Sep 12, 2022, 11:29 AM IST
ಬೆಂಗಳೂರು (ಸೆ. 12): ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರನ್ನ ಮುಂದಿನ ಚುನಾವಣೆಯಲ್ಲಿ ಶತಾಯಗತಾಯ ಸೋಲಿಸಲೇ ಬೇಕು ಅನ್ನೋ ಪಣ ತೊಟ್ಟಿದ್ದಾರೆ. ಗಾಂಧಿ ವಂಶದ ಕುಡಿ ಪ್ರಧಾನಿಯಾಗಿ ಭಾರತವನ್ನ ಮುನ್ನಡೆಸೋ ಮಹದಾಸೆಯನ್ನ ಹೊತ್ತು ಕೊಂಡಿದ್ದಾರೆ. ಯುದ್ಧಕಾಲೇ ಶಸ್ತ್ರಾಭ್ಯಾಸೆ ಆಗೋದು ಬೇಡ ಅಂತಲೇ ಈಗಿನಿಂದಲೇ ಸಮರಾಭ್ಯಾಸ ಶುರು ಮಾಡಿದ್ದಾರೆ. ಅದರ ಅಂಗವೇ ಭಾರತ್ ಜೋಡೋ ಯಾತ್ರೆ.
ಏನಿದು ಭಾರತ್ ಜೋಡೋ ಯಾತ್ರೆ..? ಎಲ್ಲಿಂದ ಎಲ್ಲಿಗೆ ಈ ಯಾತ್ರೆ ನಡೆಯಲಿದೆ..? ಇದೊಂದು ಯಾತ್ರೆಯಿಂದ ಮೋದಿ ಸೋಲಿನ ರುಚಿ ನೋಡ್ತಾರಾ..? ಭಾರತದ ರಾಜಕೀಯದಲ್ಲಿ ಪಾದಯಾತ್ರೆಗಳು ಸೃಷ್ಟಿಸಿದ ಸಂಚಲನ ಎಂಥದ್ದು..? ಎನ್ನುವುದರ ಕಂಪ್ಲೀಟ್ ವರದಿ. ದೇಶದ ರಾಜಕೀಯವನ್ನು ಬದಲಿಸಿದ ಸಾಕಷ್ಟು ಪಾದಯಾತ್ರೆಗಳು ಭಾರತದಲ್ಲಿ ನಡೆದಿದೆ. ಶೀಘ್ರದಲ್ಲಿಯೇ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೂ ಬರಲಿದೆ. ಅದಕ್ಕಾಗಿ ರಾಜ್ಯ ಕಾಂಗ್ರೆಸ್ ಕೂಡ ಸಮರೋಪಾದಿಯಲ್ಲಿ ಸಿದ್ದತೆ ನಡೆಸಿದೆ.
'ತಮಿಳು ಹುಡ್ಗಿಯನ್ನು ಮದುವೆ ಮಾಡಿಸಿಕೊಡ್ತೇವೆ', ಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಮದುವೆ ಪ್ರಪೋಸಲ್!
ಭಾರತದ ರಾಜಕೀಯ ಹಾಗೂ ಪಾದಯಾತ್ರೆಗಳಿಗೆ ದೊಡ್ಡ ಇತಿಹಾಸವಿದೆ.. ಮಹಾತ್ಮ ಗಾಂಧಿಯಿಂದ ಹಿಡಿದು ರಾಹುಲ್ ಗಾಂಧಿ ತನಕ ಅನೇಕ ನಾಯಕರು ಪಾದಯಾತ್ರೆ ಮೂಲಕ ರಾಜಕೀಯವನ್ನೇ ಬದಲಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯಿಂದ ದೊಡ್ಡ ಲಾಭದ ನಿರೀಕ್ಷೆಯಲ್ಲಿರೋ ಕಾಂಗ್ರೆಸ್ ತನ್ನ ಕೆಲವು ಹೆಜ್ಜೆಗಳಿಂದ ನಿರೀಕ್ಷಿತ ಮಟ್ಟವನ್ನ ತಲುಪೋಕೆ ವಿಫಲವಾಗುತ್ತಾ ಅನ್ನೋ ಪ್ರಶ್ನೆ ಕಾಡೋಕೆ ಶುರುವಾಗಿದೆ.