
ಸಿದ್ದರಾಮಯ್ಯನವರು ದೇವರಾಜ್ ಅರಸು ಅವರ ದಾಖಲೆ ಮುರಿಯುವ ಮೂಲಕ ಪೂರ್ಣಾವಧಿ ಅಧಿಕಾರ ನಡೆಸುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಇದು ಡಿಸಿಎಂ ಡಿಕೆಶಿ ಅವರ ಸಿಎಂ ಕನಸಿಗೆ ಅಡ್ಡಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಇಬ್ಬರ ನಡುವಿನ ಅಧಿಕಾರ ಸಮರದಿಂದ ಸಂಕಷ್ಟಕ್ಕೆ ಸಿಲುಕಿದೆ.
ಅಧಿಕಾರದ ಅಗ್ನಿಕುಂಡಕ್ಕೆ ಪೂರ್ಣಾವಧಿಯ ಪೂರ್ಣಾಹುತಿ..! ರೆಕಾರ್ಡ್ ರಾಮಯ್ಯ ಕೊಟ್ಟಾಯ್ತು ಮತ್ತೊಂದು ದಾಖಲೆಯ ಸಿಗ್ನಲ್..! ಟಗರು ಮೈಲಿಗಲ್ಲು.. ಬಂಡೆಗೆ ಎದುರಾಯ್ತು ಮಹಾ ಸವಾಲು..! ಕೈ ಸಾಮ್ರಾಜ್ಯದೊಳಗೆ ಮೊಳಗಿತು ಎಚ್ಚರಿಕೆಯ ಗಂಟೆ.! ಅರಸು ದಾಖಲೆ ಮುರಿದ ಅರಸನ
ಪಟ್ಟಕ್ಕೆ ಸರ್ಪಕೋಟೆ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..? ಸಿಂಹಾಸನ ಸಮರದಲ್ಲಿ ಏನಿದು ಶುಭ ಸಂದೇಶದ ತಿರುವು.? ಸಿದ್ದು ಪಟ್ಟದ ತಂಟೆಗೆ ಹೋದರೆ ಮುಳುಗುತ್ತಾ ಕಾಂಗ್ರೆಸ್..? ಕೈ ಸಾಮ್ರಾಜ್ಯದಲ್ಲಿ ಶುರುವಾಗಿರೋದು ಗದ್ದುಗೆ ಗುದ್ದಾಟದ ಮತ್ತೊಂದು ಅಧ್ಯಾಯ.
ಅರಸು ದಾಖಲೆ ಮುರಿದ ದಿನವೇ ಅರಸೊತ್ತಿಗೆ ಅಖಾಡದಲ್ಲಿ ತಮ್ಮಾಟ ಮುಗಿದಿಲ್ಲ ಅನ್ನೋ ಸಂದೇಶವನ್ನ ಸಿದ್ದರಾಮಯ್ಯ ಕೊಟ್ಟಿದ್ದಾರೆ. ಅವರು ಕೇವಲ ಸಂದೇಶವನ್ನಷ್ಟೇ ಕೊಟ್ಟಿಲ್ಲ, ತಮ್ಮ ಪಟ್ಟ ರಕ್ಷಣಗೆ ಹಲವು ಬ್ರಹ್ಮಾಸ್ತ್ರಗಳನ್ನ ಸಿದ್ಧಪಡಿಸಿ ಇಟ್ಕೊಂಡಿ ದ್ದಾರೆ. ಹಾಗಿದ್ರೆ, ಈ ವರ್ಷವಿಡೀ ಝಳಪಿಸೋಕೆ ಸಿದ್ದು ಬತ್ತಳಿಕೆಯನ್ನ ಸೇರಿಕೊಂಡಿರೋ ಆ ಬ್ರಹ್ಮಾಸ್ತ್ರಗಳ್ಯಾವು.?
ಸಿದ್ದರಾಮಯ್ಯ ಅವರು ಪಟ್ಟವನ್ನ ಬಿಟ್ಟುಕೊಡೋ ಯಾವ ಲಕ್ಷಣಗಳೂ ಕಾಣಿಸ್ತಾಯಿಲ್ಲ. ಹಾಗಿದ್ರೆ ಡಿಕೆ ಮುಂದಿರೋ ದಾರಿಯೇನು? ಸಿದ್ದು ಆಟ.. ಡಿಕೆ ಹಠ.. ಕಾಂಗ್ರೆಸ್ ಹೈಕಮಾಂಡ್ಗೆ ಸಿಂಹಾಸನ ಸಂಕಟ. ಒಂದ್ರೀತಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ ಕಾಂಗ್ರೆಸ್ ಹೈಕಮಾಂಡ್. ಆದ್ರೆ ಇದೇ ಹೈಕಮಾಂಡ್ ಮೇಲೆಯೇ ಸಂಪೂರ್ಣ ಭಾರ ಹಾಕಿ ಕೂತಿದ್ದಾರೆ ಡಿ.ಕೆ.ಶಿವಕುಮಾರ್