Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

May 26, 2024, 4:40 PM IST

ಲೋಕಸಭಾ ಚುನಾವಣೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ರಾಜ್ಯದಲ್ಲಂತೂ ಚುನಾವಣೆ ಮುಗಿದು 18 ದಿನಗಳೇ ಕಳೆದು ಹೋಗಿವೆ. ಈಗ ಎಲ್ಲರೂ ಕಾಯ್ತಾ ಇರೋದು ಜೂನ್ 4ರ ಆ ನಿರ್ಣಾಯಕ ದಿನವನ್ನ. ದೇಶದಲ್ಲಿ ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ( Lok sabha elections 2024 ) ನಡೀತಾ ಇದೆ. ಶನಿವಾರಕ್ಕೆ ಆರು ಹಂತಗಳು ಕಂಪ್ಲೀಟ್ ಆಗಿದ್ದು, ಇನ್ನುಳಿದಿರೋದು ಒಂದೇ ಒಂದು ಹಂತ. ಅದು ಜೂನ್ 1ನೇ ತಾರೀಕು. ಆ ನಂತ್ರ ಇಡೀ ದೇಶವೇ ಕುತೂಹಲದಿಂದ ಕಾಯ್ತಾ ಇರೋ ಜೂನ್ 4ರ ಡಿಸೈಡಿಂಗ್ Dayಗೆ ಕೌಂಟ್ ಡೌನ್ ಶುರು(Siddaramaiah). ಈ ಬಾರಿ ದೆಹಲಿ ಗದ್ದುಗೆ ಯಾರಿಗೆ..? ನರೇಂದ್ರ ಮೋದಿಯವರು(Narendra modi) ಸತತ 3ನೇ ಬಾರಿ ಪ್ರಧಾನಿ ಪಟ್ಟವೇರ್ತಾರಾ..? ಎನ್.ಡಿ.ಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತಾ..? ಅಥವಾ ಎನ್.ಡಿ.ಎಗೆ ಇಂಡಿಯಾ ಮೈತ್ರಿಕೂಟ ಟಕ್ಕರ್ ಕೊಡುತ್ತಾ..? ಈ ಪ್ರಶ್ನೆಗಳಿಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಉತ್ತರ. ಬಿಜೆಪಿಯವ್ರ(BJP) ಹೇಳ್ತಾರೆ, ದೆಹಲಿಗೆ ಗದ್ದುಗೆ ಈ ಬಾರಿಯೂ ನಮ್ದೇ, ಮೋದಿ ಹ್ಯಾಟ್ರಿಕ್ ಬಾರಿಸೋದು ಗ್ಯಾರಂಟಿ ಅಂತ. ಇಂಡಿಯಾ ಮೈತ್ರಿಕೂಟದವ್ರು ಹೇಳ್ತಾರೆ, ನೋಡ್ತಾ ಇರಿ.. ಈ ಬಾರಿ ದೊಡ್ಡ ಶಾಕ್ ಕಾದಿದೆ ಅಂತ. ತಮ್ಮ ವಾದಗಳಿಗೆ ಇಬ್ಬರೂ ತಮ್ಮದೇ ಲಾಜಿಕ್'ಗಳನ್ನು ಮುಂದಿಡ್ತಾ ಇದ್ದಾರೆ. ಇತ್ತ ಕರ್ನಾಟಕದಲ್ಲೂ ಸೀಟು ಲೆಕ್ಕಾಚಾರ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  Narendra Modi: ರಾಷ್ಟ್ರ ರಾಜಕಾರಣದಲ್ಲಿ ಮರುಕಳಿಸುತ್ತಾ ಸುನಾಮಿ..? ಮೋದಿ ಪಡೆಗೆ ಯಾಕೆ ಬೇಕಂತೆ ಗೊತ್ತಾ 400 ಸ್ಥಾನ..?