MLC Election: ಮತದಾನ ವೇಳೆ ಬಿಎಸ್‌ವೈ ಯಡವಟ್ಟು, ಎದುರಾಳಿ ಅಭ್ಯರ್ಥಿಗೆ ವೋಟ್ ಹಾಕಿದ್ರಾ?

Dec 10, 2021, 8:42 PM IST

ಶಿವಮೊಗ್ಗ, (ಡಿ.10): ಕರ್ನಾಟಕದಲ್ಲಿನ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಆದ್ರೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತದಾನದ ವೇಳೆ ಯಡವಟ್ಟು ಮಾಡಿಕೊಂಡ್ರಾ?  ಪಕ್ಷದ ಅಭ್ಯರ್ಥಿ ಬಿಟ್ಟು ಬೇರೆ ಅಭ್ಯರ್ಥಿಗೆ ಮತ ಚಲಾಯಿಸಿ ಮಿಸ್ಟೇಕ್ ಮಾಡ್ಕೊಂಡು ಬಿಟ್ರಾ.?  ತಮ್ಮ ಎದುರಾಳಿ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದ್ರಾ?  ಈ ಎರಡೂ ಬಿಟ್ಟೂ ಏನಾದ್ರೂ ಯಡವಟ್ಟು ಮಾಡಿಕೊಂಡ್ರಾ? ಹೀಗೆ ಹಲವು ಪ್ರಶ್ನೆಗಳಿಗೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ ನಡೆ ಎಡೆಮಾಡಿಕೊಟ್ಟಿದೆ. 

MLC Election: ನಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಬಹಿರಂಗಪಡಿಸಿದ ಜೆಡಿಎಸ್ ಶಾಸಕ

ಹೌದು...  ಇಂದು(ಡಿ.10) ಬೆಳಿಗ್ಗೆ ಶಿಕಾರಿಪುರದ ಪುರಸಭೆಯಲ್ಲಿ ಬಿಎಸ್‌ವೈ ಬ್ಯಾಲೆಟ್ ಪೇಪರ್‌ನಲ್ಲಿ ಅಭ್ಯರ್ಥಿಗೆ ಮತ ಹಾಕಿದ್ದಾರೆ.  ಮತ ಚಲಾವಣೆಯ ವೇಳೆ ಬಾಕ್ಸ್ ನಿಂದ ಹೊರ ಬರುವಾಗ ಮಿಸ್ಟೇಕ್ ಆಗಿದೆ ಅನ್ಸುತ್ತೆ. ಈ ಹಿನ್ನೆಲೆಯಲ್ಲಿ ಅವರು ಬೇರೆ ಬ್ಯಾಲೆಟ್ ಪೇಪರ್ ಕೊಡ್ತೀರಾ? ಎಂದು ಚುನಾವಣಾ ಅಧಿಕಾರಿಗಳಿಗೆ ಕೇಳಿದ್ದಾರೆ. ಬ್ಯಾಲೆಟ್ ಪೇಪರ್ ಹರಿದರೆ ಮಾತ್ರ ಬೇರೆ ಕೊಡೋದಾಗಿ ಅಧಿಕಾರಿಗಳು ಉತ್ತರ ನೀಡಿದ್ದಾರೆ. ಇದರಿಂದ ಬಿಎಸ್‌ವೈ ಮತ ಹಾಕಿದ್ದಾದರೂ ಯಾರಿಗೆ ಎಂಬ ಗೊಂದಲ ಶುರುವಾಗಿದೆ.