
ಬೆಂಗಳೂರು (ಜೂ.20): ಸಿದ್ದು ಸೇನೆ ಮೌನಕ್ಕೆ ಜಾರಿದಂತಿದೆ. ಆದರೆ, ಆ ಮೌನದ ಹಿಂದಿರೋ ಉದ್ದೇಶವೇನು..? ಪಟ್ಟದಾಟದ ಅಸಲಿ ಕಥೆಯೇನು..? ಸಿದ್ದರಾಮಯ್ಯ ಅವರ ಸಿಎಂ ಸಿಂಹಾಸನ ಪಟ್ಟದ ರಕ್ಷಣೆಗೆ ನಿಂತವರೇ ಇಕ್ಕಟ್ಟಿಗೆ ಸಿಲುಕಿದ್ರಾ..?
ಎರಡು ವರ್ಷದ ಹಿಂದೆ, ಒಂದೇ ಸಾಮ್ರಾಜ್ಯದ ಎರಡು ಪಡೆಗಳ ನಡುವೆ ಆರಂಭವಾಗಿರೋ ಈ ಒಳಸಂಘರ್ಷ ರೋಚಕ ಹಂತಕ್ಕೆ ಬಂದು ನಿಂತಿದ್ಯಾ..? ಕೈ ಕೋಟೆಯೊಳಗಿನ ಪಟ್ಟದ ಕದನದ ಅಸಲಿ ಕಥೆಯೇನು?
ಕಾಂಗ್ರೆಸ್‌ನಲ್ಲಿ ಸಿಎಂ ಪಟ್ಟದ ಜೊತೆಗೆ ಸಂಘರ್ಷಕ್ಕೆ ಕಾರಣವಾಗೋ ಮತ್ತೊಂದು ವಿಚಾರ ಎಂದರೆ, ಅದು ಸಚಿವ ಸಂಪುಟ ಪುನರ್ ರಚನೆ ವಿಚಾರ. ಸದ್ಯ ಕಿರಿಯ ಶಾಸಕ ಆಡಿದ್ದ ಮಾತಿಗೆ ಕೆರಳಿ, ಪರೋಕ್ಷವಾಗಿ ಕೌಂಟರ್ ಕೊಟ್ಟಿದ್ದಾರೆ ಹಿರಿಯ ಸಚಿವ.