ಬಿಜೆಪಿ ತಂತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ರಣತಂತ್ರ
ವರುಣದಲ್ಲಿ ಸಿದ್ದರಾಮಯ್ಯಗೂ ಸಿಕ್ತು ಸ್ಟಾರ್‌ಗಳ ಬಲ
ಎರಡು ದಿನ ವರುಣದಲ್ಲೇ ಸಿದ್ದರಾಮಯ್ಯ ಮೊಕ್ಕಾಂ
ಮೈಸೂರು: ವರುಣದಲ್ಲಿ ಸಿದ್ದರಾಮಯ್ಯ ಪರ ಮತಬೇಟೆ ನಡೆಸಲು ಸ್ಟಾರ್‌ಗಳು ಮುಂದಾಗಿದ್ದು, ಇಂದು ನಟಿ ರಮ್ಯಾ, ನಟ ಶಿವರಾಜ್‌ಕುಮಾರ್, ದುನಿಯಾ ವಿಜಯ್ ಮತಬೇಟೆ ನಡೆಸಲಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್ ಪ್ರಚಾರಕ್ಕಿಳಿಸಿದ್ದ ಬಿಜೆಪಿಗೆ ಕಾಂಗ್ರೆಸ್ ಟಕ್ಕರ್ ಕೊಡಲು ಮುಂದಾಗಿದೆ. ಇನ್ನೂ ಎರಡು ದಿನ ಸಿದ್ದರಾಮಯ್ಯ ವರುಣದಲ್ಲೇ ಮೊಕ್ಕಾಂ ಹೂಡಲಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ವರುಣಾ ಕ್ಷೇತ್ರದಲ್ಲಿ ರೋಡ್ ಶೋ ಮೂಲಕ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯಗೆ ಶಕ್ತಿ ತುಂಬಲಿದ್ದಾರೆ. ವರುಣ ಹೈವೋಲ್ಟೇಜ್ ಕ್ಷೇತ್ರವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಗೆಲುವಿಗಾಗಿ ರಣತಂತ್ರವನ್ನು ಹೂಡುತ್ತಿವೆ.
ಇದನ್ನೂ ವೀಕ್ಷಿಸಿ: ಬಜರಂಗದಳ ಬ್ಯಾನ್: ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದ ಕಾಂಗ್ರೆಸ್ ನಾಯಕರು!