು, ಕಾರ್ಕಳ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನ್ಯಾಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. ತೆಂಗಿನ ಕಾಯಿ ಹಿಡಿದು ನ್ಯಾಯ ನೀಡುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.ನಾನು ಕಾಂಗ್ರೆಸ್ ನಿಂದ ಹಣ ಪಡೆದಿಲ್ಲ,ದುಡ್ಡು ಪಡೆದಿದ್ದರೆ ಶಿಕ್ಷೆ ಆಗಲಿ. ಆರೋಪ ಮಾಡಿದವರು ನನ್ನ ಮೇಲಿನ ಆರೋಪ ಸಾಬೀತುಪಡಿಸಲಿ, ಇಲ್ಲ ಆರೋಪಕ್ಕೆ ದಾಖಲೆ ಕೊಡಬೇಕು, ಇಲ್ಲ ಕ್ಷಮೆ ಕೇಳಬೇಕು.ಇವರೆಡು ಮಾಡದಿದ್ದರೆ ತಾಯಿ ನೀನೇ ನೋಡಿಕೊಳ್ಳಬೇಕು. ಅವರಿಗೆ ಸರಿಯಾದ ಶಿಕ್ಷೆ ನೀನೇ ಕೊಡಬೇಕು ಅಂತಾ ಮೂಕಾಂಬಿಕಾ ದೇವಿ ಮೊರೆ ಹೋಗಿದ್ದಾರೆ ಪ್ರಮೋದ್ ಮುತಾಲಿಕ್.

ಇದನ್ನೂ ವೀಕ್ಷಿಸಿ: ಸಿದ್ದು ಸಿಎಂ ಆಗಲೆಂದು ದುರ್ಗಾಂಬಿಕಾ ದೇವಿಗೆ ವಿಶೇಷ ಪೂಜೆ: 101 ತೆಂಗಿನಕಾಯಿ ಒಡೆದ ಅಭಿಮಾನಿಗಳು

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more