ಸ್ಯಾಂಟ್ರೋ ರವಿ ಬಂಧನ ರಾಜ್ಯ ರಾಜಕೀಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಅಹಮ್ಮದಾಬಾದ್‌ನಲ್ಲಿ ಬಂಧನದ ಹಿಂದೆ ಬಿಜೆಪಿ ಸರ್ಕಾರದ ನಾಟಕವೊಂದಿದೆ ಅನ್ನೋದನ್ನು ವಿಪಕ್ಷಗಳು ಹರಿಹಾಯ್ದಿದೆ.
ಬೆಂಗಳೂರು(ಜ.13) ಹೈಟೆಕ್ ವೇಶ್ಯಾವಾಟಿಕೆ, ಅತ್ಯಾಚಾರ, ಮಹಿಳೆಯರಿಗೆ ವಂಚನೆ ಸೇರಿದಂತೆ ಹಲವು ಪ್ರಕರಣಗಳ ಆರೋಪಿ ಸ್ಯಾಂಟ್ರೋ ರವಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಗುಜರಾತ್ ಪೊಲೀಸರ ನೆರವಿನಿಂದ ಸ್ಯಾಂಟ್ರೋ ರವಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿ ದಿನ ಒಂದೊಂದು ರಾಜ್ಯಕ್ಕೆ ಅಲೆದಾಡಿದ ರವಿ ಕೊನೆಗೆ ಅಹಮ್ಮದಾಬಾದ್‌ನಲ್ಲಿ ಬಂಧಿಸಲಾಗಿದೆ. ನಿನ್ನೆ ಗೃಹ ಸಚಿವ ಅರಗ ಜ್ಞಾನೇಂದ್ರ ಅಹಮ್ಮದಾಬಾದ್‌ಗೆ ತೆರಳಿದ್ದರು. ಇಂದು ರವಿ ಬಂಧನವೂ ಅಹಮ್ಮದಾಬಾದ್‌ನಲ್ಲಿ ಆಗಿದೆ. ಇದು ರವಿಯನ್ನು ರಕ್ಷಿಸಲು ನಡೆದ ನಾಟಕ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಆರೋಪಿಸಿದೆ. ರವಿ ಬಂಧನದ ಕುರಿತು ವಿಪಕ್ಷಗಳ ಆರೋಪವೇನು? ಸ್ಯಾಂಟ್ರೋ ರವಿ ಪತ್ತೆಹಚ್ಚಿ ಬಂಧಿಸಿದ ರೋಚಕ ಪಯಣ ಇಲ್ಲಿದೆ.