Oct 12, 2020, 7:22 PM IST
ದಾವಣಗೆರೆ, (ಅ.12): ಸಚಿವ ಶ್ರೀರಾಮುಲು ಬಳಿ ಇದ್ದ ಆರೋಗ್ಯ ಇಲಾಖೆ ಖಾತೆಯನ್ನು ಸಿಎಂ ಬಿಎಸ್ ಯಡಿಯೂರಪ್ಪ ಬದಲಾಯಿಸಿದ್ದಾರೆ. ಸುಧಾಕರ್ ಅವರಿಗೆ ವೈದ್ಯಕೀಯ ಶಿಕ್ಷಣ ಜತೆ ಹೆಚ್ಚುವರಿಯಾಗಿ ಆರೋಗ್ಯ ಇಲಾಖೆ ಖಾತೆ ನಿಡಲಾಗಿದೆ. ಇನ್ನು ಡಿಸಿಎಂ ಗೋವಿಂದ್ ಕಾರಜೋಳ ಬಳಿ ಇದ್ದ ಹೆಚ್ಚುವರಿ ಖಾತೆ ಸಮಾಜ ಕಲ್ಯಾಣ ಇಲಾಖೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ.
ಖಾತೆ ಬದಲಾವಣೆ: ಸಿಎಂ ಭೇಟಿ ಬಳಿಕ ತಮ್ಮ ಆಪ್ತರ ಬಳಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಶ್ರೀರಾಮುಲು..!
ಖಾತೆ ಬದಲಾವಣೆ ಮಾಡಿದ್ದರಿಂದ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ. ಮತ್ತೊಂದೆಡೆ ಶ್ರೀರಾಮುಲು ಅವರಿಗೆ ಸಮಾಜ ಕಲ್ಯಾಣ ಖಾತೆ ಕೊಟ್ಟಿದ್ಯಾಕೆ ಎನ್ನುವುದಕ್ಕೆ ಸಚಿವರೊಬ್ಬರು ಪ್ರತಿಕ್ರಿಯಿಸಿದ್ದು, ಅದಕ್ಕೆ ಕಾರಣ ಕೊಟ್ಟಿದ್ದಾರೆ.